ಖ್ಯಾತ ನಟ ಅರ್ಜುನ್ ಸರ್ಜಾ ಎಷ್ಟು ಶ್ರೀಮಂತರು ಗೊತ್ತಾ?

| Updated By: ಮಂಜುನಾಥ ಸಿ.

Updated on: Aug 15, 2024 | 7:29 AM

ಅರ್ಜುನ್ ಸರ್ಜಾ 43 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಎಳವೆಯಲ್ಲಿಯೇ ತಮ್ಮ ಹುರಿಗಟ್ಟಿದ ಮೈಮಾಟ, ಕರಾಟೆಯ ಅದ್ಭುತ ಕೌಶಲ್ಯದಿಂದ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ ಅರ್ಜುನ್ ಸರ್ಜಾ ಎಷ್ಟು ಶ್ರೀಮಂತರು ಗೊತ್ತೆ?

ಖ್ಯಾತ ನಟ ಅರ್ಜುನ್ ಸರ್ಜಾ ಎಷ್ಟು ಶ್ರೀಮಂತರು ಗೊತ್ತಾ?
Follow us on

ನಟ ಅರ್ಜುನ್ ಸರ್ಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟು43 ವರ್ಷಗಳ ಮೇಲಾಗಿದೆ. ಅವರು ಇಂದಿಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೀರೋ ಆಗಿ, ವಿಲನ್ ಆಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಕನ್ನಡದ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಾಯಕನಾಗಿ, ಖಳನಾಯಕನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿಮಾನಿಗಳಿಂದ ಆ್ಯಕ್ಷನ್ ಕಿಂಗ್ ಅರ್ಜುನ್ ಎಂದು ಕರೆಯಲ್ಪಡುವ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು (ಆಗಸ್ಟ್ 15) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅರ್ಜುನ್ಗೆ ಅಭಿಮಾನಿಗಳು ಶುಭಾಶಯ ಕೋರುತ್ತಿರುವಾಗಲೇ ಅವರ ಆಸ್ತಿ ಮೌಲ್ಯದ ಬಗ್ಗೆ ಇಲ್ಲಿದೆ ವಿವರ.

ಅರ್ಜುನ್ ಸರ್ಜಾ ಅವರು ಕನ್ನಡದ ನಟ ಶಕ್ತಿ ಪ್ರಸಾದ್ ಅವರ ಪುತ್ರ. ಅರ್ಜುನ್ 1981ರಲ್ಲಿ ‘ಸಿಂಹದ ಮರಿ ಸೈನ್ಯ’ ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಹೀರೋ ಆಗಿ ಎಂಟ್ರಿ ಕೊಡುವಾಗ ಅವರಿಗೆ ಕೇವಲ 19 ವರ್ಷ ವಯಸ್ಸು. 1984ರಲ್ಲಿ ರಾಮನಾರಾಯಣನ್ ನಿರ್ದೇಶನದ ‘ನಂದ್ರಿ’ ಚಿತ್ರದಲ್ಲಿ ಇಬ್ಬರು ನಾಯಕರಲ್ಲಿ ಒಬ್ಬರಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು ಕನ್ನಡದ ಜೊತೆ ತಮಿಳಿನಲ್ಲೂ ನಟಿಸಿದರು. ನಟನಲ್ಲದೆ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಈಗ ಬರುತ್ತಿರುವ ‘ಮಾರ್ಟಿನ್’ ಚಿತ್ರಕ್ಕೆ ಅವರೇ ಕಥೆ ಬರೆದಿದ್ದಾರೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

ನಿರ್ದೇಶಕ ಶಂಕರ್ ಅವರ ಚೊಚ್ಚಲ ಚಿತ್ರ ‘ಜಂಟಲ್ ಮ್ಯಾನ್’ನಲ್ಲಿ ಅರ್ಜುನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರವು ದೊಡ್ಡ ಹಿಟ್ ಆಯಿತು. ಇದು ಅರ್ಜುನ್ ಅವರ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಮಣಿರತ್ನಂ ಅವರ ‘ಕಡಲ್‌’ನಲ್ಲಿ ವಿಲನ್ ಆಗಿ ನಟಿಸಿದರು. ಒಂದು ಹಂತದ ನಂತರ ಅವರು ತಮಿಳು ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದಾರೆ.

40 ವರ್ಷಗಳಿಂದ ಚಿತ್ರರಂಗದಲ್ಲಿ ಅಧಿಪತ್ಯ ಸಾಧಿಸಿರುವ ಅರ್ಜುನ್ ಸರ್ಜಾ ಅವರ ಆಸ್ತಿ 80 ಕೋಟಿ ರೂಪಾಯಿ. ಪ್ರತಿ ಚಿತ್ರಕ್ಕೆ ಅರ್ಜುನ್ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಬಳಿ ಬಿಎಂಡಬ್ಲ್ಯು ಐ8, ಆಡಿ ಕಾರು ಹಲವು ಬಗೆಯ ಕಾರುಗಳನ್ನು ಹೊಂದಿದ್ದಾರೆ. ಕಟ್ಟಾ ಆಂಜನೇಯ ಭಕ್ತರಾಗಿರುವ ಅವರು ಚೆನ್ನೈನಲ್ಲಿ ಬೃಹತ್ ದೇವಾಲಯವನ್ನೂ ನಿರ್ಮಿಸಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅರ್ಜುನ್‌ಗೆ ಹಲವು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ