ಶಂಕರ್​ ನಾಗ್​ ಬಳಸುತ್ತಿದ್ದ ಆ ವಸ್ತುವನ್ನು ಕಂಡರೆ ಅನಂತ್​ ನಾಗ್​ಗೆ ಈಗಲೂ ಭಯ

ಅನಂತ್ ನಾಗ್ ಅವರು ತಮ್ಮ ಸಹೋದರ ಶಂಕರ್ ನಾಗ್ ಅವರನ್ನು ಕಳೆದುಕೊಂಡ ನೋವನ್ನು ಇನ್ನೂ ಅನುಭವಿಸುತ್ತಿದ್ದಾರೆ ಎಂದು ಈ ಮೊದಲು ಹೇಳಿಕೊಂಡಿದ್ದರು. ಶಂಕರ್ ನಾಗ್ ಅವರ ಅಕಾಲಿಕ ಮರಣವು ಅವರ ಕುಟುಂಬಕ್ಕೆ ಆಘಾತವಾಗಿತ್ತು. ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಂಕರ್ ನಾಗ್ ಇದ್ದಿದ್ದರೆ ಈ ಖುಷಿ ಮತ್ತಷ್ಟು ಹೆಚ್ಚುತ್ತಿತ್ತು.

ಶಂಕರ್​ ನಾಗ್​ ಬಳಸುತ್ತಿದ್ದ ಆ ವಸ್ತುವನ್ನು ಕಂಡರೆ ಅನಂತ್​ ನಾಗ್​ಗೆ ಈಗಲೂ ಭಯ
ಶಂಕರ್​-ಅನಂತ್
Edited By:

Updated on: Mar 05, 2025 | 12:02 PM

ಶಂಕರ್ ನಾಗ್ ಅವರು ಇಂದು ನಮ್ಮ ಜೊತೆ ಇಲ್ಲ ಎಂಬುದು ಬೇಸರದ ವಿಚಾರ. ಅವರ ಸಹೋದರ ಅನಂತ್ ನಾಗ್ ಅವರಿಗೆ ಈ ವಿಚಾರ ಈಗಲೂ ಕಾಡುತ್ತದೆಯಂತೆ. ಈ ವಿಚಾರವನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಚಾರ ಅನೇಕರಿಗೆ ಶಾಕಿಂಗ್ ಆಗಿದೆ. ಅವರ ಬಗ್ಗೆ ಅನಂತ್ ನಾಗ್ ಅವರು ಅನೇಕ ಬಾರಿ ಹೇಳಿಕೊಡಿದ್ದಾರೆ. ಈ ರೀತಿ ಹೇಳಿದ ವಿಡಿಯೋ ಇಂದು ಈಗ ವೈರಲ್ ಆಗಿದೆ. ಅದು ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​ನಲ್ಲಿ ಹೇಳಿದ್ದಾಗಿದೆ.

ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಅನಂತ್ ನಾಗ್ ನಟನಾಗಿ ಗುರುತಿಸಿಕೊಂಡರೆ ಅವರ ಸಹೋದರ ಶಂಕರ್ ನಾಗ್ ನಿರ್ದೇಶನ, ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಆಗಿದ್ದರು. ಶಂಕರ್ ನಾಗ್ ಹೋದ ಬಳಿಕದ ಜೀವನ ಹೇಗೆ ಇತ್ತು ಎಂಬುದನ್ನು ಅನಂತ್ ನಾಗ್ ಅವರು ವಿವರಿಸಿದ್ದರು.

‘ನನ್ನ ಅಮ್ಮ ಮೂರು ಮಕ್ಕಳಿಗೆ ಮೂರು ಪ್ಲೇಟ್ ಮಾಡಿದ್ದರು. ಒಂದರಲ್ಲಿ ಅನಂತ್, ಶಂಕರ್, ಒಂದರಲ್ಲಿ ಅಕ್ಕನ ಹೆಸರು ಬರೆದಿದ್ದರು. ಶಂಕರ್ ಹೋದಮೇಲೆ ಅವನ ತಟ್ಟೆಯನ್ನು ನಮ್ಮ ಮನೆಯಲ್ಲೇ ತಂದಿಟ್ಟರು. ಆ ಬಟ್ಟಲು ಕಂಡರೆ ಏನೋ ಒಂದು ರೀತಿಯ ಭಾವನೆ ಕಾಡುತ್ತದೆ. ಪತ್ನಿ ಜೊತೆಯಲ್ಲಿ ಇದ್ದರೆ ತೊಂದರೆ ಇಲ್ಲ. ಒಬ್ಬನೇ ಇದ್ದಾಗ ಕಂಡರೆ ಸಾಕಷ್ಟು ಭಯ ಆಗುತ್ತದೆ’ ಎಂದಿದ್ದರು ಅನಂತ್ ನಾಗ್.

ಇದನ್ನೂ ಓದಿ
ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್; ಅಭಿಷೇಕ್ ಮಗನಿಗೆ ವಿಶೇಷ ಉಡುಗೊರೆ
ಅನಂತ್ ನಾಗ್ ಜೊತೆ ಒಂದಷ್ಟು ಹರಟೆ; ಅನುಭವ ಹಂಚಿಕೊಂಡ ಸುಧಾರಾಣಿ
ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ
ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ

ಅನಂತ್ ನಾಗ್ ಅವರು ಶಂಕರ್ ನಾಗ್ ನೆನಪನ್ನು ಮರೆಯಲು ಆಗಾಗ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ಅದು ಸಾಧ್ಯವಾಗುವುದೇ ಇಲ್ಲ. ಅನಂತ್ ನಾಗ್ ಅವರಿಗೆ ಈ ವರ್ಷ ಪದ್ಮ ಭೂಷಣ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಶಂಕರ್ ನಾಗ್ ಅವರೂ ಇದ್ದಿದ್ದರೆ ಸಾಕಷ್ಟು ಖುಷಿಪಡುತ್ತಿದ್ದರೇನೋ. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: ಅನಂತ್ ನಾಗ್ ಜೊತೆ ಒಂದಷ್ಟು ಹರಟೆ; ಅನುಭವ ಹಂಚಿಕೊಂಡ ಸುಧಾರಾಣಿ

ಅನಂತ್ ನಾಗ್ ಅವರು ಇತ್ತೀಚೆಗೆ ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಅವರ ನಟನೆಯನ್ನು ಗುರುತಿಸಿ ಅವಾರ್ಡ್ ನೀಡಲಾಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ. ಕೊನೆಗೂ ಕನಸು ನನಸಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Wed, 5 March 25