ಅದ್ದೂರಿಯಾಗಿ ನಡೆಯುತ್ತಿದೆ ಡಾಲಿ ಧನಂಜಯ್​ ಬರ್ತ್​ಡೇ ಸೆಲೆಬ್ರೇಷನ್​; ಅಭಿಮಾನಿಗಳಿಗೆ ಭರ್ಜರಿ ಊಟ

ರಾಯಚೂರಿನ ಅಭಿಮಾನಿಗಳು ಉತ್ತರ ಕರ್ನಾಟಕದ ಊಟ ವ್ಯವಸ್ಥೆ ಮಾಡಿದ್ದಾರೆ. ಸಿಂಧನೂರಿನಿಂದ ಖಡಕ್ ರೊಟ್ಟಿ ತರಲಾಗಿದೆ. ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ, ಮಿರ್ಚಿ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಅದ್ದೂರಿಯಾಗಿ ನಡೆಯುತ್ತಿದೆ ಡಾಲಿ ಧನಂಜಯ್​ ಬರ್ತ್​ಡೇ ಸೆಲೆಬ್ರೇಷನ್​; ಅಭಿಮಾನಿಗಳಿಗೆ ಭರ್ಜರಿ ಊಟ
ಡಾಲಿ ಧನಂಜಯ್​ ಬರ್ತ್​ಡೇ ಸೆಲೆಬ್ರೇಷನ್​
Follow us
ಮದನ್​ ಕುಮಾರ್​
|

Updated on: Aug 23, 2023 | 11:52 AM

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್​ (Daali Dhananjay) ಅವರಿಗೆ ಇಂದು (ಆಗಸ್ಟ್​ 23) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಬಹಳ ಅದ್ದೂರಿಯಾಗಿ ಬರ್ತ್​​ಡೇ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಈ ವರ್ಷ ಧನಂಜಯ್​ ಅವರಿಗೆ ಹುಟ್ಟುಹಬ್ಬ ವಿಶೇಷವಾಗಿದೆ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಅವರಿಗೆ ಜನ್ಮದಿನವನ್ನು ಗ್ರ್ಯಾಂಡ್​ ಆಗಿ ಸೆಲೆಬ್ರೇಟ್​ ಮಾಡಲು ಸಾಧ್ಯವಾಗಿರಲಿಲ್ಲ. ಕೊರೊನಾ ಹಾವಳಿ, ಪುನೀತ್​ ರಾಜ್​ಕುಮಾರ್​ ನಿಧನ ಮುಂತಾದ ಕಾರಣಗಳಿಂದ ಧನಂಜಯ್​ ಅವರು ಬರ್ತ್​ಡೇ (Daali Dhananjay Birthday) ಆಚರಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ಅಭಿಮಾನಿಗಳ ಜೊತೆ ಸೇರಿ ಅವರು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಲ್ಲಿ ಭಾಗಿಯಾದ ಎಲ್ಲ ಅಭಿಮಾನಿಗಳಿಗೆ ವಿಶೇಷವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ನಂದಿ ಲಿಂಕ್ಸ್​ ಗ್ರೌಂಡ್​ನಲ್ಲಿ ಡಾಲಿ ಧನಂಜಯ್​ ಅವರ ಬರ್ತ್​ಡೇ ಆಚರಿಸಲಾಗುತ್ತಿದೆ. ಆಗಸ್ಟ್​ 22ರ ಮಧ್ಯರಾತ್ರಿಯಿಂದಲೇ ಸಂಭ್ರಮ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಈ ಸಡಗರದಲ್ಲಿ ಭಾಗಿ ಆಗುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡಲಾಗುತ್ತಿದೆ. ಧನಂಜಯ್​ ಅವರಿಗೆ ಶುಭಕೋರಲು ಬಂದ ಅಭಿಮಾನಿಗಳು ಉತ್ತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಶೈಲಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಡಾಲಿ ಧನಂಜಯ್​​ ಕುರಿತ ಕೆಲವು ಇಂಟರೆಸ್ಟಿಂಗ್​​ ಸಂಗತಿಗಳು ಇಲ್ಲಿವೆ

ರಾಯಚೂರಿನ ಅಭಿಮಾನಿಗಳು ಉತ್ತರ ಕರ್ನಾಟಕದ ಊಟ ವ್ಯವಸ್ಥೆ ಮಾಡಿದ್ದಾರೆ. ಸಿಂಧನೂರಿನಿಂದ ಖಡಕ್ ರೊಟ್ಟಿ ತರಲಾಗಿದೆ. ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ, ಮಿರ್ಚಿ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶಿವರಾಜ್ ಪಾಟೀಲ್ ಗುಂಜಳ್ಳಿ ಅವರಿಂದ ಅಭಿಮಾನಿಗಳಿಗೆ ಉತ್ತರ ಕರ್ನಾಟಕದ ಶೈಲಿಯ ಊಟವನ್ನು ನೀಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಡಾಲಿ ಬರ್ತ್​ಡೇ ಗ್ರ್ಯಾಂಡ್​ ಆಗಿದೆ.

Totapuri 2: ‘ತೋತಾಪುರಿ 2’ ಬಿಡುಗಡೆಗೆ ಸಜ್ಜಾದ ನಿರ್ಮಾಪಕರು; ಜಗ್ಗೇಶ್​, ಡಾಲಿ ಧನಂಜಯ್​ ಫಸ್ಟ್​ ಲುಕ್​ ಬಿಡುಗಡೆ

ಡಾಲಿ ಧನಂಜಯ್​ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹೀರೋ ಮಾತ್ರವಲ್ಲದೇ ವಿಲನ್​ ಆಗಲೂ ಸೈ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಕನ್ನಡಕ್ಕಷ್ಟೇ ಡಾಲಿ ಧನಂಜಯ್​ ಸೀಮಿತವಾಗಿಲ್ಲ. ಟಾಲಿವುಡ್​ನಲ್ಲೂ ಅವರು ಹೆಸರು ಮಾಡಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ಅವರು ಮಾಡಿದ ನೆಗೆಟಿವ್​ ಶೇಡ್​ನ ಪಾತ್ರ ಗಮನ ಸೆಳೆದಿದೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಮುಂದುವರಿಯಲಿದೆ. ಕನ್ನಡದಲ್ಲಿ ಅವರು ನಟಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಟೀಸರ್​ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ