‘ಸಂದೇಶ್ ದಿ ಪ್ರಿನ್ಸ್ ಹೋಟೆಲ್’ ಸಿಬ್ಬಂದಿ ಗಂಗಾಧರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮಾಡಿದ್ದರು. ಅಲ್ಲದೆ, ಗಂಗಾಧರ್ ದಲಿತ ಎಂದು ಕೂಡ ಹೇಳಿದ್ದರು. ಈ ಪ್ರಕರಣದ ಬಗ್ಗೆ ಸ್ವತಃ ಗಂಗಾಧರ್ ಅವರೇ ಮಾತನಾಡಿದ್ದು, ಸ್ಫೋಟಕ ತಿರುವು ನೀಡಿದ್ದಾರೆ.
ಹೋಟೆಲ್ನಲ್ಲಿ ಗಲಾಟೆ ಆಗಿದೆ. ಗಂಗಾಧರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಇಂದ್ರಜಿತ್ ಆರೋಪವಾಗಿತ್ತು. ಆದರೆ, ಈ ಹೇಳಿಕೆ ಸುಳ್ಳು ಎಂದಿದ್ದಾರೆ ಗಂಗಾಧರ್. ‘ಅಂದು ಯಾವುದೇ ಜಗಳ ನಡೆದಿಲ್ಲ. ಊಟ ತರುವುದು ಸ್ವಲ್ಪ ತಡವಾಗಿತ್ತು. ಹೀಗಾಗಿ ನಟ ದರ್ಶನ್ ಸ್ವಲ್ಪ ಱಷ್ ಆಗಿ ಮಾತಾಡಿದ್ರು ಅಷ್ಟೇ. ಘಟನೆ ಬಳಿಕ ಪೊರಕೆ ತಂದವರು ಯಾರೆಂದು ಗೊತ್ತಿಲ್ಲ. ನನಗೆ ಮದುವೆ ಆಗಿಲ್ಲ. ನಾನು ಸ್ಟಿಲ್ ಬ್ಯಾಚುಲರ್’ ಎಂದು ಹೇಳುವ ಮೂಲಕ ದರ್ಶನ್ ಮೇಲಿದ್ದ ಆರೋಪವನ್ನು ಗಂಗಾಧರ್ ಅಲ್ಲಗಳೆದಿದ್ದಾರೆ.
ಇನ್ನು ಗಂಗಾಧರ್ ದಲಿತ. ದಲಿತರ ಮೇಲೆ ಹಲ್ಲೆಯಾಗಿದೆ ಎಂದು ಇಂದ್ರಜಿತ್ ಆರೋಪಿಸಿದ್ದರು. ಈ ಬಗ್ಗೆ ಮಾತನಾಡಿರುವ ಗಂಗಾಧರ್, ‘ನಾವು ದಲಿತರಲ್ಲ, ನಾವು ನಾಯರ್’ ಎಂದಿದ್ದಾರೆ. ಈ ಮೂಲಕ ಇಂದ್ರಜಿತ್ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ.
ದರ್ಶನ್ ಜತೆಗಿನ ಫ್ರೆಂಡ್ಶಿಪ್ ಬಗ್ಗೆಯೂ ಗಂಗಾಧರ್ ಮಾತನಾಡಿದ್ದಾರೆ. ‘ದರ್ಶನ್ ಯಾವಾಗ ಮೈಸೂರಿಗೆ ಬಂದ್ರೂ ನನಗೆ ಕರೆ ಮಾಡುತ್ತಾರೆ. ನನಗೆ ಕರೆ ಮಾಡಿಯೇ ದರ್ಶನ್ ಊಟ ಆರ್ಡರ್ ಮಾಡುತ್ತಾರೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ದರ್ಶನ್ ಹಲ್ಲೆ ಪ್ರಕರಣ: ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ನಲ್ಲಿ ಗಂಗಾಧರ್ ಹೇಳಿಕೆ ಪಡೆದ ಪೊಲೀಸರು
‘ದಲಿತನಲ್ಲ, ನಾನು ಬ್ರಾಹ್ಮಣ’: ದರ್ಶನ್ ಹಲ್ಲೆ ಪ್ರಕರಣದ ತನಿಖೆ ವೇಳೆ ಗಂಗಾಧರ್ ಹೇಳಿಕೆ