AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’

‘ಚಾರ್ಜ್‌ಶೀಟ್ 03-08’ ಸಿನಿಮಾಗೆ ವೆಂಕಟ್ ಭಾರದ್ವಾಜ್ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಬಾಕಿ ಇದೆ. ಲಕ್ಷ್ಮಣ್ ಮತ್ತು ದಿನೇಶ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಬಿಡುಗಡೆ ಮಾಡುವ ಗುರಿಯನ್ನು ಅವರು ಹೊಂದಿದ್ದಾರೆ.

ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’
Chargesheet 03 08 Movie Still
ಮದನ್​ ಕುಮಾರ್​
|

Updated on: Apr 21, 2026 | 5:08 PM

Share

ನಿಜ ಜೀವನದಲ್ಲಿ ನಡೆದ ಕ್ರೈಂ ಘಟನೆಗಳನ್ನು ಆಧರಿಸಿದ ‘ಚಾರ್ಜ್‌ಶೀಟ್ 03-08’ (Chargesheet 03-08) ಸಿನಿಮಾ ಮೂಡಿಬರುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟರ್ ಲಾಂಚ್ ಮಾಡಲಾಗಿದೆ. ಬೆಚ್ಚಿಬೀಳಿಸುವ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ (Kannada Cinema) ನಿರ್ಮಾಣ ಆಗುತ್ತಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ (SK Umesh) ಬರೆದ ‘ಐ ವಿಟ್ನೆಸ್’ ಕೃತಿ ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ.

2003ರಲ್ಲಿ ಬೆಂಗಳೂರಿನಲ್ಲಿ ನಡೆದ ನಿಜ ಘಟನೆಯ ಆಧಾರದ ಮೇಲೆ ರೂಪುಗೊಂಡಿರುವ ಸಿನಿಮಾ ಇದು. ನೈಜ ಘಟನೆಗೆ ಸಿನಿಮೀಯ ಸ್ಪರ್ಶ ನೀಡಲಾಗುತ್ತಿದೆ. ಉಮೇಶ್ ಅವರ ನೈಜ ಅನುಭವಗಳನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಪೋಸ್ಟರ್‌ನಲ್ಲಿ ಮೂಡಿಬಂದಿರುವ ಗಂಭೀರ ವಾತಾವರಣ, ರಹಸ್ಯಮಯ ದೃಶ್ಯ ವಿನ್ಯಾಸ ಹಾಗೂ ತನಿಖೆಯ ತೀವ್ರತೆಯನ್ನು ಸೂಚಿಸುವ ದೃಶ್ಯಗಳು ಕೌತುಕ ಮೂಡಿಸಿವೆ.

ಚಿತ್ರತಂಡ ಹೇಳುವ ಪ್ರಕಾರ, ‘ಚಾರ್ಜ್‌ಶೀಟ್ 03-08’ ಕೇವಲ ಒಂದು ಸಿನಿಮಾ ಅಲ್ಲ. ಇದು ನ್ಯಾಯಕ್ಕಾಗಿ ನಡೆದ ಹೋರಾಟದ ದಾಖಲೆ. ಸಮಾಜದ ಕತ್ತಲೆ ಮುಖವನ್ನೂ, ಸತ್ಯದ ದಾರಿಯಲ್ಲಿನ ಸಂಕಷ್ಟಗಳನ್ನೂ ಬಿಂಬಿಸುವ ಈ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ನಡುಗಿಸುವ ಶಕ್ತಿಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಲಕ್ಷ್ಮಣ್ ಮತ್ತು ದಿನೇಶ್ ಅವರು ನಿರ್ಮಾಣ ಮಾಡಿರುವ ‘ಚಾರ್ಜ್‌ಶೀಟ್ 03-08’ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷಾರ್ಜುನ್, ಸತ್ಯಶ್ರೀ, ಅಮರ್, ಚೇತನಾ ಖೋಟ್, ಡಾ. ಪ್ರಮೋದ್ ಹಿರೇಮಠ್, ವೆಂಕಟ್ ಭರದ್ವಾಜ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಮುಂತಾದವರು ನಟಿಸಿದ್ದಾರೆ. ಎಸ್.ಕೆ. ಉಮೇಶ್ ಬರೆದ ಕಥೆಗೆ ವೆಂಕಟ್ ಭಾರದ್ವಾಜ್ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ನಟಿಯ ಪರ್ಸ್​​ನಿಂದ ಮಾಯವಾಯ್ತು 50 ಸಾವಿರ; ಕಳ್ಳ ಯಾರು?

‘ಚಾರ್ಜ್‌ಶೀಟ್ 03-08’ ಸಿನಿಮಾಗೆ ಸಮೀರ್ ಕುಲಕರ್ಣಿ ಅವರು ಸಂಗೀತ ನೀಡಿದ್ದಾರೆ. ಶಮೀಕ್ ವಿ. ಭಾರದ್ವಾಜ್ ಅವರು ಸಂಕಲನ ಮಾಡಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ‘ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ