ಇರ್ಫಾನ್ ಖಾನ್ ತಾಯಿ ನಿಧನ, ವಿಡಿಯೋ ಕಾನ್ಫರೆನ್ಸ್​ ಮೂಲಕ ಅಂತಿಮ ದರ್ಶನ

ಇರ್ಫಾನ್ ಖಾನ್ ತಾಯಿ ನಿಧನ, ವಿಡಿಯೋ ಕಾನ್ಫರೆನ್ಸ್​ ಮೂಲಕ ಅಂತಿಮ ದರ್ಶನ

ಜೈಪುರ: ಬಾಲಿವುಡ್​ನ ಖ್ಯಾತ ನಟ ಇರ್ಫಾನ್ ಖಾನ್ ಅವರ ತಾಯಿ ಸಾಯಿದಾ ಅವರು ಜೈಪುರದಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಆದ್ರೆ ಲಾಕ್​ಡೌನ್ ಪರಿಣಾಮ ರಾಜಸ್ಥಾನಕ್ಕೆ ತೆರಳಲು ಸಾಧ್ಯವಾಗದ ಕಾರಣ ತನ್ನ ತಾಯಿಯ ಅಂತಿಮ ದರ್ಶನವನ್ನು ಇರ್ಫಾನ್ ಖಾನ್ ಪಡೆಯಲು ಸಾಧ್ಯವಾಗಿಲ್ಲ.

ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಮೇ 3ರವರೆಗೆ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಲು ಯಾವುದೇ ವಿಮಾನ ಸೇವೆ ಇಲ್ಲ. ಹಾಗಾಗಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲೂ ನಟ ಇರ್ಫಾನ್ ಭಾಗಿಯಾಗಲು ಸಾಧ್ಯವಾಗಿಲ್ಲ. ವಿಡಿಯೋ ಕಾನ್ಫರೆನ್ಸ್​ ಮುಖಾಂತರ ಜೈಪುರದಲ್ಲಿ ಶನಿವಾರ ಸಂಜೆ ನಡೆದ ತನ್ನ ತಾಯಿಯ ಅಂತ್ಯಕ್ರಿಯನ್ನು ವೀಕ್ಷಿಸಿದ್ದಾರೆ.

ಇರ್ಫಾನ್ ಖಾನ್ ಅವರ ತಾಯಿ 95 ವರ್ಷದ ಸಾಯಿದಾ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕುಟುಂಬದ ಕೆಲವೇ ಸದಸ್ಯರು ಮಾತ್ರ ಇರ್ಫಾನ್ ಖಾನ್ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಟೋಂಕ್​ನ ನವಾಬ್ ಕುಟುಂಬಕ್ಕೆ ಸೇರಿದ ಸಾಯಿದಾ, ಜೈಪುರದ ಬೆನಿವಾಲ್ ಕಾಂತಾ ಕೃಷ್ಣ ಕಾಲೋನಿಯಲ್ಲಿ ವಾಸವಿದ್ದರು.

Click on your DTH Provider to Add TV9 Kannada