Darshan Thoogudeepa: ಜನಸಾಮಾನ್ಯರಂತೆ ಮೆಟ್ಟಿಲ ಮೇಲೆ ಕುಳಿತು ‘ಕಾಟೇರ’ ವೀಕ್ಷಿಸಿದ ದರ್ಶನ್
ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್ ಒಳಗೆ ತೆರಳಿದರು. ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.
ನಟ ದರ್ಶನ್ (Darshan) ಅವರು ‘ಕಾಟೇರ’ ಸಿನಿಮಾದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ವಿಮರ್ಶೆಯಲ್ಲಿ ಹಾಗೂ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿದೆ. ಈ ಸಿನಿಮಾದ ಗಳಿಕೆ ನೂರು ಕೋಟಿ ರೂಪಾಯಿ ಸನಿಹದಲ್ಲಿದೆ. ಬೆಂಗಳೂರಿನ ಮಾಲ್ ಒಂದರಲ್ಲಿ ಡಿಸೆಂಬರ್ 3ರಂದು ಈ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ಧನಂಜಯ್, ಅಮೂಲ್ಯ ಸೇರಿ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಈ ವೇಳೆ ದರ್ಶನ್ ಅವರು ಮೆಟ್ಟಿಲ ಮೇಲೆ ಕುಳಿತು ‘ಕಾಟೇರ’ ವೀಕ್ಷಿಸಿದ ಫೋಟೋ ವೈರಲ್ ಆಗಿದೆ.
ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರು ‘ಕಾಟೇರ’ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿದ್ದಾರೆ. ದರ್ಶನ್ ಅವರಿಂದ ಸ್ಫೂರ್ತಿ ಪಡೆದು ನಟನೆಗೆ ಬಂದಿರುವ ಧನ್ವೀರ್ ಕೂಡ ಆಗಮಿಸಿದ್ದರು. ನಟ ವಿನೋದ್ ಪ್ರಭಾಕರ್, ನಿರ್ದೇಶಕ ಯೋಗರಾಜ್ ಭಟ್, ನಟಿ ಮೇಘಾ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ, ಶ್ರುತಿ ಮೊದಲಾದ ಸೆಲೆಬ್ರಿಟಿಗಳು ಈ ಶೋ ವೀಕ್ಷಣೆಗೆ ಆಗಮಿಸಿದ್ದರು.
ಬಂದ ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್ ಒಳಗೆ ತೆರಳಿದರು. ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಈ ಫೋಟೋ ಫ್ಯಾನ್ಸ್ ವಲಯದಲ್ಲಿ ಹರಿದಾಡಿದೆ. ದರ್ಶನ್ ಯಾವಾಗಲೂ ಸಿಂಪಲ್ ಆಗಿ ಇರೋಕೆ ಇಷ್ಟ ಪಡುತ್ತಾರೆ. ಇದಕ್ಕೆ ಈ ಫೋಟೋ ಉತ್ತಮ ಉದಾಹರಣೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಇದನ್ನೂ ಓದಿ: ಇತಿಹಾಸ ಬರೆಯಲು ಸಿದ್ಧವಾದ ‘ಕಾಟೇರ’; ಐದು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?
‘ಕಾಟೇರ’ ಚಿತ್ರ ಮೊದಲ ದಿನ ಅಂದರೆ ಡಿಸೆಂಬರ್ 29ರಂದು 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ (ಡಿ.30)17.35 ಕೋಟಿ ರೂ., ಭಾನುವಾರ (ಡಿ.31) 20.94 ಕೋಟಿ ರೂ., ಸೋಮವಾರ(ಜ.1) 18.26 ಕೋಟಿ ರೂ. ಹಾಗೂ ಮಂಗಳವಾರ (ಜ.2) 9.24 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರದ ಒಟ್ಟಾರೆ ಗಳಿಕೆ 86.84 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Thu, 4 January 24