ಯತಿರಾಜ್​ ಕಾರು ಅಪಘಾತ ಪ್ರಕರಣ; ಪೊಲೀಸರಿಗೆ ಸೂಕ್ತ ಮಾಹಿತಿ ನೀಡದ ಜಗ್ಗೇಶ್, ಟ್ವೀಟ್​ ಡಿಲೀಟ್

ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ, ಆ ಕೆಲಸವನ್ನು ಜಗ್ಗೇಶ್​ ಮಾಡಿಲ್ಲ ಎನ್ನಲಾಗಿದೆ.

ಯತಿರಾಜ್​ ಕಾರು ಅಪಘಾತ ಪ್ರಕರಣ; ಪೊಲೀಸರಿಗೆ ಸೂಕ್ತ ಮಾಹಿತಿ ನೀಡದ ಜಗ್ಗೇಶ್, ಟ್ವೀಟ್​ ಡಿಲೀಟ್
ಜಗ್ಗೇಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 01, 2021 | 5:21 PM

ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಚಲಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಬೆಂಗಳೂರು ಹೈದರಾಬಾದ್ ರಸ್ತೆಯ ಅಗಲಗುರ್ಕಿ ಬಳಿ ಇಂದು (ಜುಲೈ 1) ಮಧ್ಯಾಹ್ನ  ಅಪಘಾತಕ್ಕೆ ತುತ್ತಾಗಿದೆ. ಅಪಘಾತ ನಡೆದ ನಂತರ ಜಗ್ಗೇಶ್​ ಕುಟುಂಬ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ, ಆ ಕೆಲಸವನ್ನು ಜಗ್ಗೇಶ್​ ಮಾಡಿಲ್ಲ. ಕಾರು ಅಪಘಾತದ ಬಗ್ಗೆಯೂ ಪೊಲೀಸರಿಗೆ ದೂರು ನೀಡಿಲ್ಲ. ಇದರಿಂದ ಕಾರು ಅಪಘಾತ ಪ್ರಕರಣದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಪ್ರತ್ಯಕ್ಷದರ್ಶಿಗಳಿಂದ ದೂರು ಪಡೆಯಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಎಸ್​ಪಿ ಜಿ.ಕೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕಾರಿನ ನಂಬರ್ ಮಾಲಿಕತ್ವದ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಸಾರಿಗೆ ಇಲಾಖೆಯ ಮೊರೆ ಹೋಗಿದ್ದಾರೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕುವ ಕಾರ್ಯ ಮುಂದುವರಿದಿದೆ.

ಇನ್ನು, ಜಗ್ಗೇಶ್​ ಅಪಘಾತದ ಬಗ್ಗೆ ಮಾಡಿರುವ ಟ್ವೀಟ್​ಗಳನ್ನು ಡಿಲೀಟ್​ ಮಾಡಿದ್ದು ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ‘ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ. ಹೀಗಾಗಿ, ಹೊರಗೆ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಮಗ ಯತಿರಾಜ್​ ಹೊರಹೋಗಿದ್ದ. ಅವನ ಇಷ್ಟದ ರಸ್ತೆ ಬೆಂಗಳೂರು-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ’ ಎಂದು ಬರೆದುಕೊಂಡಿದ್ದರು. ಆದರೆ, ಅವರ ಖಾತೆಯಲ್ಲಿ ಈ ಟ್ವೀಟ್​ ಕಾಣುತ್ತಿಲ್ಲ.

ಇದನ್ನೂ ಓದಿ:

ಗಂಭೀರ ಅಪಘಾತವಾದರೂ ಜಗ್ಗೇಶ್ ಮಗ ಯತಿರಾಜ್ ಪಾರಾಗಿದ್ದು ಹೇಗೆ? ಪ್ರತಿಕ್ರಿಯಿಸಿದ ನವರಸ ನಾಯಕ

ಅಪಘಾತದಲ್ಲಿ ನಟ ಜಗ್ಗೇಶ್​ ಮಗ ಯತಿರಾಜ್​​ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು; ಇಲ್ಲಿವೆ ಫೋಟೋಗಳು