ಚಿತ್ರರಂಗದ ಜನಪ್ರಿಯ ಫೈಟ್ ಮಾಸ್ಟರ್ಗಳ ಮಧ್ಯೆ ಫೈಟ್ ಶುರುವಾಗಿದೆ. ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೆ ಹಲವು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ಫೈಟ್ ಮಾಸ್ಟರ್ ರವಿ ವರ್ಮಾ (Ravi Varma) ವಿರುದ್ಧ ಅಷ್ಟೆ ಜನಪ್ರಿಯ ಹಾಗೂ ಹಿರಿಯ ಫೈಟ್ ಮಾಸ್ಟರ್ ಆಗಿರುವ ಡ್ಯಾನಿ ಮಾಸ್ಟರ್ ಅಲಿಯಾಸ್ ಢಿಫರೆಂಟ್ ಡ್ಯಾನಿ, ಜೀವ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾರೆ. ಈಗಾಗಲೇ ಫಿಲಂ ಛೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವ ಡ್ಯಾನಿ ಮಾಸ್ಟರ್, ಇಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.
ಡ್ಯಾನಿ ಮಾಸ್ಟರ್ ಹಾಗೂ ರವಿ ವರ್ಮಾ ನಡುವಿನ ಮುನಿಸು ಹಳೆಯದ್ದು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡ್ಯಾನಿ ಮಾಸ್ಟರ್, ‘ರವಿ ವರ್ಮಾ, ನನ್ನ ಕೆಲಸವನ್ನು ತನ್ನ ಕೆಲಸ ಎಂದು ಹೇಳಿಕೊಂಡು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ’ ಎಂದು ಆರೋಪ ಮಾಡಿದ್ದರು. ರವಿವರ್ಮಾ ಸುಳ್ಳುಗಾರ ಎಂದು ಸಹ ಹೇಳಿದ್ದರು. ಇದೀಗ ಡ್ಯಾನಿ, ರವಿ ವರ್ಮಾ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ.
‘ಜಾಕಿ’ ಸಿನಿಮಾದಲ್ಲಿ ಬೆಂಕಿ ಫೈಟ್ ಒಂದಿದೆ. ಡ್ಯಾನಿ ಮಾಸ್ಟರ್ ಹೇಳಿರುವಂತೆ ಆ ಫೈಟ್ ಅನ್ನು ಕಂಪೋಸ್ ಮಾಡಿರುವುದು ಡ್ಯಾನಿ ಮಾಸ್ಟರ್. ಆದರೆ ನಟ ಪ್ರಭುದೇವ ಅವರು ಒಮ್ಮೆ ಪುನೀತ್ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಆ ಫೈಟ್ ದೃಶ್ಯಗಳನ್ನು ನೋಡಿ ರವಿವರ್ಮಾ ಅವರನ್ನು ಕರೆಸಿಕೊಂಡು ಅವರಿಗೆ ಅವಕಾಶ ಕೊಟ್ಟರಂತೆ. ಅದಾದ ಬಳಿಕ ರವಿವರ್ಮಾ, ಟಾಲಿವುಡ್, ಕಾಲಿವುಡ್, ಬಾಲಿವುಡ್ಗಳಲ್ಲಿಯೂ ಫೈಟ್ ನಿರ್ದೇಶಕರಾಗಿ ಖ್ಯಾತರಾದರು. ಆದರೆ ಡ್ಯಾನಿ ಹೇಳಿರುವಂತೆ ಆ ಅವಕಾಶ ಬರಬೇಕಾಗಿದ್ದಿದ್ದು ಅವರಿಗೆ, ಏಕೆಂದರೆ ಪ್ರಭುದೇವ ನೋಡಿ ಮೆಚ್ಚಿಕೊಂಡ ಫೈರ್ ಫೈಟ್ ಅನ್ನು ಕಂಪೋಸ್ ಮಾಡಿದ್ದು ಡ್ಯಾನಿ ಮಾಸ್ಟರ್.
ಇದನ್ನೂ ಓದಿ:ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ
‘‘ನನಗೆ ಪ್ರಭುದೇವ ಸಿಕ್ಕಿಲ್ಲ, ಸಿಕ್ಕರೆ ಖಂಡಿತ ಈ ವಿಷಯ ಕೇಳುತ್ತೇನೆ. ರವಿವರ್ಮಾ, ನನ್ನ ಕೆಲಸ ತೋರಿಸಿ, ಸುಳ್ಳು ಹೇಳಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ’ ಎಂದು ಡ್ಯಾನಿ ಹೇಳಿದ್ದರು. ಇದೀಗ ಇದೇ ವಿಷಯಕ್ಕೆ ಡ್ಯಾನಿ ಮಾಸ್ಟರ್ ಹಾಗೂ ರವಿವರ್ಮಾ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ರವಿ ವರ್ಮಾ, ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ಡ್ಯಾನಿ ಮಾಸ್ಟರ್ ಆರೋಪ ಮಾಡಿದ್ದಾರೆ.
‘ಜಾಕಿ’ ಸಿನಿಮಾಕ್ಕಾಗಿ ನಾನು ಮಾಡಿದ್ದ ಫೈರ್ ಫೈಟ್ ಅನ್ನು ತಾನು ಮಾಡಿದ್ದು ಎಂದು ಪ್ರಭುದೇವ ಬಳಿ ಹೇಳಿಕೊಂಡು ರವಿವರ್ಮಾ ಬಾಲಿವುಡ್ಗೆ ಹೋಗಿರುತ್ತಾರೆ. ಆದರೆ ಅದು ಸುಳ್ಳೆಂದು ನಾನು ಹೇಳಿದ್ದೆ. ಈ ಬಗ್ಗೆ ಮಾತನಾಡಲು ರವಿವರ್ಮಾ ನಾಲ್ಕೈದು ಬಾರಿ ನನಗೆ ಕರೆ ಮಾಡಿದ್ದರು. ಆದರೆ ನಾನು ವೈಯಕ್ತಿಕ ಸಮಸ್ಯೆಗಳಿಂದಾಗಿ ಕರೆ ಸ್ವೀಕರಿಸಿರಲಿಲ್ಲ. ಆಗ ರವಿವರ್ಮಾ, ನನ್ನ ಸಹಾಯಕ ಮಂಜುಗೆ ಕರೆ ಮಾಡಿ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಲ್ಲದೆ, ‘ಮಾಸ್ತಿಗುಡಿ’ ಸಿನಿಮಾ ದುರಂತ ನಡೆದಾಗ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಲೇ ಅವನನ್ನು (ಡ್ಯಾನಿ) ಮುಗಿಸಬೇಕು ಎಂದುಕೊಂಡಿದ್ದೆ, ಆದರೆ ನನ್ನ ಅಕ್ಕ ತಡೆದರು’ ಎಂದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಡ್ಯಾನಿ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ