40 ರೂಪಾಯಿಗೆ ‘ಕಾಟೇರ’ ಪೈರಸಿ ಲಿಂಕ್ ಮಾರಾಟ; ಒಬ್ಬನ ಬಂಧನ; ಕಿಂಗ್ಪಿನ್ಗಾಗಿ ಶೋಧ
ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಯುವಕನೊಬ್ಬ 40 ರೂಪಾಯಿಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಯಚೂರು: ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ (Kaatera Movie) ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪೈರಸಿ ಕಾಟ ಕೂಡ ಶುರುವಾಗಿದೆ. ಕೆಲವು ಕಿಡಿಗೇಡಿಗಳು ಈ ಸಿನಿಮಾದ ಪೈರಸಿ ಕಾಪಿಯನ್ನು ಟಿಲಿಗ್ರಾಂ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಅಂಥವರ ವಿರುದ್ಧ ದೂರು ದಾಖಲಾಗಿದೆ. ರಾಯಚೂರಿನಲ್ಲಿ ‘ಕಾಟೇರ’ ಚಿತ್ರದ ಪೈರಸಿ (Kaatera Piracy Link) ಲಿಂಕ್ ಮಾರಾಟ ಮಾಡುತ್ತಿದ್ದ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ. ಕಿಂಗ್ ಪಿನ್ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬ ಯುವಕ 40 ರೂಪಾಯಿಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Kaatera Collection: 95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಕಾಟೇರ’; ಬಾಕ್ಸ್ ಆಫೀಸ್ನಲ್ಲಿ ದರ್ಶನ್ ದಾಖಲೆ
‘ಕಾಟೇರ’ ಸಿನಿಮಾಗೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಗುರುದೇಶಪಾಂಡೆ ಅವರು ಸಿನಿಮಾ ವಿತರಣೆ ಮಾಡಿದ್ದಾರೆ. ಪೈರಸಿ ಉಂಟಾಗಿದ್ದರಿಂದ ನಿರ್ಮಾಪಕರಿಗೆ ಮತ್ತು ವಿತರಕರಿಗೆ ನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ವಾದಿರಾಜ ಎಂಬುವವರು ದೂರು ದಾಖಲಿಸಿದ್ದಾರೆ. ‘ವಾಟ್ಸ್ ಆಪ್’ ಮೂಲಕ ಚಾಟ್ ಮಾಡಿ 40 ರೂಪಾಯಿ ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ‘ಕಾಟೇರ’ ಸಿನಿಮಾ ನೋಡಿ ಮೇಘಾ ಶೆಟ್ಟಿ ಫುಲ್ ಖುಷ್; ಒಂದೇ ಮಾತಲ್ಲಿ ವಿಮರ್ಶೆ ತಿಳಿಸಿದ ನಟಿ
ಇತ್ತೀಚೆಗೆ ‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಆ ಸಂದರ್ಭದಲ್ಲಿ ದರ್ಶನ್ ಅವರು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದರು. ಅದರ ನಡುವೆಯೂ ಪೈರಸಿ ಹಾವಳಿ ಮುಂದುವರಿದಿದೆ. ಇದರಿಂದ ಚಿತ್ರತಂಡಕ್ಕೆ ತೊಂದರೆ ಆಗುತ್ತಿದೆ. ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವಾ, ವೈಜನಾಥ ಬೀರಾದರ, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Thu, 4 January 24