AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Head Bush Trailer: ಡಾನ್ ಜಯರಾಜ್ ಆಗಿ ಭರ್ಜರಿ ಎಂಟ್ರಿ ಕೊಟ್ಟ ಡಾಲಿ ಧನಂಜಯ್: ಭೂಗತ ಜಗತ್ತಿನ ಝಲಕ್ ತೋರಿಸಿದ ಹೆಡ್​ ಬುಷ್ ಟ್ರೇಲರ್​

Daali Dhananjaya | Head Bush: ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರವನ್ನು ‘ಹೆಡ್ ಬುಷ್’ ಚಿತ್ರದಲ್ಲಿ ಡಾಲಿ ಧನಂಜಯ್​ ಮಾಡಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್​​ನಲ್ಲಿ ಅವರ ಮ್ಯಾನರಿಸಂ ಗಮನ ಸೆಳೆಯುತ್ತಿದೆ.

Head Bush Trailer: ಡಾನ್ ಜಯರಾಜ್ ಆಗಿ ಭರ್ಜರಿ ಎಂಟ್ರಿ ಕೊಟ್ಟ ಡಾಲಿ ಧನಂಜಯ್: ಭೂಗತ ಜಗತ್ತಿನ ಝಲಕ್ ತೋರಿಸಿದ ಹೆಡ್​ ಬುಷ್ ಟ್ರೇಲರ್​
ಡಾಲಿ ಧನಂಜಯ್
TV9 Web
| Edited By: |

Updated on:Oct 16, 2022 | 8:22 PM

Share

ಡಾಲಿ ಧನಂಜಯ್ (Daali Dhananjay) ನಟನೆಯ ಬಹುನಿರೀಕ್ಷಿತ ‘ಹೆಡ್ ಬುಷ್’ (Head Bush) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಇಂದು (ಅ.16) ಸಂಜೆ ಚಿತ್ರತಂಡ ಟ್ರೇಲರ್ ಲಾಂಚ್ ಮಾಡಿದ್ದು ಅಕ್ಟೋಬರ್ 21ಕ್ಕೆ ಸಿನಿಮಾ ಥಿಯೇಟರ್​​ಗಳಲ್ಲಿ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಎಂ.ಪಿ. ಜಯರಾಜ್ (MP Jayaraj) ಪಾತ್ರವನ್ನು ಹೆಡ್ ಬುಷ್ ಚಿತ್ರದಲ್ಲಿ ಡಾಲಿ ಧನಂಜಯ್​ ಮಾಡಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್​​ನಲ್ಲಿ ಡಾಲಿ ಪಕ್ಕಾ ರೌಡಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಜಗತ್ತಿನಲ್ಲಿ ಮಿಂಚಿದ ಡಾನ್ ಜಯರಾಜ್ ಅವರ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ ಎನ್ನುವುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ.

ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಹೊಸ ನಿರ್ದೇಶಕ ಶೂನ್ಯ ಅವರು ಆಕ್ಷನ್-ಕಟ್ ಹೇಳಿದ್ದಾರೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಪುಸ್ತಕವನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಕಾರಣದಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಹೆಡ್​ ಬುಷ್ ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ದೆಹಲಿ ಮೂಲದ ಇವರು ಹಿಂದಿ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ‘ಆರ್ ಎಕ್ಸ್ 100’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಉಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಇದನ್ನೂ ಓದಿ
Image
ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ ರೊಮ್ಯಾನ್ಸ್​ಗೆ ಸುದೀಪ್ ಕ್ಲಾಸ್
Image
ಜಾತಿ ಧರ್ಮ ಮೀರಿದ ಅಪ್ಪಟ ನಟ ಝೈದ್ ಖಾನ್; ತಿಮ್ಮಪ್ಪನ ದರ್ಶನ ಪಡೆದು ಪ್ರಚಾರ ಆರಂಭ
Image
‘ಈ ಮನೆ ಅದಕ್ಕಲ್ಲ’; ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ​-ಸಾನ್ಯಾ ಐಯ್ಯರ್​ಗೆ ಕಿಚ್ಚ ಸುದೀಪ್ ಕ್ಲಾಸ್
Image
‘ಕಾಂತಾರ’ಕ್ಕೆ ಬಾಲಿವುಡ್​​​ನಲ್ಲಿ ಕ್ರೇಜ್ ಹೇಗಿದೆ? ತಾವು ನೋಡಿದ್ದನ್ನು ವಿವರಿಸಿದ ತೆಲುಗು ನಟ ವಿಷ್ಣು ಮಂಚು

ಈ ಸಿನಿಮಾವನ್ನು ನಿರ್ದೇಶ ಮಾಡಿರುವ ಶೂನ್ಯ ಅವರು ಈ ಮೊದಲು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ಬಳಿ ಅಸೋಸಿಯೇಟ್‌ ಆಗಿದ್ದರು. ಅಲ್ಲದೆ ಫಿಲಂ ಮೇಕಿಂಗ್‌ ಕುರಿತು ಎಂಎಸ್ಸಿ , ಸಂಶೋಧನೆ ಕೂಡ ಮಾಡಿದ್ದಾರೆ. ಹೆಡ್‌ ಬುಷ್‌ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ. ಸುನೊಜ್‌ ವೇಲಾಯಧನ್‌ ಕ್ಯಾಮೆರಾ, ಬಾದಲ್‌ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ.

ಇಂದು ದಾವಣಗೆರೆ ನಗರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಸಂಜೆ ಆರು ಗಂಟೆಗೆ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಧನಂಜಯ ಹಾಗೂ ಚಿತ್ರತಂಡದ ಜೊತೆಗೆ ‘ಮೋಹಕ ತಾರೆ’ ರಮ್ಯಾ, ‘ಡಿಂಪಲ್‌ ಕ್ವೀನ್’ ರಚಿತಾ ರಾಮ್, ನೀನಾಸಂ ಸತೀಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:42 pm, Sun, 16 October 22

Follow Us
TV9 Web
TV9 Web

TV9 Kannada

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ