ಎಲ್ಲ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುತ್ತಾರೆ. ತಮ್ಮ ದಿನಚರಿಯ ಬಗ್ಗೆ ಮಾಹಿತಿ ನೀಡಲು, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಹಂಚಿಕೊಳ್ಳಲು, ನೆಚ್ಚಿನ ವ್ಯಕ್ತಿಗಳಿಗೆ ಶುಭಾಶಯ ಕೋರಲು ಸಾಮಾಜಿಕ ಜಾಲತಾಣವನ್ನು ನಟ-ನಟಿಯರು ಬಳಸುತ್ತಾರೆ. ನಟಿಯರು ಪ್ರತಿ ದಿನ ರೀಲ್ಸ್ (Instagram Reels) ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ ಅಮೂಲ್ಯ (Amulya) ಅವರು ರೀಲ್ಸ್ ವಿಚಾರದಲ್ಲಿ ಕೊಂಚ ಹಿಂದುಳಿದುಕೊಂಡಿದ್ದರು. ಈಗ ಅವರು ಮೊದಲ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಗುರು ಶಿಷ್ಯರು’ ಸಿನಿಮಾದ ‘ಆಣೆ ಮಾಡಿ ಹೇಳುತೀನಿ..’ (Ane Madi Helutini song) ಹಾಡಿಗೆ ಅಮೂಲ್ಯ ಅವರು ರೀಲ್ಸ್ ಮಾಡಿದ್ದಾರೆ. ಆ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಲಂಗ ದಾವಣಿ ಧರಿಸಿ ಅವರು ಮನಮೋಹಕವಾಗಿ ಡ್ಯಾನ್ಸ್ ಮಾಡಿದ್ದಾರೆ. ‘ಮೊದಲ ರೀಲ್ಸ್ಗಾಗಿ ನನ್ನ ಫೇವರಿಟ್ ಹಾಡು. ನಿರ್ಮಾಪಕ ತರುಣ್ ಸುಧೀರ್ ಹಾಗೂ ಇಡೀ ‘ಗುರು ಶಿಷ್ಯರು’ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲು ಅಂತ ಹಾರೈಸುತ್ತೇನೆ’ ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
‘ಗುರು ಶಿಷ್ಯರು’ ಸಿನಿಮಾದಲ್ಲಿ ಶರಣ್ ಹಾಗೂ ನಿಶ್ವಿಕಾ ನಾಯ್ಡು ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ‘ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು..’ ಹಾಡು ಜನಮನ ಗೆದ್ದಿದೆ. ಯೂಟ್ಯೂಬ್ನಲ್ಲಿ ಈ ಹಾಡು ಈವರೆಗೂ 25 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆ ಸೂಪರ್ ಹಿಟ್ ಆಗಿದೆ. ಅದೇ ಹಾಡನ್ನು ಆಯ್ಕೆ ಮಾಡಿಕೊಂಡು ಅಮೂಲ್ಯ ರೀಲ್ಸ್ ಮಾಡಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಲ್ಲಿ ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ತಾಯಿ ಆದ ಬಳಿಕ ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸಿದರು. ಈಗ ಅವರನ್ನು ನೋಡಿ ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ. ‘ನೀವು ಎರಡು ಮಕ್ಕಳ ತಾಯಿ ಅಂತ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮದುವೆ ಬಳಿಕ ಅಮೂಲ್ಯ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಆದಷ್ಟು ಬೇಗ ಅವರು ಕಮ್ಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
Published On - 6:36 pm, Sun, 17 July 22