ಅಖಿಲಾ ಜೊತೆ ಹಸೆಮಣೆ ಏರಿದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ

ಭಾನುವಾರ (ಆ.15) ಬೆಳಗಿನ ಜಾವ 5.30ರಿಂದ 6.30ರವರೆಗಿನ ಶುಭ ಮುಹೂರ್ತದಲ್ಲಿ ಅಖಿಲಾಗೆ ಮಂಸೋರೆ ತಾಳಿ ಕಟ್ಟಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಕೂಡ ನೆರವೇರಿದೆ.

ಅಖಿಲಾ ಜೊತೆ ಹಸೆಮಣೆ ಏರಿದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ
ಅಖಿಲಾ ಜೊತೆ ಹಸೆಮಣೆ ಏರಿದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ
Follow us
| Updated By: ಮದನ್​ ಕುಮಾರ್​

Updated on: Aug 15, 2021 | 2:15 PM

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲಿ ಮಂಸೋರೆ ಕೂಡ ಪ್ರಮುಖರು. ಅವರ ಸಿನಿಮಾಗಳು ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿವೆ. ಈಗ ಮಂಸೋರೆ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಬಹುಕಾಲದ ಗೆಳತಿ ಅಖಿಲಾ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ.15ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್​ವೊಂದರಲ್ಲಿ ಅವರ ವಿವಾಹ ಸಮಾರಂಭ ನೆರವೇರಿದೆ. ಕೊವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಕೆಲವೇ ಸ್ನೇಹಿತರು, ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಂಸೋರೆ ಮತ್ತು ಅಖಿಲಾ ಹಸೆಮಣೆ ಏರಿದ್ದಾರೆ.

ಭಾನುವಾರ ಬೆಳಗಿನ ಜಾವ 5.30ರಿಂದ 6.30ರವರೆಗಿನ ಶುಭ ಮುಹೂರ್ತದಲ್ಲಿ ಅಖಿಲಾಗೆ ಮಂಸೋರೆ ತಾಳಿ ಕಟ್ಟಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಕೂಡ ನೆರವೇರಿದೆ. ಮಂಸೋರೆ ಮದುವೆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸ್ನೇಹಿತರು ಮತ್ತು ಅಭಿಮಾನಿಗಳು ನವಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಜುಲೈನಲ್ಲಿ ಮಂಸೋರೆ-ಅಖಿಲಾ ನಿಶ್ಚಿತಾರ್ಥ ಸಿಂಪಲ್​ ಆಗಿ ನಡೆದಿತ್ತು.

ಮಂಸೋರೆ ಈವರೆಗೂ ಮಾಡಿರುವ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ ವಸ್ತುವಿಷಯದ ಆಯ್ಕೆ ಕಾರಣದಿಂದ ಆ ಚಿತ್ರಗಳು ಗಮನ ಸೆಳೆದಿವೆ. ಮಂಸೋರೆ ನಿರ್ದೇಶಿಸಿದ ಮೊದಲ ಸಿನಿಮಾ ‘ಹರಿವು’ ಅ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತು. ಆ ಚಿತ್ರದಲ್ಲಿ ಸಂಚಾರಿ ವಿಜಯ್​ ಅವರು ಪ್ರಮುಖ ಪಾತ್ರ ಮಾಡಿದ್ದರು. ನೈಜ ಘಟನೆ ಆಧರಿಸಿದ ಆ ಸಿನಿಮಾದಲ್ಲಿ ಬಡ ತಂದೆಯ ಕರುಣಾಮಯ ಕಥೆಯನ್ನು ಹೇಳಲಾಗಿತ್ತು.

ನಂತರ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್​ ಮುಖ್ಯಭೂಮಿಕೆ ನಿಭಾಯಿಸಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದರು. ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಆ ಸಿನಿಮಾ ಯಶಸ್ವಿ ಆಯಿತು. ಬಳಿಕ ಮಂಸೋರೆ ಆ್ಯಕ್ಷನ್​-ಕಟ್​ ಹೇಳಿದ್ದು ‘ಆ್ಯಕ್ಟ್​ 1978’ ಚಿತ್ರಕ್ಕೆ. ಈ ಸಿನಿಮಾದಲ್ಲಿ ಸರ್ಕಾರಿ ಅಧಿಕಾರಿಗಳ ಲಂಚಾವತಾರವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಹಂಸಲೇಖ, ದರ್ಶನ್​ ಮುಂತಾದವರು ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಪ್ರಸ್ತುತ ರಾಣಿ ಅಬ್ಬಕ್ಕನ ಕುರಿತ ಸಿನಿಮಾವನ್ನು ಮಂಸೋರೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:

‘Act 1978’ ಚಿತ್ರ ಮಿಸ್​ ಮಾಡಿಕೊಂಡವರಿಗೆ ಇಲ್ಲಿದೆ ಗುಡ್​ ನ್ಯೂಸ್​! ಮನೆಯಲ್ಲೇ ಕುಳಿತು ಸಿನಿಮಾ ನೋಡಿ

ಬೆಂಗಳೂರು ಸಿನಿಮೋತ್ಸವ ರದ್ದುಗೊಳಿಸಿ, ಅದರ ಹಣವನ್ನು ಕಾರ್ಮಿಕರಿಗೆ ನೀಡುವಂತೆ ನಿರ್ದೇಶಕ ಮಂಸೋರೆ ಮನವಿ

(ACT 1978 Kannada movie director Mansore marriage with Akhila in Bengaluru)