
ನಟ, ನಿರ್ದೇಶ, ನಿರ್ಮಾಪಕ ಎಸ್. ನಾರಾಯಣ್ (S Narayan) ಅವರು ಇತ್ತೀಚೆಗೆ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಕಾರಣ ಅವರ ಖಾತೆಯಲ್ಲಿ ತೆರೆಯಲಾದ ಫೇಕ್ ಎಕ್ಸ್ (ಟ್ವಿಟರ್) ಖಾತೆ. ಕೆಲವರು ಫ್ಯಾನ್ ಪೇಜ್ಗಳನ್ನು ಮಾಡಿಕೊಂಡು ನಟರ ಹೆಸರಲ್ಲಿ ಒಳ್ಳೆಯ ರೀತಿಯ ಪೋಸ್ಟ್‌ಗಳನ್ನು ಮಾಡಿದ ಉದಾಹರಣೆ ಇದೆ. ಆದರೆ ನಾರಾಯಣ್ ಹೆಸರಲ್ಲಿ ಖಾತೆ ಮಾಡಿದವರು ಬೇರೆ ಹೀರೋಗಳ ಬಗ್ಗೆ ಅವಾಚ್ಯವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಇದು ನಾರಾಯಣ್ ಗಮನಕ್ಕೆ ಬಂದಿದ್ದು ಕಮಿಷನರ್ಗೆ ದೂರು ನೀಡಿದ್ದಾರೆ. ಆ ಬಳಿಕ ಮಾತನಾಡುವಾಗ ಅವರು ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’ ಸಿನಿಮಾ ಡೈಲಾಗ್ ಹೇಳಿದ್ದಾರೆ.
‘ನಾನು ಎಕ್ಸ್ ಖಾತೆ ಆರಂಭಿಸಿಲ್ಲ. ಆದರೆ, ನನ್ನ ಹೆಸರಲ್ಲಿ ಖಾತೆ ತೆಗೆದು, ಸ್ಟಾರ್ ನಟರನ್ನು ತೆಗಳುವ ಹಾಗೆ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಈ ಬಗ್ಗೆ ಗೊತ್ತಾಯಿತು. ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಪುನೀತ್ ರಾಜ್ಕುಮಾರ್ ನಮ್ಮ ಜೊತೆ ಇಲ್ಲ. ನಮ್ಮ ಹಾಗೂ ಅವರ ಸಂಬಂಧ ತುಂಬಾ ಚೆನ್ನಾಗಿತ್ತು. ಅವರ ಬಗ್ಗೆಯೂ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಸುದೀಪ್ ಬಗ್ಗೆ, ಶಿವಣ್ಣನ ಬಗ್ಗೆ, ಎಕ್ಕ ಸಿನಿಮಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿರುವ ರೀತಿ ಪೋಸ್ಟ್ ಮಾಡಲಾಗಿದೆ. ನನ್ನ ಬಗ್ಗೆ ಎಲ್ಲಾ ಹೀರೋಗಳಿಗೂ ಗೊತ್ತು. ಹೀಗಾಗಿ, ಅವರು ಯಾರೂ ತಪ್ಪು ತಿಳಿದುಕೊಂಡಿಲ್ಲ ಎಂದು’ ಎಂದು ಎಸ್. ನಾರಾಯಣ್ ಹೇಳಿದ್ದಾರೆ.
‘ಸೂರ್ಯವಂಶ’ ಸಿನಿಮಾದಲ್ಲಿ ಬಸ್ನಲ್ಲಿ ಪ್ರಯಾಣಿಸುವ ಪರಿಚಯ ಇಲ್ಲದವರನ್ನು ಕರೆದು, ಮಾತನಾಡಿಸಿ ತಲೆಗೆ ಹುಳ ಬಿಡೋದು ದೊಡ್ಡಣ್ಣನ ಕೆಲಸ. ಎಸ್. ನಾರಾಯಣ್ ಬಸ್ನಲ್ಲಿ ಪ್ರಯಾಣಿಸುವಾಗ, ಕೆಳಗೆ ದೊಡ್ಡಣ್ಣ ಕರೆದು ಮಾತನಾಡಿಸುತ್ತಾರೆ. ಆಗ ಎಸ್ ನಾರಾಯಣ್, ಪರಿಚಯ ಇರುವವರಂತೆ ಮಾತನಾಡಿಸಿ ದೊಡ್ಡಣ್ಣನ ತಲೆಗೆ ಹುಳ ಬಿಡುತ್ತಾರೆ. ಆ ಬಳಿಕ ‘ಈ ನನ್ ಮಕ್ಳಿಗೆ ತಿಂದುಬಿಟ್ಟು ಮನೆಯಲ್ಲಿ ಏನು ಕೆಲಸ ಇರಲ್ಲ. ಇಲ್ಲಿ ಬಂದು ಬಿಟ್ಟು ಹೋಗಿ ಬರೋವರಿಗೆಲ್ಲ ತರ್ಲೆ ಮಾಡ್ತಾ ಇರ್ತಾರೆ’ ಎಂದು ಹೇಳುತ್ತಾರೆ. ಈಗಲೂ ಅವರು ಅದೇ ರೀತಿ ಡೈಲಾಗ್ ಹೇಳಿದ್ದಾರೆ.
NO CAPTION NEEDED.. 🤭
JUST WAIT FOR IT…! 🤣🔥#SNARAYAN Sir Massssss..! 💥😎@dasadarshan #DagarDasa pic.twitter.com/0Ty6uuCdnR— 𝙏𝙝𝙞𝙨 𝙠𝙖𝙧𝙩𝙝𝙞’𝙨 𝙓 (@AMkarthik63) July 30, 2025
‘ನನಗೆ ಕೆಟ್ಟ ಹೆಸರು ತರಬೇಕು ಎಂಬುದು ಒಂದಾದರೆ. ಇವರ್ಯಾರಿಗೂ ಕೆಲಸ ಇರಲ್ಲ, ಸುಮ್ಮನೆ ಕೂತ್ಗೊಂಡು ಈ ರೀತಿ ಮಾಡ್ತಾರೆ’ ಎಂದು ಅವರು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ನಾನು 3 ದಶಕಗಳಿಂದ ಇದ್ದೇನೆ. ನನ್ನ ಹೆಸರಿಗೆ ಮಸಿ ಬಳಿಯಲು ಸಾಧ್ಯವಿಲ್ಲ’ ಎಂದು ನಾರಾಯಣ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Thu, 31 July 25