ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ತೆರೆಕಂಡಿದೆ. ಸಿನಿಮಾ ರಂಗದ ಬಗ್ಗೆ ಅಪಾರ ಒಲವು ಹೊಂದಿರುವ ಝೈದ್, ತನ್ನ ತಂದೆ ಬಿಸ್ನೆಸ್ ಮಾಡುವಂತೆ ಹೇಳಿದಾಗ ನಡೆದ ಜಗಳದ ಬಗ್ಗೆ ಮಾತನಾಡಿದ್ದಾರೆ. ತಂದೆಯ ದುಡ್ಡಿನಲ್ಲಿ ಬದುಕಲು ಇಷ್ಟವಿಲ್ಲದ ಝೈದ್, ತಾನೇ ಎಲ್ಲವನ್ನೂ ನಿಭಾಯಿಸುವುದಾಗಿ ಹೇಳಿದ್ದಾರೆ.

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ
ಝೈದ್-ಜಮೀರ್

Updated on: Jan 23, 2026 | 7:35 AM

ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಜನವರಿ 23) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಸಿನಿಮಾ ಸಖತ್ ರಾ ಆಗಿರೋದು ಇದಕ್ಕೆ ಕಾರಣ. ಈಗ ಝೈದ್ ಖಾನ್ ಅವರು ತಂದೆ ಜೊತೆ ಆಗೋ ಕಿರಿಕ್​​​ಗಳ ಬಗ್ಗೆ ಮಾತನಾಡಿದ್ದಾರೆ. ಒಂದು ವಿಷಯದಲ್ಲಿ ಇಬ್ಬರ ಮಧ್ಯೆ ಸಾಕಷ್ಟು ಜಗಳ ಆಗಿದೆಯಂತೆ.

ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲೇ ಮುಂದುವರಿಯುವ ಪ್ರಯತ್ನ ಮಾಡುತ್ತಾರೆ. ಪಾಲಕರಿಗೂ ಇದೆ ಹಾರೈಕೆ ಇರುತ್ತದೆ. ಆದರೆ, ಜಮೀರ್​​ಗೆ ಇದು ಇಷ್ಟ ಇಲ್ಲ. ಸದ್ಯಕ್ಕೆ ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಝೈದ್ ಖಾನ್ ಅವರು ತಂದೆಯ ಬಗ್ಗೆ ಮಾತನಾಡಿದ್ದಾರೆ.

‘ಕೆಲಸ ಎಂಬುದು ಬಂದರೆ ನಾನು ರಾಕ್ಷಸ. ನನ್ನ ನೂರರಷ್ಟು ಶ್ರಮ ಹಾಕುತ್ತೇನೆ . ಆದರೆ, ಕೆಲಸ ಇಲ್ಲ ಎಂದರೆ ನಾನು ಬೆಡ್ ಮೇಲೆ ಇರುತ್ತೇನೆ. ಯಾವಾಗಲೂ ಸುದ್ದಿಯಲ್ಲಿರಬೇಕು, ಕಾಣಿಸಿಕೊಳ್ಳುತ್ತಾ ಇರಬೇಕು ಎಂಬುದು ನಂಗೆ ಇಲ್ಲ. ನನಗೆ ನನ್ನದೇ ಆದ ಖಾಸಗಿ ಜೀವನ ಇದೆ’ ಎಂದಿದ್ದಾರೆ ಝದ್ ಖಾನ್.

ಇದನ್ನೂ ಓದಿ: ‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?

‘ಸಿನಿಮಾ ಇಂಡಸ್ಟ್ರಿಗೆ ನಾನು ಪ್ಯಾಷನ್​​ಗೆ ಬಂದಿದ್ದು. ನನ್ನ ಮನೆಯ ಬಿಸ್ನೆಸ್​​​ನ ನಡೆಸಿಕೊಂಡು ಹೋಗುವ ಜವಾಬ್ದಾರಿ ನನಗೆ ಇದೆ. ತಂದೆ ದುಡ್ಡು ಕೊಡ್ತಾರೆ ಎಂದು ಬದುಕೋದು ಜೀವನ ಅಲ್ಲ’ ಎಂದಿದ್ದಾರೆ ಅವರು.
‘ಸಿನಿಮಾ ಕರಿಯರ್​​ಗೆ ಹೋಗೋವಾಗ ತಂದೆ ಬಿಸ್ನೆಸ್ ಮಾಡುವಂತೆ ಸೂಚಿಸಿದ್ದರು. ದುಡ್ಡು ಬೇಕಿದ್ರೂ ಕೊಡ್ತೀನಿ ಎಂದರು. ನಾನು ರಾಜಕೀಯಕ್ಕೆ ಬರೋದು ಅವರಿಗೆ ಇಷ್ಟ ಇಲ್ಲ. ಬಿಸ್ನೆಸ್ ಮಾಡಬೇಕು ಎಂಬ ವಿಷಯಕ್ಕೆ ನನ್ನ ತಂದೆ ಹಾಗೂ ನನ್ನ ಮಧ್ಯೆ ಸಾಕಷ್ಟು ಜಗಳ ಆಗಿದೆ’ ಎಂದು ಝೈದ್ ಖಾನ್ ವಿವರಿಸಿದ್ದಾರೆ.

ತಂದೆಯ ಜೊತೆಗಿನ ಜಗಳದ ಬಗ್ಗೆ ವಿಡಿಯೋ ಅಂತ್ಯದಲ್ಲಿ ಝೈದ್ ಮಾತನಾಡಿದ್ದಾರೆ

ಝೈದ್ ಖಾನ್ ಅವರು ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಅವರೇ ಎಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡು ಬಂದರು. ಅವರಿಗೆ ತಂದೆಯ ಬೆಂಬಲ ಅಷ್ಟಾಗಿ ಸಿಕ್ಕಿಲ್ಲವಂತೆ. ತಂದೆ ಕೂಡ ಅವರ ಸಿನಿಮಾ ಕಾರ್ಯಕ್ರಮಗಳಿಗೆ ಬರೋದು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.