Darshan Thoogudeepa: ದರ್ಶನ್​ ಗೆ 45 ದಿನ ಕಳೆದರೂ ಇಲ್ಲ ಶಸ್ತ್ರಚಿಕಿತ್ಸೆ; ಮುಂದಕ್ಕೆ ಹೋಗುತ್ತಿದೆ ಸರ್ಜರಿ ದಿನಾಂಕ 

| Updated By: Digi Tech Desk

Updated on: Dec 12, 2024 | 12:27 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಬೆನ್ನುಹುರಿ ಶಸ್ತ್ರಚಿಕಿತ್ಸೆಗಾಗಿ 45 ದಿನಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ, ಜಾಮೀನು ಅವಧಿ ಮುಗಿದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಶಸ್ತ್ರಚಿಕಿತ್ಸೆಯನ್ನು ಪದೇ ಪದೇ ಮುಂದೂಡುತ್ತಿದೆ. ನ್ಯಾಯಾಲಯವು ಜಾಮೀನು ವಿಸ್ತರಿಸಿದ್ದರೂ, ದರ್ಶನ್ ಅವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿಲ್ಲ ಎಂಬುದು ಚರ್ಚೆಗೆ ಕಾರಣವಾಗಿದೆ.

Darshan Thoogudeepa: ದರ್ಶನ್​ ಗೆ 45 ದಿನ ಕಳೆದರೂ ಇಲ್ಲ ಶಸ್ತ್ರಚಿಕಿತ್ಸೆ; ಮುಂದಕ್ಕೆ ಹೋಗುತ್ತಿದೆ ಸರ್ಜರಿ ದಿನಾಂಕ 
ದರ್ಶನ್
Follow us on

‘ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಸಾಕಷ್ಟು ತೊಂದರೆ ಆಗಲಿದೆ. ಅವರಿಗೆ ಪಾರ್ಶವಾಯು ಕೂಡ ಆಗಬಹುದು’ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಇದನ್ನು ಆಧರಿಸಿ ದರ್ಶನ್​ಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ, ಈಗ ಜಾಮೀನು ನೀಡಿ 45 ದಿನ ಕಳೆದರೂ ಯಾವುದೇ ಶಸ್ತ್ರಚಿಕಿತ್ಸೆ ಆಗಿಲ್ಲ. ‘ನಾಳೆ ಸರ್ಜರಿ ಮಾಡಿಸುತ್ತೇವೆ’ ಎಂದು ದಿನಗಳನ್ನು ಮುಂದೂಡುತ್ತಲೇ ಬರಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್​ ಗ್ಯಾಂಗ್ ಅರೆಸ್ಟ್ ಆಗಿದೆ. ಅವರು ಬೆಂಗಳೂರು ಜೈಲಿನಲ್ಲಿ ಹಾಯಾಗಿ ಇದ್ದರು. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಅವರಿಗೆ ತೀವ್ರ ಬೆನ್ನು ನೋವು ಆರಂಭ ಆಗಿತ್ತು. ಬೆನ್ನುಹುರಿ ಸರ್ಜರಿಗೆ ಕೋರ್ಟ್​ 45 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ದರ್ಶನ್ ಜಾಮೀನು ಸಿಕ್ಕ ಕೆಲವೇ ದಿನಗಳಲ್ಲಿ ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ದರ್ಶನ್ ಆಸ್ಪತ್ರೆಯಲ್ಲಿದ್ದಾರೆ. ಆದಾಗ್ಯೂ ಅವರಿಗೆ ಜಾಮೀನು ಸಿಕ್ಕಿಲ್ಲ. 45 ದಿನಗಳು ಕಳೆದರೂ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ದರ್ಶನ್ ಜಾಮೀನು ಅರ್ಜಿಯನ್ನು ಹೈಕೊರ್ಟ್ ಕಾಯ್ದಿರಿಸಿದೆ. ಮತ್ತೊಂದೆಡೆ ಮಧ್ಯಂತರ ಜಾಮೀನು ಸಹ ವಿಸ್ತರಿಸಿದೆ. ಕೋರ್ಟ್​ಗೆ ನೀಡಿದ್ದ ಹೇಳಿಕೆ ಪ್ರಕಾರ ದರ್ಶನ್ ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ಆದರೆ, ಅದೂ ನಡೆದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಡಿಸೆಂಬರ್ 11ರಂದು ದರ್ಶನ್​ಗೆ ಶಸ್ತ್ರಚಿಕಿತ್ಸೆ; ಇಲ್ಲಿದೆ ಸರ್ಜರಿಯ ಸಂಪೂರ್ಣ ವಿವರ

ದರ್ಶನ್​ ಅವರು ಸರ್ಜರಿ ಮಾಡಿಸಿಕೊಳ್ಳುವ ಉದ್ದೇಶದಿಂದಲೇ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಿಸ್ತರಣೆ ಮಾಡಿದೆ. ಆದಾಗ್ಯೂ ಅವರು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿಲ್ಲ. ಪದೇ ಪದೇ ಇದನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಇದೇ ಕಾರಣ ನೀಡಿ ಅವರ ಜಾಮೀನು ಅರ್ಜಿ ರದ್ದು ಮಾಡುವಂತೆ ಕೋರಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:15 am, Thu, 12 December 24