ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಇಲ್ಲಿದೆ ಹಳೆಯ ನೆನಪು

| Updated By: ರಾಜೇಶ್ ದುಗ್ಗುಮನೆ

Updated on: Sep 20, 2024 | 8:00 AM

ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದರು ಯಶ್. ಈ ವಿಚಾರ ಬಹುತೇಕರಿಗೆ ಗೊತ್ತು. ಅವರು ಈಗ ಕನ್ನಡ ಚಿತ್ರರಂಗವನ್ನು ಆಳುತ್ತಿದ್ದಾರೆ. ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ್ದಾರೆ ಅವರು. ಯಶ್ ಸಿನಿಮಾಗೆ ದರ್ಶನ್ ಕ್ಲ್ಯಾಪ್ ಮಾಡಿದ್ದರು. ಆ ಹಳೆಯ ವಿಡಿಯೋ ವೈರಲ್ ಆಗಿದೆ.

ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಇಲ್ಲಿದೆ ಹಳೆಯ ನೆನಪು
ಯಶ್-ದರ್ಶನ್
Follow us on

ಯಶ್ ಹಾಗೂ ದರ್ಶನ್ ಮಧ್ಯೆ ಗೆಳೆತನ ಇದೆ ಅಥವಾ ಇಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ ಅನ್ನೋದು ಅನೇಕರಿಗೆ ಗೊತ್ತು. ಇವರು ಸುಮಲತಾ ಪರವಾಗಿ ಪ್ರಚಾರ ಮಾಡಿದ್ದು ಗೊತ್ತೇ ಇದೆ. ಅದೇ ರೀತಿ ಸುಮಲತಾ ಹಮ್ಮಿಕೊಂಡಿದ್ದ ಪಾರ್ಟಿ ಒಂದರಲ್ಲಿ ದರ್ಶನ್ ಹಾಗೂ ಯಶ್ ಒಟ್ಟಾಗಿ ಕಾಣಿಸಿಕೊಂಡಿದ್ದನ್ನೂ ಕೂಡ ಇಲ್ಲಿ ನೆನಪು ಮಾಡಿಕೊಳ್ಳಬೇಕು. ಈ ಮೊದಲು ಯಶ್ ಸಿನಿಮಾಗೆ ದರ್ಶನ್ ಕ್ಲ್ಯಾಪ್ ಮಾಡಿದ್ದರು. ಆ ಹಳೆಯ ವಿಡಿಯೋ ನಿಮಗಾಗಿ.

ಯಶ್ ಅವರು ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದರು ಅನ್ನುವ ವಿಚಾರ ಬಹುತೇಕರಿಗೆ ಗೊತ್ತು. ಅವರು ಈಗ ಕನ್ನಡ ಚಿತ್ರರಂಗವನ್ನು ಆಳುತ್ತಿದ್ದಾರೆ. ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ್ದಾರೆ ಅವರು. ‘ಕೆಜಿಎಫ್ 2’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಯಶ್ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಯಶ್ ಆರಂಭಿಕ ದಿನಗಳಲ್ಲಿ ದರ್ಶನ್ ಜೊತೆ ಒಳ್ಳೆಯ ಗೆಳೆತನ ಇತ್ತು. ಈಗ ಈ ಫ್ರೆಂಡ್​ಶಿಪ್ ಹೇಗಿದೆ ಗೊತ್ತಿಲ್ಲ.

‘ಮೊದಲಸಲ’ ಸಿನಿಮಾದಲ್ಲಿ ಯಶ್ ಅವರು ನಟಿಸಿದ್ದರು. ಈ ಚಿತ್ರಕ್ಕೆ ಪುರುಷೋತ್ತಮ್ ಸೋಮನಾಥಪುರ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಬ್ರಮಾ ನಾಯಕಿ. ಯಶ್ ಅವರು ಕಾರ್ತಿಕ್ ಹೆಸರಿನ ಪಾತ್ರ ಮಾಡಿದ್ದರು. ಈ ಸಿನಿಮಾದ ಮೊದಲ ದಿನದ ಶೂಟ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ದರ್ಶನ್ ಅವರು ಕ್ಲ್ಯಾಪ್ ಮಾಡಿದ್ದರು.

ದರ್ಶನ್ ಅವರು ಬೋರ್ಡ್ ಹಿಡಿದು ಕ್ಲ್ಯಾಪ್ ಮಾಡಿದ್ದಾರೆ. ಯಶ್ ಅವರು ‘ಮೊದಲಸಲ’ ಎನ್ನುತ್ತಾರೆ. ಈ ಸಂದರ್ಭದಲ್ಲಿ ದರ್ಶನ್ ಹಾಗೂ ಯಶ್ ಒಟ್ಟಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಈ ವಿಡಿಯೋನ ಫ್ಯಾನ್ಸ್ ಇಷ್ಟಪಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ‘ನಮ್ಮ ಹೀರೋ ಎಲ್ಲರನ್ನೂ ಬೆಳೆಸಿದ್ದು’ ಎನ್ನುತ್ತಿದ್ದಾರೆ. (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)


ಇದನ್ನೂ ಓದಿ: ಅಮ್ಮನ ನೋಡಲು ಖುಷಿಯಿಂದ ಓಡೋಡಿ ಬಂದ ದರ್ಶನ್

ಈಗ ದರ್ಶನ್ ಪರಿಸ್ಥಿತಿ ಹೇಗಿದೆ ಎಂಬುದನ್ನು ಮತ್ತೆ ಹೊಸದಾಗಿ ಹೇಳಬೇಕಿಲ್ಲ. ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದ ಚಾರ್ಜ್​ಶೀಟ್ ಈಗಾಗಲೇ ಸಲ್ಲಿಕೆ ಆಗಿದೆ. ಇತ್ತ, ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.