ಬಿಗ್ ಬಾಸ್ ಫಿನಾಲೆಗೆ ದಿನಾಂಕ ನಿಗದಿ? ಈ ದಿನವೇ ಕ್ಲೈಮ್ಯಾಕ್ಸ್?

ಈ ಬಾರಿಯ ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 29ರಂದು. ಹಲವು ಡ್ರಾಮಾಗಳಿಗೆ ಈ ಬಾರಿಯ ಬಿಗ್ ಸಾಕ್ಷಿ ಆಯಿತು. ಈಗಾಗಲೇ ಬಿಗ್ ಬಾಸ್ 92 ದಿನಗಳು ಪೂರ್ಣಗೊಂಡಿದೆ. ಈ ಬಾರಿ ಒಂದು ವಾರ ಹೆಚ್ಚುವರಿಯಾಗಿ ಬಿಗ್ ಬಾಸ್ ನಡೆಯಲಿದೆ ಎನ್ನಲಾಗುತ್ತಿದೆ. ಹಾಗಾದರೆ ಫಿನಾಲೆ ಯಾವಾಗ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್ ಬಾಸ್ ಫಿನಾಲೆಗೆ ದಿನಾಂಕ ನಿಗದಿ? ಈ ದಿನವೇ ಕ್ಲೈಮ್ಯಾಕ್ಸ್?
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Jan 01, 2025 | 7:01 AM

ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್​ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದು, ಈ ಪೈಕಿ ಒಬ್ಬರು ಈ ವಾರ ಹೊರ ಹೋಗಲಿದ್ದಾರೆ. ಈ ಮೂಲಕ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಲಿದೆ. ಈ ಮೂಲಕ ಫಿನಾಲೆಗೆ ದಿನಾಂಕ ಹತ್ತಿರ ಆಗುತ್ತಲೇ ಇದೆ. ಹಾಗಾದರೆ ಫೈನಲ್ ಎಪಿಸೋಡ್​ ನಡೆಯೋದು ಯಾವಾಗ? ಆ ಪ್ರಶ್ನೆಗೆ ಉತ್ತರ ಬಹುತೇಕ ಸಿಕ್ಕಂತೆ ಆಗಿದೆ.

ಕಳೆದ ಸೀಸನ್ ಲೆಕ್ಕಾಚಾರ

ಕಳೆದ ಸೀಸನ್​ನಲ್ಲಿ 112 ದಿನಗಳ ಕಾಲ ಬಿಗ್ ಬಾಸ್ ನಡೆದಿತ್ತು. ಅಕ್ಟೋಬರ್ 8ರಂದು ಆರಂಭ ಆಗಿದ್ದ ಶೋ ಜನವರಿ 28ರವರೆಗೆ ನಡೆದಿತ್ತು. ಒಟ್ಟೂ 21 ಸ್ಪರ್ಧಿಗಳು ಮನೆ ಒಳಗೆ ಬಂದಿದ್ದರು. ಕಾರ್ತಿಕ್ ಮಹೇಶ್ ಅವರು ಆ ಸೀಸನ್​ನ ವಿನ್ನರ್ ಆದರೆ, ಡ್ರೋನ್ ಪ್ರತಾಪ್ ರನ್ನರ್​ ಅಪ್ ಆದರು.

ಹಲವು ಡ್ರಾಮಾ

ಈ ಬಾರಿಯ ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 29ರಂದು. ಅಂದರೆ ಕಳೆದ ಸೀಸನ್​ಗಿಂತ ಒಂದು ವಾರ ಮೊದಲು. ಈ ಸೀಸನ್​ನಲ್ಲಿ ಒಟ್ಟು 20 ಕಂಟೆಸ್ಟ್​ಗಳು ರೇಸ್​ನಲ್ಲಿ ಇದ್ದರು. ಈಗ ಉಳಿದುಕೊಂಡೋರು ಕೇಲವ 9 ಮಂದಿ ಮಾತ್ರ. ರಂಜಿತ್ ಹಾಗೂ ಜಗದೀಶ್ ಅವರು ಹೊಡೆದಾಡಿಕೊಂಡು ಮನೆಯಿಂದ ಔಟ್ ಆದರೆ, ಗೋಲ್ಡ್ ಸುರೇಶ್ ಅವರು ಅನಿವಾರ್ಯ ಕಾರಣಗಳಿಂದ ದೊಡ್ಮನೆ ತೊರೆಯಬೇಕಾಯಿತು. ಅತ್ತ ಶೋಭಾ ಶೆಟ್ಟಿ ಕೂಡ ಅರ್ಧಕ್ಕೆ ಬಿಗ್ ಬಾಸ್ ಬಿಟ್ಟರು. ಹೀಗಾಗಿ, ಹಲವು ಡ್ರಾಮಾಗಳಿಗೆ ಈ ಬಾರಿಯ ಬಿಗ್ ಸಾಕ್ಷಿ ಆಯಿತು.

ಇದನ್ನೂ ಓದಿ: ಕಪ್ ಗೆದ್ದಷ್ಟೇ ಖುಷಿಯಲ್ಲಿದ್ದಾರೆ ಐಶ್ವರ್ಯಾ; ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ನ ಆ ಒಂದು ನಿರ್ಧಾರ

ಫಿನಾಲೆ ಯಾವಾಗ?

ಈ ಬಾರಿ ಒಂದು ವಾರ ಹೆಚ್ಚುವರಿಯಾಗಿ ಬಿಗ್ ಬಾಸ್ ನಡೆಯಲಿದೆ ಎನ್ನಲಾಗುತ್ತಿದೆ. ಅದು ನಿಜವೇ ಆದಲ್ಲಿ ಜನವರಿ 26ರಂದು ಫಿನಾಲೆ ನಡೆಯಲಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ದೊಡ್ಮನೆಯಲ್ಲಿ ಒಂಭತ್ತು ಮಂದಿ ಇದ್ದಾರೆ. ಈ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆದು, ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ಬಿಗ್ ಬಾಸ್ 112 ದಿನಕ್ಕೆ ಪೂರ್ಣಗೊಳ್ಳುತ್ತದೆ ಎಂದಾದರೆ ಡಿಸೆಂಬರ್ 19ಕ್ಕೆ ಫೈನಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ