ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್​ಕುಮಾರ್ ಅಕಾಡೆಮಿ ಸಾಧನೆ; 8 ಮಂದಿ ಪಾಸ್

| Updated By: ರಾಜೇಶ್ ದುಗ್ಗುಮನೆ

Updated on: May 30, 2022 | 9:57 PM

ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಅಣ್ಣಾವ್ರ ಕುಟುಂಬ ಆರಂಭಿಸಿದೆ. ರಾಜ್​ಕುಮಾರ್ ಹೆಸರಲ್ಲಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಅಕಾಡೆಮಿ ಮೂಲಕ ತರಬೇತಿ ನೀಡಲಾಗುತ್ತದೆ. ಹಲವರು ರ‍್ಯಾಂಕ್ ಪಡೆದು ಈ ಅಕಾಡೆಮಿಯಿಂದ ಪಾಸ್ ಆಗುತ್ತಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್​ಕುಮಾರ್ ಅಕಾಡೆಮಿ ಸಾಧನೆ; 8 ಮಂದಿ ಪಾಸ್
ರಾಜ್​ಕುಮಾರ್
Follow us on

2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ (UPSC) ಇಂದು  (ಮೇ 30) ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ದೇಶದ 600ಕ್ಕೂ ಅಧಿಕ ಮಂದಿ ಪಾಸ್ ಆಗಿದ್ದಾರೆ. ಕರ್ನಾಟಕದ (Karnataka) 20ಕ್ಕೂ ಅಧಿಕ ಮಂದಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷ ಎಂದರೆ, ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್​ ಅಕಾಡೆಮಿಯಿಂದ ಈ ಬಾರಿ 8 ಜನರು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಒಳ್ಳೆಯ ಆಶಯ ಇಟ್ಟುಕೊಂಡು ರಾಜ್​ ಕುಟುಂಬ (Raj Family) ಆರಂಭಿಸಿರುವ ಕೆಲಸಕ್ಕೆ ಈ ಎಂಟುಮಂದಿ ಶ್ರೇಯಸ್ಸು ತಂದಿದ್ದಾರೆ.

ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಅಣ್ಣಾವ್ರ ಕುಟುಂಬ ಆರಂಭಿಸಿದೆ. ರಾಜ್​ಕುಮಾರ್ ಹೆಸರಲ್ಲಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಅಕಾಡೆಮಿ ಮೂಲಕ ತರಬೇತಿ ನೀಡಲಾಗುತ್ತದೆ. ಹಲವರು ರ‍್ಯಾಂಕ್ ಪಡೆದು ಈ ಅಕಾಡೆಮಿಯಿಂದ ಪಾಸ್ ಆಗುತ್ತಿದ್ದಾರೆ. ಈ ಬಾರಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಕಾಡೆಮಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಂಟು ಮಂದಿಗೆ ಅಕಾಡೆಮಿ ಕಡೆಯಿಂದ ಶುಭ ಕೋರಲಾಗಿದೆ.

ಇದನ್ನೂ ಓದಿ: ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್; ಶೋ ಗೆದ್ದವರಿಗೆ ಇದೆ ವಿಶೇಷ ಬಹುಮಾನ

ಇದನ್ನೂ ಓದಿ
ನಾನ್​-ವೆಜ್​​ ವಿಚಾರದಲ್ಲಿ ಅನು ಪ್ರಭಾಕರ್​ಗೆ ರೇಗಿಸಿದ್ದ ಪುನೀತ್​ ರಾಜ್​ಕುಮಾರ್​; ನೆನಪಿನ ಪುಟ ತೆರೆದ ನಟಿ
ತಿರುಪತಿಯಲ್ಲಿ ಕನ್ನಡಿಗರಿಗೆ ಇದೆಂಥಾ ಅವಮಾನ? ವಾಹನಕ್ಕೆ ಕನ್ನಡ ಬಾವುಟ, ನಟ ಪುನೀತ್ ಫೋಟೋ ಅಂಟಿಸಿಕೊಂಡವರಿಗೆ ಕೆಟ್ಟ ಅನುಭವ
Ashwini Puneeth Rajkumar: ಡಾ.ರಾಜ್​ ಜನ್ಮದಿನ ಹಿನ್ನೆಲೆ; ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಶ್ವಿನಿ ಪುನೀತ್
‘ಜೇಮ್ಸ್​’ ಚಿತ್ರದಲ್ಲಿ ಅಪ್ಪು ವಾಯ್ಸ್ ರೀ-ಕ್ರಿಯೇಟ್​; ಶಾಕ್​ ಆದ ಅಶ್ವಿನಿ ಪುನೀತ್​ ರಾಜ್​ಕುಮಾರ್

ಬೆನಕ ಪ್ರಸಾದ್ 92ನೇ ರ‍್ಯಾಂಕ್ ಬಂದಿದ್ದಾರೆ. ನಿಖಿಲ್ ಬಿ. ಪಾಟೀಲ್ 139ನೇ ರ‍್ಯಾಂಕ್, ರಾಜೇಶ್ ಪೊನ್ನಪ್ಪ 222ನೇ ರ‍್ಯಾಂಕ್, ದೀಪಕ್ ಆರ್. ಶೇಟ್ 311ನೇ ರ‍್ಯಾಂಕ್, ಮೇಘನಾ ಕೆ.ಟಿ. 425ನೇ ರ‍್ಯಾಂಕ್, ಪ್ರೀತಿ ಪಂಚಾಲ್ 449ನೇ ರ‍್ಯಾಂಕ್, ರವಿನಂದನ್ ಬಿ.ಎಂ. 455ನೇ ರ‍್ಯಾಂಕ್, ಪ್ರಶಾಂತ್ ಕುಮಾರ್ ಬಿ.ಒ. 641ನೇ ರ‍್ಯಾಂಕ್ ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್

ರಾಜ್​ಕುಮಾರ್ ಅಕಾಡೆಮಿಯಿಂದ ಪ್ರಕಟಣೆ ಒಂದನ್ನು ಹೊರಡಿಸಲಾಗಿದೆ. ಈ ಪ್ರಕಟಣೆಯಲ್ಲಿ ಯಾರ್ಯಾರಿಗೆ ಯಾವ ರ್‍ಯಾಂಕ್, ಅವರ ರೋಲ್​ ನಂಬರ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ. ಅವರ ಅಕಾಡೆಮಿಯಿಂದ ಮತ್ತಷ್ಟು ಮಂದಿ ಪಾಸ್ ಆಗಲಿ ಎಂಬುದು ಅನೇಕರ ಆಶಯ.

ಶ್ರುತಿ ಶರ್ಮಾ ದೇಶಕ್ಕೆ ಪ್ರಥಮ

ದೆಹಲಿ ಮೂಲದ ಶ್ರುತಿ ಶರ್ಮಾ ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶ್ರುತಿ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಪ್ರಥಮ ಸ್ಥಾನ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:57 pm, Mon, 30 May 22