Love Mocktail 2: ಒಂದೇ ದಿನ ತೆರೆಗೆ ಬರಲಿವೆ ‘ಲವ್ ಮಾಕ್ಟೇಲ್ 2’ ಮತ್ತು ‘ಓಲ್ಡ್ ಮಾಂಕ್’; ಸಂಪೂರ್ಣ ಮಾಹಿತಿ ಇಲ್ಲಿದೆ

Old Monk Film: ಸ್ಯಾಂಡಲ್​ವುಡ್​ನಲ್ಲಿ ಭರವಸೆ ಮೂಡಿಸಿರುವ ಎರಡು ಚಿತ್ರಗಳಾದ ‘ಲವ್ ಮಾಕ್ಟೇಲ್ 2’ ಹಾಗೂ ‘ಓಲ್ಡ್ ಮಾಂಕ್’ ಚಿತ್ರಗಳು ಬಿಡುಗಡೆ ದಿನಾಂಕವನ್ನು ಘೋಷಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ.

Love Mocktail 2: ಒಂದೇ ದಿನ ತೆರೆಗೆ ಬರಲಿವೆ ‘ಲವ್ ಮಾಕ್ಟೇಲ್ 2’ ಮತ್ತು ‘ಓಲ್ಡ್ ಮಾಂಕ್’; ಸಂಪೂರ್ಣ ಮಾಹಿತಿ ಇಲ್ಲಿದೆ
‘ಲವ್ ಮಾಕ್ಟೇಲ್ 2’ ಹಾಗೂ ‘ಓಲ್ಡ್ ಮಾಂಕ್’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on:Dec 22, 2021 | 10:11 AM

ಸ್ಯಾಂಡಲ್​ವುಡ್​ನಲ್ಲಿ ಭರವಸೆ ಮೂಡಿಸಿರುವ ಚಿತ್ರಗಳಾದ ಡಾರ್ಲಿಂಗ್ ಕೃಷ್ಣ (Darling Krishna) ಅವರ ‘ಲವ್ ಮಾಕ್ಟೇಲ್ 2’ ಹಾಗೂ ಶ್ರೀನಿ (Srini) ಅವರ ‘ಓಲ್ಡ್ ಮಾಂಕ್’ ಬಿಡುಗಡೆಯ ದಿನಾಂಕವನ್ನು ಘೋಷಿಸಿವೆ. ವಿಶೇಷವೆಂದರೆ ಈ ಎರಡೂ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡವರೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೌದು ಓಲ್ಡ್ ಮಾಂಕ್ (Old Monk) ಚಿತ್ರದಲ್ಲಿ ನಟ ಶ್ರೀನಿ ಮುಖ್ಯ ಪಾತ್ರ ನಿಭಾಯಿಸಿ, ಆಕ್ಷನ್ ಕಟ್ ಹೇಳಿದ್ದಾರೆ. ‘ಲವ್ ಮಾಕ್ಟೇಲ್ 2’ನಲ್ಲಿ (Love Mocktail 2) ಡಾರ್ಲಿಂಗ್ ಕೃಷ್ಣ ನಾಯಕರಾಗಿ ಕಾಣಿಸಿಕೊಂಡಿರುವುದಲ್ಲದೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿಜ ಜೀವನದ ಜೋಡಿಯಾದ ಮಿಲನಾ ನಾಗರಾಜ್ (Milana Nagaraj) ಹಾಗೂ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಈ ಹಿಂದೆ ಮೋಡಿ ಮಾಡಿತ್ತು. ಆದ್ದರಿಂದಲೇ ಈ ಚಿತ್ರದ ಕುರಿತು ನಿರೀಕ್ಷೆಗಳು ಗರಿಗೆದರಿವೆ. ಈಗಾಗಲೇ ‘ಲವ್ ಮಾಕ್ಟೇಲ್ 2’ ಹಾಡುಗಳು ಜನರಿಗೆ ಮೋಡಿ ಮಾಡಿದ್ದು, ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಚಿತ್ರದ ಬಿಡುಗಡೆಯ ಕುರಿತು ಡಾರ್ಲಿಂಗ್ ಕೃಷ್ಣ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿದ್ದಾರೆ. ಫೆಬ್ರವರಿ 11ರಂದು ಚಿತ್ರವು ತೆರೆಗೆ ಬರುತ್ತಿದ್ದು, ಪ್ರೇಮಿಗಳ ದಿನಕ್ಕೂ ಮೊದಲೇ ಅಭಿಮಾನಿಗಳು ಸರ್ಪ್ರೈಸ್ ನೀಡಲು ಅವರು ತಯಾರಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಲವ್ ಮಾಕ್ಟೇಲ್ 2’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು,ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ. ಕೃಷ್ಣ ಟಾಕೀಸ್ ಬ್ಯಾನರ್​ನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ.

‘ಓಲ್ಡ್ ಮಾಂಕ್’ ಕೂಡ ಫೆಬ್ರವರಿ 11ಕ್ಕೆ ತೆರೆಗೆ: ಈಗಾಗಲೇ ನಿರ್ದೇಶಕನಾಗಿ, ನಾಯಕನಾಗಿ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿರುವ ಶ್ರೀನಿ, ‘ಓಲ್ಡ್ ಮಾಂಕ್’ ಮೂಲಕ ಮತ್ತೊಮ್ಮೆ ವೀಕ್ಷಕರನ್ನು ತಲುಪಲು ತುದಿಗಾಲಲ್ಲಿ ನಿಂತಿದ್ದಾರೆ. ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿರುವ ಈ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಿದ್ದು, ಫೆಬ್ರವರಿ 11ಕ್ಕೆ ಚಿತ್ರವನ್ನು ತೆರೆಗೆ ತರು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಜನರ ಗಮನ ಸೆಳೆದಿರುವ ‘ಓಲ್ಡ್ ಮಾಂಕ್’ನಲ್ಲಿ ರಾಜೇಶ್, ಸಿಹಿಕಹಿ ಚಂದ್ರು, ಎಸ್. ನಾರಾಯಣ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರ ನಿರ್ಮಿಸಿದ್ದು, ಸೌರಭ್ ವೈಭವ್ ಸಂಗೀತ ನೀಡಿದ್ದಾರೆ.

ಚಿತ್ರದ ಬಿಡುಗಡೆ ಕುರಿತು ನಟ ಶ್ರೀನಿ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಡಾರ್ಲಿಂಗ್ ಕೃಷ್ಣ ಹಾಗೂ ಶ್ರೀನಿ ಈರ್ವರೂ ಕೂಡ ಈ ಹಿಂದೆ ತಮ್ಮ ಅಭಿನಯ ಹಾಗೂ ನಿರ್ದೇಶನದಿಂದ ಗಮನ ಸೆಳೆದವರು. ಪ್ರಸ್ತುತ ತಮ್ಮ ಕನಸಿನ ಕೂಸನ್ನು ಅವರು ಪ್ರೇಕ್ಷಕರ ಮುಂದಿಡಲು ಸಿದ್ಧತೆ ನಡೆಸಿದ್ದಾರೆ. ಭರವಸೆ ಮೂಡಿಸಿರುವ ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೂ ಅಷ್ಟೇ ಕಾತರವಿದೆ. ಆದರೆ ಅದಕ್ಕಾಗಿ ಫೆಬ್ರವರಿ 11ರವರೆಗೆ ಕಾಯಲೇಬೇಕಿದೆ.

ಇದನ್ನೂ ಓದಿ:

ಸುನೀಲ್ ಶೆಟ್ಟಿ ಪುತ್ರಿ ಆಥಿಯಾಗೂ ಎದುರಾಗಿತ್ತು ಬಾಡಿ ಶೇಮಿಂಗ್; ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ತೆರೆದಿಟ್ಟ ನಟಿ

R Madhavan: ನೆಟ್​​ಫ್ಲಿಕ್ಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮಾಧವನ್ ನಟನೆಯ ವೆಬ್ ಸೀರೀಸ್; ಏನಿದು ಸಮಾಚಾರ?

Published On - 9:59 am, Wed, 22 December 21

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?