ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ಇಂದು (ಜೂನ್ 12) ಜನ್ಮದಿನದ ಸಂಭ್ರಮ. ಕುಟುಂಬದವರ ಜೊತೆ ಅವರು ಈ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ (Darling Krishna Birthday) ಪ್ರಯುಕ್ತ ನಿರ್ದೇಶಕ ಶಶಾಂಕ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶಶಾಂಕ್ (Director Shashank) ಅವರ ಬ್ಯಾನರ್ ಮೂಲಕವೇ ಈ ಸಿನಿಮಾ ಮೂಡಿಬರಲಿದೆ ಎಂಬುದು ವಿಶೇಷ. ‘ಮೊಗ್ಗಿನ ಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣ ಲೀಲಾ’ ಸಿನಿಮಾಗಳ ಮೂಲಕ ಭರ್ಜರಿ ಯಶಸ್ಸು ಕಂಡವರು ಶಶಾಂಕ್. ಅಂಥ ನಿರ್ದೇಶಕರ ಜೊತೆ ಡಾರ್ಲಿಂಗ್ ಕೃಷ್ಣ ಕೈ ಜೋಡಿಸುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಲವ್ ಮಾಕ್ಟೇಲ್’ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಡಾರ್ಲಿಂಗ್ ಕೃಷ್ಣ ಯಶಸ್ಸು ಕಂಡರು. ಅದರ ಸೀಕ್ವೆಲ್ ಆಗಿ ಬಂದ ‘ಲವ್ ಮಾಕ್ಟೇಲ್ 2’ ಕೂಡ ಸೂಪರ್ ಹಿಟ್ ಆಯಿತು. ಈ ಗೆಲುವಿನ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ನಿರ್ದೇಶಕ ಶಶಾಂಕ್ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚು ಕೌತುಕ ಮೂಡಿದೆ.
We are elated to announce our new project with dear friend @darlingkrishnaa on his birthday.
We need your wishes as always..
ನಮ್ಮ ತಂಡದ ಹೊಸ ಚಿತ್ರ, ಪ್ರೀತಿಯ #ಡಾರ್ಲಿಂಗ್_ಕೃಷ್ಣ ಜೊತೆಗೆ..
ನಿಮ್ಮ ಶುಭ ಹಾರೈಕೆಗಳು ನಮ್ಮೊಂದಿಗಿರಲಿ ?#HBDDarlingKrishna #ShashankCinemass #AnnouncementPoster pic.twitter.com/fnhLepet5l— Shashank (@Shashank_dir) June 12, 2022
ಸದ್ಯ ಈ ಚಿತ್ರಕ್ಕೆ ಶೀರ್ಷಿಕೆ ಅನೌನ್ಸ್ ಆಗಿಲ್ಲ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಚಿತ್ರದ ಬಗ್ಗೆ ಸುದ್ದಿ ನೀಡಲು ಶಶಾಂಕ್ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ಇರುವ ‘ಟೇಲ್ ಆಫ್ ರಿಯಲ್ ಮ್ಯಾನ್’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:39 am, Sun, 12 June 22