AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯೋತ್ಸವದ ದಿನವೇ ಈ ಸೆಲೆಬ್ರಿಟಿಗಳಿಗೆ ಬರ್ತ್​ಡೇ ಸಂಭ್ರಮ; ಅಭಿಮಾನಿಗಳಿಂದ ಭರಪೂರ ವಿಶ್​

ಸ್ವಾತಂತ್ರ್ಯ ದಿನಾಚರಣೆ ದಿನವೇ (ಆ.15) ಈ ತಾರೆಯರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲರಿಂದ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ.

ಸ್ವಾತಂತ್ರ್ಯೋತ್ಸವದ ದಿನವೇ ಈ ಸೆಲೆಬ್ರಿಟಿಗಳಿಗೆ ಬರ್ತ್​ಡೇ ಸಂಭ್ರಮ; ಅಭಿಮಾನಿಗಳಿಂದ ಭರಪೂರ ವಿಶ್​
ಸ್ವಾತಂತ್ರ್ಯೋತ್ಸವದ ದಿನವೇ ಈ ಸೆಲೆಬ್ರಿಟಿಗಳಿಗೆ ಬರ್ತ್​ಡೇ ಸಂಭ್ರಮ; ಅಭಿಮಾನಿಗಳಿಂದ ಭರಪೂರ ವಿಶ್​
TV9 Web
| Edited By: |

Updated on:Aug 15, 2021 | 12:59 PM

Share

ದೇಶದೆಲ್ಲೆಡೆ ಇಂದು (ಆ.15) 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ದ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ದೇಶಭಕ್ತಿ ಮೆರೆಯಲಾಗುತ್ತಿದೆ. ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ ಅಸಂಖ್ಯಾತ ಜನರಿಗೆ ನಮನ ಸಲ್ಲಿಸಲಾಗುತ್ತಿದೆ. ಈ ಸಂಭ್ರಮದ ನಡುವೆಯೇ ಹಲವು ತಾರೆಯರಿಗೆ ಜನ್ಮದಿನದ ಸಡಗರ ಕೂಡ ಇದೆ. ಕನ್ನಡದ ಸಲೆಬ್ರಿಟಿಗಳಾದ ರಾಘವೇಂದ್ರ ರಾಜ್​ಕುಮಾರ್​, ನಿರ್ದೇಶಕ ಸಂತೋಷ್​ ಆನಂದ್​ರಾಮ್​, ಅರ್ಜುನ್​ ಸರ್ಜಾ, ನಾಗತಿಹಳ್ಳಿ ಚಂದ್ರಶೇಖರ್​, ಭಾರತಿ ವಿಷ್ಣುವರ್ಧನ್​, ಸುಹಾಸಿನಿ ಮುಂತಾದವರಿಗೆ ಈ ವಿಶೇಷ ದಿನದಂದು ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿವೆ.

ಚಿತ್ರರಂಗದಲ್ಲಿ ನಟಿ ಭಾರತಿ ವಿಷ್ಣುವರ್ಧನ್​ ಅವರ ಕೊಡುಗೆ ಅಪಾರ. ಅವರ ಜರ್ನಿಯನ್ನು ಆಧರಿಸಿ ಅವರ ಅಳಿಯ ನಟ ಅನಿರುದ್ಧ ಅವರು ಒಂದು ಡಾಕ್ಯುಮೆಂಟರಿ ಮಾಡಿದ್ದು, ಅದಕ್ಕೆ ‘ಬಾಳೇ ಬಂಗಾರ’ ಎಂದು ಹೆಸರು ಇಡಲಾಗಿದೆ. ಭಾರತಿ ವಿಷ್ಣುವರ್ಧನ್​ ಅವರ ಜನ್ಮದಿನದ ಪ್ರಯುಕ್ತ ಅದರ ಟ್ರೇಲರ್​ ಇಂದು (ಆ.15) ಮಧ್ಯಾಹ್ನ ಮೂರು ಗಂಟೆಗೆ ಬಿಡುಗಡೆ ಆಗುತ್ತಿದೆ.

ಯುವರತ್ನ, ರಾಜಕುಮಾರ, ಮಿಸ್ಟರ್​ ಆ್ಯಂಡ್​ ಮಿಸಸ್​ ರಾಮಚಾರಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರಿಗೆ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಕೋರಿದ್ದಾರೆ.

ಆನಾರೋಗ್ಯದ ಕಾರಣ ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಚಿತ್ರರಂಗದಲ್ಲಿ ಒಂದಷ್ಟು ದಿನ ಬ್ರೇಕ್​ ಪಡೆದುಕೊಂಡಿದ್ದರು. ಆದರೆ ‘ಅಮ್ಮನ ಮನೆ’ ಸಿನಿಮಾ ಮೂಲಕ ಅವರು ಕಮ್​ಬ್ಯಾಕ್​ ಮಾಡಿದರು. ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಒಂದು ವಿಶೇಷ ಪಾತ್ರವಿತ್ತು. ಈಗ ಅವರು ಅನೇಕ ಸಿನಿಮಾಗಳ ತೊಡಗಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ಗೆ ಅನೇಕ ಗಮನಾರ್ಹ​ ಸಿನಿಮಾಗಳನ್ನು ಕೊಟ್ಟ ನಾಗತಿಹಳ್ಳಿ ಚಂದ್ರಶೇಖರ್​ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಅಮೆರಿಕ ಅಮೆರಿಕ, ಕೊಟ್ರೇಶಿ ಕನಸು ಮುಂತಾದ ಚಿತ್ರಗಳನ್ನು ನೀಡಿದ ಅವರನ್ನು ಸೆಲೆಬ್ರಿಟಿಗಳು ಕೂಡ ಪ್ರೀತಿಯಿಂದ ಮೇಷ್ಟ್ರು ಎಂದು ಕರೆಯುತ್ತಾರೆ. ನಾಗತಿಹಳ್ಳಿ ಚಂದ್ರಶೇಖರ್​ ಕೂಡ ಇಂದು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದು ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.

ಅರ್ಜುನ್​ ಸರ್ಜಾ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ. ಮಲಯಾಳಂನ ‘ದಿ ಫೀಸ್ಟ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದು ಜನ್ಮದಿನದ ಪ್ರಯುಕ್ತ ಅವರ ಪಾತ್ರದ ಫಸ್ಟ್​ಲುಕ್​ ಬಿಡುಗಡೆ ಮಾಡಲಾಗಿದೆ. ಅವರು ಚೆನ್ನೈನಲ್ಲಿ ನಿರ್ಮಿಸಿರುವ ಬೃಹತ್​ ಆಂಜನೇಯ ಸ್ವಾಮಿ ದೇವಾಲಯ ಇತ್ತೀಚೆಗೆ ಲೋಕಾರ್ಪಣೆಗೊಂಡಿತು.

ಇದನ್ನೂ ಓದಿ:

ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ 5 ಅತ್ಯುತ್ತಮ ದೇಶಭಕ್ತಿ ಸಿನಿಮಾ: ಯಾವ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ?

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

Published On - 12:40 pm, Sun, 15 August 21

Follow Us
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!
ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ
ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ