Ashika Ranganath: ‘ಟಾಲಿವುಡ್​ಗೆ ಹೋದ ಮಾತ್ರಕ್ಕೆ ಕನ್ನಡ ಮರೆಯಲ್ಲ’; ಅಭಿಮಾನಿಗಳಿಗೆ ಆಶಿಕಾ ರಂಗನಾಥ್​ ಭರವಸೆ

Amigos Movie | Ashika Ranganath: ‘ನಾನು ಹುಟ್ಟಿದಾಗಿನಿಂದ ಮಾತನಾಡಿಕೊಂಡು ಬಂದಿರೋದು ಕನ್ನಡ. ಮುಂದೆ ಮಾತನಾಡುವುದು ಕೂಡ ಕನ್ನಡವನ್ನೇ’ ಎಂದು ಆಶಿಕಾ ರಂಗನಾಥ್​ ಹೇಳಿದ್ದಾರೆ.

Ashika Ranganath: ‘ಟಾಲಿವುಡ್​ಗೆ ಹೋದ ಮಾತ್ರಕ್ಕೆ ಕನ್ನಡ ಮರೆಯಲ್ಲ’; ಅಭಿಮಾನಿಗಳಿಗೆ ಆಶಿಕಾ ರಂಗನಾಥ್​ ಭರವಸೆ
ಆಶಿಕಾ ರಂಗನಾಥ್

Updated on: Feb 12, 2023 | 12:20 PM

ನಟಿ ಅಶಿಕಾ ರಂಗನಾಥ್​ (Ashika Ranganath) ಅವರಿಗೆ ದೊಡ್ಡ ಅಭಿಮಾನಿಗ ಬಳಗ ಇದೆ. ಕನ್ನಡದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಸ್ಟಾರ್​ ನಟರ ಜೊತೆ ಅಭಿನಯಿಸಿ ಖ್ಯಾತಿ ಗಳಿಸಿದ್ದಾರೆ. ಇವರು ಅಪ್ಪಟ ಕನ್ನಡದ ನಟಿ. 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್​ ಈವರೆಗೂ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ. ಇತ್ತೀಚೆಗೆ ಅವರಿಗೆ ತಮಿಳು ಮತ್ತು ತೆಲುಗಿನಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಟಾಲಿವುಡ್​ನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಅಮಿಗೋಸ್​’ ಇತ್ತೀಚೆಗೆ ರಿಲೀಸ್​ ಆಗಿದೆ. ತೆಲುಗು ಚಿತ್ರರಂಗಕ್ಕೆ (Tollywood) ಹೋದ ಬಳಿಕ ಆಶಿಕಾ ರಂಗನಾಥ್​ ಅವರು ಕನ್ನಡದಿಂದ ದೂರವಾಗುತ್ತಾರಾ ಎಂಬ ಅನುಮಾನ ಕೆಲವರಿಗೆ ಇದೆ. ಅದಕ್ಕೆ ಸಂಬಂಧಿಸಿದಂತೆ ಆಶಿಕಾ ಅವರು ಸ್ಪಷ್ಟನೆ ನೀಡಿದ್ದಾರೆ.

ಟಾಲಿವುಡ್​ನಲ್ಲಿ ಕನ್ನಡದ ನಟಿಯರಿಗೆ ತುಂಬ ಬೇಡಿಕೆ ಇದೆ. ಆಶಿಕಾ ರಂಗನಾಥ್​ ಅವರಿಗೂ ಭರ್ಜರಿ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ. ತೆಲುಗಿನಲ್ಲಿ ಸಿನಿಮಾ ಮಾಡಿದ್ದರೂ ಕೂಡ ತಾವು ಎಂದಿಗೂ ಕನ್ನಡ ಭಾಷೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಆಶಿಕಾ ಹೇಳಿದ್ದಾರೆ. ‘ಅಮಿಗೋಸ್​’ ಬಿಡುಗಡೆ ಆದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಲೈವ್​ ಬಂದ ಅವರು ಈ ವಿಚಾರದ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ
‘ಸೈಮಾ’ ಪ್ರಶಸ್ತಿ ಗೆದ್ದ ನಂತರ ಆಶಿಕಾ ರಂಗನಾಥ್​ ಸಂಭ್ರಮಿಸಿದ್ದು ಹೇಗೆ ನೋಡಿ
ಕಪ್ಪುಡುಗೆಯಲ್ಲಿ ಆಶಿಕಾ ರಂಗನಾಥ್ ಮಿಂಚಿಂಗ್; ಇಲ್ಲಿದೆ ನಟಿಯ ಬೋಲ್ಡ್ ಫೋಟೋ
Ashika Ranganath: ಚೀಟಿ ನೋಡಿ ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್​; ಸಂಭಾವನೆ ಗುಟ್ಟು ಇಬ್ಬರಿಗೆ ಮಾತ್ರ ಗೊತ್ತು
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?

‘ತೆಲುಗಿಗೆ ಹೋದ ಬಳಿಕ ಕನ್ನಡ ಮರೆಯಬೇಡಿ, ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಬೇಡಿ ಅಂತ ಎಷ್ಟೋ ಜನ ಕನ್ನಡಿಗರು ನನಗೆ ಹೇಳುತ್ತಿದ್ದಾರೆ. ನೀವೆಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ನನ್ನ ಮಾತೃಭಾಷೆ ಕನ್ನಡ. ನಾನು ಕನ್ನಡವನ್ನೇ ಮಾತನಾಡೋದು. ಸ್ವಂತ ಭಾಷೆಯನ್ನು ಹೇಗೆ ಮರೆಯಲು ಸಾಧ್ಯ?’ ಎಂದಿದ್ದಾರೆ ಆಶಿಕಾ ರಂಗನಾಥ್​.

‘ರೇಮೊ’ ಸಿನಿಮಾ ಕಾರ್ಯಕ್ರಮದಲ್ಲಿ ಸಖತ್ ಆಗಿ ಮಿಂಚಿದ ಆಶಿಕಾ ರಂಗನಾಥ್

‘ನಾನು ಹುಟ್ಟಿದಾಗಿನಿಂದ ಮಾತನಾಡಿಕೊಂಡು ಬಂದಿರೋದು ಕನ್ನಡ. ಮುಂದೆ ಮಾತನಾಡುವುದು ಕೂಡ ಕನ್ನಡವನ್ನೇ. ಕೆಲಸ ಅಂತ ಬಂದಾಗ ನಾವು ಎಲ್ಲಿ ಇರುತ್ತೇವೋ ಅಲ್ಲಿನ ಭಾಷೆ ಕಲಿಯಬೇಕು. ತುಂಬ ಜನರು ಪ್ರಭುದ್ಧರಾಗಿ ಮೆಸೇಜ್​ ಮಾಡುತ್ತಿದ್ದಾರೆ. ನಟ-ನಟಿಯರ ಬಗ್ಗೆ ನಮ್ಮ ಕನ್ನಡಿಗರು ಸ್ವಲ್ಪ ಜಾಸ್ತಿಯೇ ಪೊಸೆಸಿವ್​ ಅಂತ ನನಗೆ ಗೊತ್ತು. ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿ ನಿಮ್ಮೆಲ್ಲರಿಗೆ ಹೆಮ್ಮೆ ಆಗುವಂತೆ ಮಾಡುತ್ತೇನೆ. ನಿಮ್ಮ ಪ್ರೀತಿ ಯಾವಾಗಲೂ ಹೀಗೆಯೇ ಇರಬೇಕು’ ಎಂದು ಆಶಿಕಾ ರಂಗನಾಥ್​ ಹೇಳಿದ್ದಾರೆ.

ಈ ವರ್ಷ ಆಶಿಕಾ ನಟನೆಯ ಮೊದಲ ಸಿನಿಮಾ ‘ಅಮಿಗೋಸ್​’ ಬಿಡುಗಡೆ ಆಗಿದೆ. ‘ಗತವೈಭವ’ ಚಿತ್ರಕ್ಕೆ ಶೇಕಡ 60ರಷ್ಟು ಚಿತ್ರೀಕರಣ ಮುಗಿದಿದೆ. ಇದಲ್ಲದೇ ಪಿಆರ್​ಕೆ ಪ್ರೊಡಕ್ಷನ್​ನ ಒಂದು ಸಿನಿಮಾದಲ್ಲಿ ಆಶಿಕಾ ನಟಿಸುತ್ತಿದ್ದಾರೆ. ‘ಅವತಾರ ಪುರುಷ 2’ ಬಗ್ಗೆ ಮುಂದಿನ ದಿನಗಳಲ್ಲಿ ಅಪ್​ಡೇಟ್​ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:20 pm, Sun, 12 February 23