‘ಕಾಂತಾರ’ ಚಿತ್ರತಂಡಕ್ಕೆ ಅರ್ಧ ಸಿಹಿ.. ಅರ್ಧ ಕಹಿ..: ಕೋರ್ಟ್​ ತೀರ್ಪಿನ ಬಗ್ಗೆ ವಕೀಲ ಶಶಿರಾಜ್ ಕಾವೂರು ಹೇಳಿದ್ದಿಷ್ಟು

‘ಕಾಂತಾರ’ ಚಿತ್ರತಂಡಕ್ಕೆ ಒಂದು ಕೋರ್ಟ್​ನಿಂದ ಸಿಹಿ ಸಿಕ್ಕದ್ರೆ, ಮತ್ತೊಂದು ಕೋರ್ಟ್​ನಲ್ಲಿ ಕಹಿ ಸಿಕ್ಕಿದೆ. ಇನ್ನು ಈ ಬಗ್ಗೆ ಹಾಡಿನ ಸಾಹಿತ್ಯ ಬರೆದ ವಕೀಲ ಶಶಿರಾಜ್ ಕಾವೂರು ಟಿವಿ9ಗೆ ಕೋರ್ಟ್​ ತೀರ್ಪಿನ ಬಗ್ಗೆ ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.

‘ಕಾಂತಾರ’ ಚಿತ್ರತಂಡಕ್ಕೆ ಅರ್ಧ ಸಿಹಿ.. ಅರ್ಧ ಕಹಿ..: ಕೋರ್ಟ್​ ತೀರ್ಪಿನ ಬಗ್ಗೆ ವಕೀಲ ಶಶಿರಾಜ್ ಕಾವೂರು ಹೇಳಿದ್ದಿಷ್ಟು
kantara
TV9kannada Web Team

| Edited By: Ramesh B Jawalagera

Nov 25, 2022 | 5:30 PM

ಕಾಂತಾರ ಸಿನಿಮಾ ಬಿಗ್ ಸಕ್ಸಸ್ ಕಂಡಿದೆ. ಕನ್ನಡ. ತಮಿಳು, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ. ಇದರ ಮಧ್ಯೆ ಸಖತ್ ಸೌಂಡ್ ಮಾಡ್ತಿರುವ ‘ವರಾಹ ರೂಪಂ’ ಸಾಂಗ್ (Varaha Roopam Song)​ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಪರ-ವಿರೋಧಗಳು ಚರ್ಚೆಯಾಗ್ತಿವೆ. ತೈಕ್ಕುಡಂ ಬ್ರಿಡ್ಜ್​​ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ಬಗ್ಗೆ ‘ತೈಕ್ಕುಡಂ ಬ್ರಿಡ್ಜ್​’ನವರು ಕೋರ್ಟ್ ಮೊರೆ ಹೋಗಿದ್ದು, ಕಾಂತಾರಾ ಸಿನಿಮಾ ತಂಡಕ್ಕೆ ಒಂದು ಕೋರ್ಟ್​ನಲ್ಲಿ ಗೆಲುವು ಸಿಕ್ಕಿದ್ದು, ಮತ್ತೊಂದು ಕೋರ್ಟ್​ ತೀರ್ಪುಗಾಗಿ ಕಾಂತಾರಾ ಚಿತ್ರತಂಡ ಕಾತರದಿಂದ ಕಾಯುತ್ತಿದೆ.

Varaha Roopam Song: ‘ವರಾಹ ರೂಪಂ.. ಹಾಡು ಬಳಕೆ ಮಾಡಬಹುದು’; ಕೇರಳ ಕೋರ್ಟ್​ನಿಂದ ಹೊಸ ಆದೇಶ

ಹೌದು…. ಕೋಯಿಕ್ಕೋಡ್ ಕೋರ್ಟ್‌ ‘ವರಾಹ ರೂಪಂ’ ಹಾಡಿಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿದ್ದು, ಚಿತ್ರದ ಸಕ್ಸಸ್​ನಲ್ಲಿರುವ ಸಂತಸದಲ್ಲಿರುವ ಚಿತ್ರತಂಡಕ್ಕೆ ಮತ್ತಷ್ಟು ಖುಷಿಕೊಟ್ಟಿದೆ. ಆದ್ರೆ, ಆದ್ರೆ, ಪಾಲಕ್ಕಾಡ್‌ ಕೋರ್ಟ್‌, ಇದೇ ‘ವರಾಹ ರೂಪಂ’ ಹಾಡಿಗೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಹಳೇ ‘ವರಾಹ ರೂಪಂ’ ಹಾಡು ಬಳಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಇದ್ರಿಂದ್ರ ‘ಕಾಂತಾರ’ ಚಿತ್ರತಂಡಕ್ಕೆ ಅರ್ಧ ಸಿಹಿ.. ಅರ್ಧ ಕಹಿ ಸಿಕ್ಕಂತಾಗಿದೆ.

ಎರಡು ನ್ಯಾಯಾಲಯಗಳ ಪೈಕಿ ಒಂದು ಕೋಯಿಕ್ಕೋಡ್ ಕೋರ್ಟ್ ​, ‘ವರಾಹ ರೂಪಂ’ ಹಾಡಿಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿದ್ರೆ, ಪಾಲಕ್ಕಾಡ್‌ ಕೋರ್ಟ್‌ ಅದೇ ‘ವರಾಹ ರೂಪಂ’ ಟ್ಯೂನ್​ಗೆ ತಡೆ ನೀಡಿದೆ. ಒಂದು ಕೋರ್ಟ್ ಪ್ರಕಾರ ಬಳಸಿ ಅಂತಿದ್ರೆ, ಮತ್ತೊಂದು ಕೋರ್ಟ್, ಸಾಂಗ್ ಬಳಸುವಂತಿಲ್ಲ ಎಂದು ಹೇಳಿದೆ. ಇದ್ರಿಂದ ಕಾಂತಾರ ಚಿತ್ರತಂಡ ಸದ್ಯ ಗೊಂದಲಕ್ಕೀಡಾಗಿದೆ. ಇನ್ನು ನ್ಯಾಯಾಲಯಗಳ ತೀರ್ಪಿನ ಬಹಗ್ಗೆ ಸ್ವತಃ ಹಾಡಿನ ಸಾಹಿತ್ಯ ಬರೆದ ವಕೀಲ ಶಶಿರಾಜ್ ಕಾವೂರು ಟಿವಿ9ಗೆ ಪ್ರತಿಕ್ರಿಯಿಸಿದ್ದು ಅದು ಈ ಕೆಳಗಿನಂತಿದೆ.

ವಕೀಲ ಶಶಿರಾಜ್ ಕಾವೂರು ಹೇಳಿದ್ದಿಷ್ಟು

ಕೋಯಿಕ್ಕೋಡ್ ಕೋರ್ಟ್ ನಲ್ಲಿ ತೈಕುಡಂ ಬ್ರಿಡ್ಜ್ ಅವರು ಕೇಸ್ ದಾಖಲಿಸಿದ್ದರು. ನಮ್ಮ ಬಳಿಯು ಕಾಪಿ ರೈಟ್ ಇದೆ ಎಂದು ಮಾತೃಭೂಮಿಯವರು ಪಾಲಕ್ಕಾಡ್ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ಎರಡು ಕೋರ್ಟ್ ನಲ್ಲಿ ಏಕಪಕ್ಷೀಯವಾಗಿ ಆದೇಶ ಕೊಟ್ಟಿತ್ತು. ಹಾಡು ಬಳಕೆ‌ ಮಾಡದಂತೆ ಕೋರ್ಟ್ ತೀರ್ಪು ಕೊಟ್ಟಿತ್ತು. ನಾವು ವಕಾಲತ್ತು ಹಾಕಿ ವಾದ ಪ್ರತಿವಾದ ನಡೆಸಿದ್ದೆವು. ವಾದ ವಿವಾದದ ಬಳಿಕ ಕೋಯಿಕ್ಕೋಡ್ ಕೋರ್ಟ್ ನಲ್ಲಿ ತೈಕುಡಂ ಬ್ರಿಡ್ಜ್ ಅವರ ಅರ್ಜಿ ತಿರಸ್ಕಾರ ಆಗಿದೆ ಎಂದು ವಕೀಲ ಶಶಿರಾಜ್ ಕಾವೂರು ಮಾಹಿತಿ ನೀಡಿದ್ರು.

ಬೇಗ ರಿಲೀಫ್ ಸಿಗಲು ಹೈಕೋರ್ಟ್ ನ ಮೊರೆ ಹೋಗಿದ್ದೆವು. ಕೆಳಗಿನ ಕೋರ್ಟ್ ನಲ್ಲಿ ಆದೇಶ ಆದ ಬಳಿಕ ಬನ್ನಿ. ಅನಾನುಕೂಲ ಆದ್ರೆ ಮತ್ತೆ ಬನ್ನಿ ಎಂಬ ಅಭಿಪ್ರಾಯ ಹೈಕೋರ್ಟ್ ನೀಡಿತ್ತು. ಇದೀಗ ದೇವರ ದಯೆಯಿಂದ, ದೈವಗಳ ಕೃಪೆಯಿಂದ ಒಂದು ಯಶಸ್ಸು ಸಿಕ್ಕಿದೆ. ಮುಂದೆ ಪಾಲಕ್ಕಾಡ್ ಕೋರ್ಟ್ ನ ಆದೇಶಕ್ಕೆ ಕಾಯುತ್ತಿದ್ದೇವೆ. ಆ ನಂತರ ವರಾಹ ರೂಪಂ ಹಾಡು ಮೊದಲಿನ ಹಾಗೆ ಪ್ಲೇ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ರು.

ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಬಹಳ ಸಂಭ್ರಮ ಪಟ್ಟಿದ್ದೇವೆ. ರಿಷಬ್ ಶೆಟ್ಟಿಯವರಿಗೆ ಗೋವಾದಿಂದ ದೆಹಲಿಗೆ ಹೋಗುವಾಗ ವಿಷಯ ಗೊತ್ತಾಗಿ ಕರೆ ಮಾಡಿದ್ದರು. ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಲಕ್ಕಾಡ್ ಕೋರ್ಟ್ ನ ಆದೇಶ ಬರುವವರೆಗೂ ಹಳೆಯ ಹಾಡನ್ನು ಒಟಿಟಿಯಲ್ಲಿ ಪ್ಲೇ ಮಾಡಲ್ಲ. ಪಾಲಕ್ಕಾಡ್ ಕೋರ್ಟ್ ನಲ್ಲಿಯೂ ನ್ಯಾಯದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ರು.

ಹೊಸ ಹಾಡನ್ನು ಒಟಿಟಿ ಪ್ಲ್ಯಾಟ್ ಫಾರಂ ಗೆ ಹಾಕಲಾಗಿಗಿದ್ದು, ಒಂದು ರೀತಿಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶವಿದೆ. ಮೇಲಿನ ಕೋರ್ಟ್ ನಲ್ಲೂ ನಾವು ಚಾಲೆಂಜ್ ಮಾಡುತ್ತೇವೆ. ಸಂಗೀತ ವಿದ್ವಾಂಸರು ಸಂಗೀತ ತಜ್ಞರು ಕೃತಿ ಚೌರ್ಯ ಇಲ್ಲ ಎಂದು ಹೇಳಿದ್ದರು. ಲೆಟರ್ ಹೆಡ್ ನಲ್ಲಿಯೂ ಸಹ ಇದನ್ನು ಬರೆದುಕೊಟ್ಟಿದ್ದರು. ಇದನ್ನು ದೊಡ್ಡ ವಿವಾದ ಮಾಡುವ ಅವಶ್ಯಕತೆ ಇರಲಿಲ್ಲ. ಮಾತುಕತೆ ಮೂಲಕ ಬಗೆಹರಿಸಬಹುದಿತ್ತು. ಇದೊಂದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ಹೊರಹಾಕಿದ್ರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada