ಕನ್ನಡದ ‘ನಂದ ಲವ್ಸ್ ನಂದಿತ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ನಂದಿತಾ ಶ್ವೇತಾ ಅವರ ತಂದೆ ಇಂದು (ಸೆಪ್ಟೆಂಬರ್ 19) ನಿಧನ ಹೊಂದಿದ್ದಾರೆ. ಈ ಬಗ್ಗೆ ನಂದಿತಾ ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ನಂದಿತಾ ಅವರ ತಂದೆಯ ಹೆಸರು ಶಿವಸ್ವಾಮಿ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇನ್ನೂ ಬದುಕಿ ಬಾಳಬೇಕಿದ್ದ ಅವರು ನಿಧನ ಹೊಂದಿರುವುದು ನಂದಿತಾ ಶ್ವೇತಾಗೆ ತೀವ್ರ ದುಃಖ ಉಂಟು ಮಾಡಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ತಂದೆ ಶಿವಸ್ವಾಮಿ (54) ಇಂದು ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನಂದಿತಾ ಶ್ವೇತಾ ಸೋಮವಾರ ಟ್ವೀಟ್ ಮಾಡಿದ್ದಾರೆ. ಅನೇಕರು ಇದಕ್ಕೆ ರೆಸ್ಟ್ ಇನ್ ಪೀಸ್ ಎಂದು ಕಮೆಂಟ್ ಮಾಡಿದ್ದಾರೆ. ನಂದಿತಾ ಶ್ವೆತಾ ಆಪ್ತ ಗೆಳತಿ ಹಾಗೂ ನಟಿ ಐಶ್ವರ್ಯಾ ರಾಜೇಶ್ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದರ ಜತೆಗೆ ಸಾಕಷ್ಟು ಸೆಲೆಬ್ರಿಟಿಗಳು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
This is to inform all my wellwishers that My father Mr.shivaswamy aged 54 passed away today. May his soul rest in peace
— Nanditaswetha (@Nanditasweta) September 19, 2021
ನಂದಿತಾ ಶ್ವೇತಾ 2008ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಲೂಸ್ ಮಾದ ಯೋಗೇಶ್ ನಟನೆಯ ‘ನಂದ ಲವ್ಸ್ ನಂದಿತ’ ಅವರ ಮೊದಲ ಸಿನಿಮಾ. ಈ ಚಿತ್ರ ತೆರೆಕಂಡ ನಂತರದಲ್ಲಿ ಅವರು ಮತ್ತೆ ಶಿಕ್ಷಣದತ್ತ ಗಮನ ಹರಿಸಿದರು. ನಾಲ್ಕು ವರ್ಷ ಬಿಟ್ಟು ಅವರಿಗೆ ತಮಿಳಿನಿಂದ ಆಫರ್ ಬಂತು. ನಂತರ ಅಲ್ಲಿಯೇ ಅವರು ಬ್ಯುಸಿ ಆದರು. ನಂತರ ಶ್ವೇತಾ ಕನ್ನಡಕ್ಕೆ ಮರಳಲೇ ಇಲ್ಲ.
ಯಶ್ ನಟನೆಯ ‘ಕಿರಾತಕ 2’ ಸಿನಿಮಾ ಸೆಟ್ಟೇರಿತ್ತು. ನಂತರ ಈ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಸಿನಿಮಾಗೆ ನಂದಿತಾ ನಾಯಕಿ ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡೋಕೆ ಅವರು ರೆಡಿ ಆಗಿದ್ದರು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಇದನ್ನೂ ಓದಿ: ಸ್ವರ್ಗದಲ್ಲಿ ಮೇರು ನಟರ ಜತೆ ಸಂಚಾರಿ ವಿಜಯ್ ಮಾತು; ಸಿನಿಮಾ ಪ್ರಚಾರಕ್ಕೆ ಹೀಗೊಂದು ಮಾರ್ಗ
ಅಳಿಸಿದ್ದಾಯ್ತು, ನಗಿಸಿದ್ದಾಯ್ತು.. ಈಗ ಭಯ ಹುಟ್ಟಿಸುವ ಲುಕ್ನಲ್ಲಿ ಶ್ರುತಿ; ಹುಟ್ಟುಹಬ್ಬಕ್ಕೆ ಖಡಕ್ ಪೋಸ್ಟರ್