ಬಾಡಿ ಶೇಮಿಂಗ್​​ಗೆ ಒಳಗಾದ ನಟಿ ಕತ್ರಿನಾ ಕೈಫ್​​ ಬೆಂಬಲಕ್ಕೆ ನಿಂತ ನಟಿ ರಮ್ಯಾ

ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿಯೇ ತುಸು ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಅದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕೆಲ ಜನಪ್ರಿಯ ವ್ಯಕ್ತಿಗಳೇ ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಅದರ ಬೆನ್ನಲ್ಲೆ ಬಾಲಿವುಡ್​​ನ ಹಲವಾರು ಮಂದಿ ಕತ್ರಿನಾ ಬೆಂಬಲಕ್ಕೆ ಧಾವಿಸಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಬಾಡಿ ಶೇಮಿಂಗ್​​ಗೆ ಒಳಗಾದ ನಟಿ ಕತ್ರಿನಾ ಕೈಫ್​​ ಬೆಂಬಲಕ್ಕೆ ನಿಂತ ನಟಿ ರಮ್ಯಾ
Ramya Katrina

Updated on: Sep 18, 2026 | 7:26 PM

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಕಳೆದ ವರ್ಷ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆರೈಕೆಯಲ್ಲಿ ನಿರತರಾಗಿರುವ ಕತ್ರಿನಾ ಕೈಫ್ ಚಿತ್ರರಂಗದಿಂದ ಬಹುತೇಕ ದೂರವೇ ಉಳಿದಿದ್ದಾರೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಹ ಅವರು ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಇತ್ತೀಚೆಗಷ್ಟೆ ಅವರು ಅಂಬಾನಿ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಪತಿ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಂಡಿದ್ದರು. ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿಯೇ ತುಸು ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಅದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕೆಲ ಜನಪ್ರಿಯ ವ್ಯಕ್ತಿಗಳೇ ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಅದರ ಬೆನ್ನಲ್ಲೆ ಬಾಲಿವುಡ್​​ನ ಹಲವಾರು ಮಂದಿ ಕತ್ರಿನಾ ಬೆಂಬಲಕ್ಕೆ ಧಾವಿಸಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಕತ್ರಿನಾ ಕೈಫ್ ಸಪೂರ ದೇಹದವರಾಗಿದ್ದಾಗಿನ ಹಾಗೂ ಈಗಿನ ಚಿತ್ರವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ‘ವೃತ್ತಿಯ ಉತ್ತುಂಗದಲ್ಲಿದ್ದಾಗ’ ಹಾಗೂ ‘ಈಗ’ ಎಂದು ಕಮೆಂಟುಗಳನ್ನು ಮಾಡುತ್ತಿದ್ದಾರೆ. ಇದನ್ನು ಕಟುವಾಗಿ ವಿರೋಧಿಸಿರುವ ನಟಿ ರಮ್ಯಾ, ‘ಆಕೆಯ ‘ಪ್ರೈಮ್’ (ವೃತ್ತಿಯ ಉತ್ತುಂಗ) ಯಾವುದು? ಮಹಿಳೆ ಎಕ್ಸ್​​ಪೈರಿ ಡೇಟ್​​ ಜೊತೆಗೆ ಬರುತ್ತಾಳೇನು? ಆಕೆಯ ‘ಪ್ರೈಮ್’ ಯಾವುದೆಂದು ನೀವು ಹೇಗೆ ನಿರ್ಧಾರ ಮಾಡುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ.

ಮ್ಯಾಗಜಿನ್ ಕವರ್​​ಗೆ ಫೋಸು ಕೊಡುವಂಥಹಾ ದೇಹ ಇರುವುದೇ ಪ್ರೈಂ ಎನ್ನುವುದಾ? ಮಹಿಳೆಯ ದೇಹ ಬದಲಾಗುತ್ತಿರುತ್ತದೆ. ಗರ್ಭಾವಸ್ಥೆ, ಹೆರಿಗೆಯ ಬಳಿಕ, ಋತುಸ್ರಾವ ನಿಲ್ಲುವ ಸಂದರ್ಭ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ದೇಹದ ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. ಹಾಗೆಂದು ಅದು ಆಕೆಯ ಪತನ ಅಲ್ಲ ಬದಲಿಗೆ ಆಕೆ ಬದುಕುವ ಶೈಲಿಯೇ ಅದು. ‘ಪೈಂ’ ಎಂದು ನೀವು ಕರೆಯುತ್ತಿರುವುದು ನಿಜವಾಗಿಯೂ ಪ್ರೈಂ ಅಲ್ಲ. ಸಪೂರ ಸೊಂಟ ಇದ್ದೊಡನೆ ಅದು ನಟಿಯೊಬ್ಬಳ ಉತ್ತುಂಗದ ಸಮಯ ಎಂದೇನೂ ಅಲ್ಲ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಆಸ್ಕರ್​​ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?

‘ಪ್ರೈಂ’ ಎಂದರೆ ಆಕೆಗೆ ಇಷ್ಟವಾಗುವ ಕೆಲಸ ಮಾಡುವುದು, ಖುಷಿಯಾಗಿರುವುದು, ಸ್ವಾತಂತ್ರ್ಯವಾಗಿರುವುದು, ಕತ್ರಿನಾ ಈಗ ಆಕೆಯ ‘ಪ್ರೈಂ’ನಲ್ಲಿದ್ದಾರೆ. ಆಕೆಗೆ ಬೇಕಿರುವ ಬದುಕನ್ನು ಅವರು ಬದುಕುತ್ತಿದ್ದಾರೆ. ಆ ಬದುಕನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಂದೇಶವನ್ನು ಓದುತ್ತಿರುವ ಪ್ರತಿಯೊಬ್ಬ ಮಹಿಳೆಯೂ ಆಕೆಯ ಪ್ರೈಂನಲ್ಲಿ ಇದ್ದಾರೆ. ಮಹಿಳೆ ಹುಟ್ಟಿದಾಗಿನಿಂದ ಕೊನೆಯ ದಿನದ ವರೆಗೂ ಆಕೆಯ ಪ್ರೈಂನಲ್ಲೇ ಇರುತ್ತಾಳೆ’ ಎಂದಿದ್ದಾರೆ ನಟಿ ರಮ್ಯಾ.

ಕತ್ರಿನಾ ಕೈಫ್ ಪರವಾಗಿ ಹಲವಾರು ಮಂದಿ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ನಟ ಅಲಿ ಜಫರ್, ಸೊನಾರಿಕಾ ಇನ್ನೂ ಹಲವಾರು ಸೆಲೆಬ್ರಿಟಿಗಳು ಕತ್ರಿನಾ ಕೈಫ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Fri, 18 September 26

Loading...
Unable to load recommendations.
Follow Us