Puneeth Rajkumar: ಕಣ್ಣೀರಿಡುತ್ತಲೇ ಅಪ್ಪು ಸಮಾಧಿಗೆ ಆರತಿ ಬೆಳಗಿದ ನಿರೂಪಕಿ ಅನುಶ್ರೀ

Puneeth Rajkumar Death Anniversary: ಮಗುವಿನಂತಹ ಮನಸ್ಸು ಹೊಂದಿದ್ದ ಪುನೀತ್​ ಈಗ ನಮ್ಮೊಂದಿಗೆ ಇಲ್ಲ. ಆ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಅನುಶ್ರೀ ಅವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದಾರೆ.

Puneeth Rajkumar: ಕಣ್ಣೀರಿಡುತ್ತಲೇ ಅಪ್ಪು ಸಮಾಧಿಗೆ ಆರತಿ ಬೆಳಗಿದ ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ
Follow us
TV9 Web
| Updated By: ಮದನ್​ ಕುಮಾರ್​

Updated on:Oct 29, 2022 | 3:23 PM

ನಿರೂಪಕಿ, ನಟಿ ಅನುಶ್ರೀ (Anchor Anushree) ಅವರು ಹಲವಾರು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಆ ಪೈಕಿ ಅಪ್ಪು ಎಂದರೆ ಅನುಶ್ರೀಗೆ ವಿಶೇಷ ಗೌರವ. ಇಂದು ಅಪ್ಪು ಇಲ್ಲ ಎಂಬ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಇಂದಿಗೆ (ಅ.29) ಒಂದು ವರ್ಷ ಆಗಿದೆ. ಈ ವೇಳೆ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ನಿರೂಪಕಿ ಅನುಶ್ರೀ ಕೂಡ ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್​ ಸಮಾಧಿಗೆ (Puneeth Rajkumar Samadhi) ಆರತಿ ಬೆಳಗಿದ್ದಾರೆ. ಮಗುವಿನಂತಹ ಮನಸ್ಸು ಹೊಂದಿದ್ದ ನಟ ಈಗ ನಮ್ಮೊಂದಿಗೆ ಇಲ್ಲವಲ್ಲ ಎಂಬ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಅವರು ಪೂಜೆ ಸಲ್ಲಿಸಿದಾರೆ.

ಪುನೀತ್​ ರಾಜ್​ಕುಮಾರ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಹೊಸ್ತಿಲಿನಲ್ಲೇ ‘ಗಂಧದ ಗುಡಿ’ ರಿಲೀಸ್​ ಆಯಿತು. ಇದು ಅವರ ಕನಸಿನ ಪ್ರಾಜೆಕ್ಟ್​. ಹಾಗಾಗಿ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಪ್ಪು ಜೊತೆಯೇ ಇಡೀ ಕರ್ನಾಟಕದ ಕಾಡುಗಳನ್ನು ಸುತ್ತಾಡಿದ ಅನುಭವ ಪಡೆಯುತ್ತಿದ್ದಾರೆ. ಇತ್ತೀಚೆಗೆ ಆಯೋಜನೆಗೊಂಡಿದ್ದ ಪ್ರೀಮಿಯರ್​ ಶೋನಲ್ಲಿ ಅನುಶ್ರೀ ಕೂಡ ಭಾಗಿ ಆಗಿದ್ದರು. ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.

‘ಗಂಧದ ಗುಡಿ’ ಬಗ್ಗೆ ಅನುಶ್ರಿ ಹೇಳಿದ್ದೇನು?

ಇದನ್ನೂ ಓದಿ
Image
Gandhada Gudi: ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ; ‘ಗಂಧದ ಗುಡಿ’ಯಲ್ಲಿ ಅಪ್ಪು​ ನೋಡಿದ ಬಳಿಕ ನಿರೂಪಕಿ ಭಾವುಕ ಮಾತು
Image
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Image
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Image
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ

‘ಈ ಸಿನಿಮಾದಲ್ಲಿ ಅವರು ಹೇಳಿರುವ ಒಂದೊಂದು ಮಾತು ಕೂಡ ಕಾಡುತ್ತದೆ. ಅವರಿಗೆ ಎಲ್ಲವೂ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ನಾವು ಈ ಭೂಮಿಗೆ ಬಂದಾಗ ಮಗುವಾಗಿ ಬರುತ್ತೇವೆ. ಹೋಗುವಾಗಲೂ ಮಗುವಿನ ಮನಸ್ಥಿತಿಯಲ್ಲೇ ಎಲ್ಲವನ್ನೂ ಅನುಭವಿಸಿ ಅಪ್ಪು ಹೋಗಿದ್ದಾರೆ. ಅಪ್ಪು ರೀತಿ ಬಾಳುವ ಅವಕಾಶ ಎಷ್ಟು ಜನಕ್ಕೆ ಸಿಗುತ್ತೆ? ಇದನ್ನು ನೋಡಲು ಖುಷಿ ಮತ್ತು ಸಂಕಟ ಎರಡೂ ಆಗುತ್ತದೆ. ಪರಮಾತ್ಮನು ಪ್ರಾಣಿ, ಪಕ್ಷಿ, ಮನುಷ್ಯ, ನಿಸರ್ಗ ಹೀಗೆ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆತ ಸೃಷ್ಟಿ ಮಾಡಿದ ಎಲ್ಲವನ್ನೂ ಸ್ಪರ್ಶಿಸಿ ಹೋಗೋಕೆ ಅಪ್ಪು ಅವರು ಜನ್ಮ ತಾಳಿದ್ದರು ಅಂತ ನನಗೆ ‘ಗಂಧದ ಗುಡಿ’ ನೋಡಿದ ಬಳಿಕ ಅನಿಸಿದು’ ಎಂದು ಅನುಶ್ರೀ ಹೇಳಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ‘ಪವರ್​ ಸ್ಟಾರ್​’. ಆದರೆ ಕಾಡಿಗೆ ಹೋಗಿ ಅಲ್ಲಿನ ಜನರ ಜೊತೆ ಬೆರೆತಿದ್ದರು. ಅಲ್ಲಿನ ಮಕ್ಕಳಿಗೆ ಪುನೀತ್​ ಯಾರೆಂಬುದೇ ಗೊತ್ತಿಲ್ಲ. ಅದಕ್ಕೆ ಅವರು ಬೇಸರ ಮಾಡಿಕೊಳ್ಳದೇ, ‘ಓಹ್​.. ಇಲ್ಲಿ ಕರೆಂಟ್​ ಇಲ್ಲ, ಇಲ್ಲೆಲ್ಲ ಪ್ಲಾಸ್ಟಿಕ್​ ಹಾಕಬಾರದು’ ಎಂಬಂತಹ ವಿಷಯಗಳನ್ನು ತುಂಬ ಸರಳವಾಗಿ ಹೇಳಿದ್ದಾರೆ. ಎಲ್ಲಾದರೂ ಇರು ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಅಂತ ಅವರು ಹಾಡಿದ್ದು ಮನಸ್ಸಿಗೆ ಬಹಳ ಹತ್ತಿರ ಆಯ್ತು’ ಎಂದು ಅನುಶ್ರೀ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:23 pm, Sat, 29 October 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು