ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ಗೂ (David Warner) ಭಾರತಕ್ಕೂ ಎಲ್ಲಿಲ್ಲದ ನಂಟು. ಐಪಿಎಲ್ನಲ್ಲಿ ಹೈದರಾಬಾದ್ ತಂಡದಲ್ಲಿ (Sunrisers Hyderabad) ಆಡುತ್ತಿದ್ದ ಅವರು, ಇಲ್ಲಿನ ಜನರಿಗೆ ಹತ್ತಿರವಾದರು. ಈ ಮೊದಲು ಕನ್ನಡ, ತೆಲುಗು, ಹಿಂದಿ ಹಾಡುಗಳಿಗೆ ಅವರು ರೀಲ್ಸ್ ಮಾಡಿದ್ದಾರೆ. ಮೈದಾನದಲ್ಲಿ ತೆಲುಗು ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಡೇವಿಡ್ ವಾರ್ನರ್ ಏನೇ ಮಾಡಿದರೂ ಅದನ್ನು ಇಷ್ಟಪಡುವ ಅನೇಕರಿದ್ದಾರೆ. ಈಗ ಅವರು ಮಾಡಿರುವ ಹೊಸ ರೀಲ್ಸ್ ವೈರಲ್ ಆಗುತ್ತಿದೆ. ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ..’ ಹಾಡಿನ ಕನ್ನಡ ವರ್ಷನ್ಗೆ ಅವರು ಹೆಜ್ಜೆ ಹಾಕಿದ್ದಾರೆ.
‘ಪುಷ್ಪ’ ಸಿನಿಮಾದಲ್ಲಿ ಬರುವ ‘ಶ್ರೀವಲ್ಲಿ..’ ಹಾಡು ತುಂಬಾನೇ ಫೇಮಸ್ ಆಗಿದೆ. ಈ ಹಾಡು ಯೂಟ್ಯೂಬ್ನಲ್ಲಿ ಕೋಟ್ಯಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಹಾಡು ಈಗ ರೀಲ್ಸ್ನಲ್ಲಿ ಫೇಮಸ್ ಆಗಿದೆ. ಅಲ್ಲು ಅರ್ಜುನ್ ಮಾಡಿದ ಸ್ಟೆಪ್ಅನ್ನು ಎಲ್ಲರೂ ಅನುಕರಿಸುತ್ತಿದ್ದಾರೆ. ಹೀಗಾಗಿ, ಈ ಹಾಡು ಸಾಕಷ್ಟು ವೈರಲ್ ಆಗುತ್ತಿದೆ. ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಸೇರಿ ಅನೇಕರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಬಾರಿ ಡೇವಿಡ್ ವಾರ್ನರ್ ಅವರ ಸರದಿ.
‘ಶ್ರೀವಲ್ಲಿ..’ ಹಾಡಿನ ಕನ್ನಡ ಅವತರಣಿಕೆಗೆ ಡೇವಿಡ್ ವಾರ್ನರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಅನ್ನು ಅವರು ಇನ್ಸ್ಟ್ರಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಎರಡು ಗಂಟೆಗಳಲ್ಲಿ ಈ ವಿಡಿಯೋ 25 ಲಕ್ಷ ಬಾರಿ ವೀಕ್ಷಣೆ ಕಂಡಿದೆ. 7.14 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಇದು ಡೇವಿಡ್ ಬಗ್ಗೆ ಭಾರತೀಯರಿಗೆ ಇರುವ ಕ್ರೇಜ್ಅನ್ನು ತೋರಿಸುತ್ತದೆ.
‘ಶ್ರೀವಲ್ಲಿ..’ ತೆಲುಗು ಹಾಗೂ ಹಿಂದಿ ಹಾಡಿಗೆ ಈ ಮೊದಲು ಅನೇಕರು ಹೆಜ್ಜೆ ಹಾಕಿದ್ದರು. ಆದರೆ, ಕನ್ನಡ ಹಾಡಿಗೆ ಯಾರೂ ಅಷ್ಟಾಗಿ ಡ್ಯಾನ್ಸ್ ಮಾಡಿರಲಿಲ್ಲ. ಈಗ ಡೇವಿಡ್ ವಾರ್ನರ್ ಅವರು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿರೋದು ಸಾಕಷ್ಟು ಜನರಿಗೆ ಖುಷಿ ನೀಡಿದೆ. ಐಪಿಎಲ್ ವಿಚಾರವೂ ಇಲ್ಲಿ ಪ್ರಸ್ತಾಪವಾಗಿದೆ. ಕಳೆದ ಸೀಸನ್ಲ್ಲಿ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದರು. ಆದರೆ, ಹೈದರಾಬಾದ್ ತಂಡ ಈ ಬಾರಿ ಡೇವಿಡ್ ಅವರನ್ನು ಉಳಿಸಿಕೊಂಡಿಲ್ಲ. ಹೀಗಾಗಿ, ವಾರ್ನರ್ ಈ ಬಾರಿ ಆರ್ಸಿಬಿ ಪರ ಆಡುತ್ತಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಇದನ್ನೂ ಓದಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ಡೇವಿಡ್ ವಾರ್ನರ್; ಕನ್ನಡಿಗರು ಫುಲ್ ಫಿದಾ
ಅಮೇಜಾನ್ ಪ್ರೈಮ್ನಿಂದ ಬಂಪರ್ ಆಫರ್; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ
Published On - 5:50 pm, Fri, 21 January 22