Kaatera Collection: 95 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ಕಾಟೇರ’; ಬಾಕ್ಸ್​ ಆಫೀಸ್​ನಲ್ಲಿ ದರ್ಶನ್​ ದಾಖಲೆ

| Updated By: Digi Tech Desk

Updated on: Jan 04, 2024 | 1:51 PM

Kaatera Box Office Collection: ಜಾತಿ ತಾರತಮ್ಯ ಮತ್ತು ರೈತರ ಸಮಸ್ಯೆಗಳ ಕುರಿತ ಕಥೆ ‘ಕಾಟೇರ’ ಸಿನಿಮಾದಲ್ಲಿದೆ. ಡೈಲಾಗ್​ಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಆ್ಯಕ್ಷನ್​ ದೃಶ್ಯಗಳನ್ನು ಮಾಸ್​ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 6 ದಿನಕ್ಕೆ ‘ಕಾಟೇರ’ ಚಿತ್ರ ಬರೋಬ್ಬರಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಚಿತ್ರತಂಡದ ಮೂಲಗಳು ಮಾಹಿತಿ ಹಂಚಿಕೊಂಡಿವೆ.

Kaatera Collection: 95 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ಕಾಟೇರ’; ಬಾಕ್ಸ್​ ಆಫೀಸ್​ನಲ್ಲಿ ದರ್ಶನ್​ ದಾಖಲೆ
ದರ್ಶನ್​
Follow us on

ಡಿಸೆಂಬರ್​ 29ರಂದು ಬಿಡುಗಡೆಯಾದ ‘ಕಾಟೇರ’ ಸಿನಿಮಾ (Kaatera Movie) ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ದರ್ಶನ್​ (Darshan) ಅಭಿನಯದ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ರೆಟ್ರೋ ಕಹಾನಿ ಇರುವ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್​ (Kaatera Box Office Collection) ಆಗುತ್ತಿದೆ. 6 ದಿನಕ್ಕೆ ‘ಕಾಟೇರ’ ಸಿನಿಮಾ ಬರೋಬ್ಬರಿ 95.36 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಚಿತ್ರತಂಡದ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿವೆ. ದರ್ಶನ್​ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಎಂಬ ಖ್ಯಾತಿಗೆ ‘ಕಾಟೇರ’ ಪಾತ್ರವಾಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಜಾತಿ ತಾರತಮ್ಯ ಮತ್ತು ರೈತರ ಸಮಸ್ಯೆಗಳ ಕುರಿತ ಕಥೆ ‘ಕಾಟೇರ’ ಸಿನಿಮಾದಲ್ಲಿ ಇದೆ. ಡೈಲಾಗ್​ಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಆ್ಯಕ್ಷನ್​ ದೃಶ್ಯಗಳನ್ನು ಮಾಸ್​ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮಾಲಾಶ್ರೀ ಮಗಳು ಆರಾಧನಾ ರಾಮ್​ ಅವರು ಈ ಸಿನಿಮಾದಲ್ಲಿ ದರ್ಶನ್​ಗೆ ಜೋಡಿಯಾಗಿ ನಟಿಸಿದ್ದಾರೆ. ಅವಿನಾಶ್​, ಶ್ರುತಿ, ವೈಜನಾಥ ಬೀರಾದಾರ, ಜಗಪತಿ ಬಾಬು, ವಿನೋದ್​ ಆಳ್ವಾ, ಕುಮಾರ್​ ಗೋವಿಂದ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Darshan Thoogudeepa: ಜನಸಾಮಾನ್ಯರಂತೆ ಮೆಟ್ಟಿಲ ಮೇಲೆ ಕುಳಿತು ‘ಕಾಟೇರ’ ವೀಕ್ಷಿಸಿದ ದರ್ಶನ್

‘ಕಾಟೇರ’ ಸಿನಿಮಾ ಮೊದಲ ದಿನ 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ (ಡಿ.30) 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಡಿ.31) ಬರೋಬ್ಬರಿ 20.94 ಕೋಟಿ ರೂಪಾಯಿ ಆದಾಯ ಹರಿದುಬಂತು. ಸೋಮವಾರ (ಜ.1) 18.26 ಕೋಟಿ ರೂಪಾಯಿ ಮತ್ತು ಮಂಗಳವಾರ (ಜ.2) 9.24 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಬುಧವಾರ 9.78 ಕೋಟಿ ರೂಪಾಯಿ ಗಳಿಕೆ ಆಗಿದೆ. ಒಟ್ಟು ಕಲೆಕ್ಷನ್​ 95.36 ಕೋಟಿ ರೂ. ಆಗಿದ್ದು, ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

‘ಕಾಟೇರ’ ಅಪ್ಪಟ ಕನ್ನಡದ ಸಿನಿಮಾ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಇದು ಬಿಡುಗಡೆ ಆಗಿಲ್ಲ. 6 ದಿನಕ್ಕೆ ಕೇವಲ ಕರ್ನಾಟದಲ್ಲೇ ಈ ಪರಿ ಕಲೆಕ್ಷನ್​ ಮಾಡಿದ ಕಾರಣಕ್ಕಾಗಿ ದರ್ಶನ್​ ಅವರು ದಾಖಲೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬದನ್ನು ಕಾದುನೋಡಬೇಕು. ಬುಧವಾರ (ಜ.3) ಬೆಂಗಳೂರಿನಲ್ಲಿ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:13 pm, Thu, 4 January 24