ಇನ್ನು ಕೆಲವೇ ದಿನಗಳಲ್ಲಿ ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡಿದೆ. ಉಪೇಂದ್ರ ಅವರು ನಿರ್ದೇಶನ ಮಾಡಿರುವುದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಡಿಸೆಂಬರ್ 20ರಂದು ರಿಲೀಸ್ ಆಗಲಿರುವ ‘ಯುಐ’ ಸಿನಿಮಾ ಬಗ್ಗೆ ಬಾಲಿವುಡ್ ನಟ ಆಮಿರ್ ಖಾನ್ ಅವರು ಮಾತನಾಡಿದ್ದಾರೆ. ವಿಶೇಷ ಏನೆಂದರೆ, ‘ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ’ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ.
‘ಯುಐ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಆಮಿರ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆಮಿರ್ ಖಾನ್ ಅವರು ‘ಯುಐ’ ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ, ಉಪೇಂದ್ರ ಅವರ ಪ್ರತಿಭೆಯನ್ನು ಕೂಡ ಆಮಿರ್ ಖಾನ್ ಹೊಗಳಿದ್ದಾರೆ. ಫ್ಯಾನ್ಸ್ ವಲಯದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Dear Aamir sir, it was a dream come true moment to meet and seek your blessings for UI The Warner Movie 🙏
thanks for your love and support ❤️#UiTheMovieOnDEC20th#Aamirkhan#UppiDirects #Upendra @nimmaupendra #GManoharan @Laharifilm @enterrtainers @kp_sreekanth… pic.twitter.com/EcPcIVgS8z— Upendra (@nimmaupendra) December 11, 2024
‘ನಾನು ಈಗ ಉಪೇಂದ್ರ ಜೊತೆ ಇದ್ದೇನೆ. ಅವರ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆ ಆಗುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ. ಟ್ರೇಲರ್ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೇಲರ್ ಮಾಡಿದ್ದಾರೆ’ ಎಂದು ಆಮಿರ್ ಖಾನ್ ಅವರು ಮನಸಾರೆ ಹೊಗಳಿದ್ದಾರೆ. ಟ್ರೇಲರ್ ಇಷ್ಟ ಆಗಿದ್ದಕ್ಕೆ ಅವರು ಉಪ್ಪಿಯ ಬೆನ್ನು ತಟ್ಟಿದ್ದಾರೆ.
‘ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ. ಹಿಂದಿ ಪ್ರೇಕ್ಷಕರು ಕೂಡ ತುಂಬ ಇಷ್ಟಪಡಲಿದ್ದಾರೆ. ನಾನಂತೂ ಟ್ರೇಲರ್ ನೋಡಿ ಶಾಕ್ ಆದೆ. ನಿಮಗೆ ನಾನು ಶುಭ ಹಾರೈಸುತ್ತೇನೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಆಮಿರ್ ಖಾನ್ ವಿಶ್ ಮಾಡಿದ್ದಾರೆ. ಅವರ ಈ ಮಾತುಗಳನ್ನು ಕೇಳಿದ ಬಳಿಕ ಹಿಂದಿ ಪ್ರೇಕ್ಷಕರಿಗೆ ‘ಯುಐ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ: ಎ ಸಿನಿಮಾ ನೋಡಿದವರೆಲ್ಲ ಡಬ್ಬಾ ಎಂದಿದ್ರು: ಆ ದಿನಗಳ ಬಗ್ಗೆ ಉಪ್ಪಿ ಅಚ್ಚರಿಯ ಮಾತು
ಎಷ್ಟೋ ನಿರ್ದೇಶಕರಿಗೆ ಉಪೇಂದ್ರ ಸ್ಫೂರ್ತಿ. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿಕೊಂಡೇ ಎಷ್ಟೋ ಜನರು ಚಿತ್ರರಂಗಕ್ಕೆ ಬರುವ ಕನಸು ಕಟ್ಟಿಕೊಂಡರು. ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರಂತಹ ಖ್ಯಾತನಾಮರೂ ಕೂಡ ಉಪ್ಪಿಯ ಸಿನಿಮಾಗಳಿಗೆ ಮನಸೋತವರೇ. ಅವರ ಸಾಲಿನಲ್ಲಿ ಆಮಿರ್ ಖಾನ್ ಕೂಡ ಇದ್ದಾರೆ. ಟ್ರೇಲರ್ ಇಷ್ಟಪಟ್ಟಿರುವ ಆಮಿರ್ ಖಾನ್ ಅವರು ‘ಯುಐ’ ಸಿನಿಮಾ ನೋಡಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.