AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿ ಉತ್ಸವದಲ್ಲಿ ದರ್ಶನ್: ಹಲವು ಮಹನೀಯರ ನೆನೆದ ನಟ

Darshan: ನಟ ದರ್ಶನ್ ತೂಗುದೀಪ ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ಹಲವು ಮಹನೀಯರನ್ನು ನೆನಪು ಮಾಡಿಕೊಂಡರು.

ಹಂಪಿ ಉತ್ಸವದಲ್ಲಿ ದರ್ಶನ್: ಹಲವು ಮಹನೀಯರ ನೆನೆದ ನಟ
ಮಂಜುನಾಥ ಸಿ.
|

Updated on:Feb 03, 2024 | 10:28 PM

Share

ಕಾಟೇರ’ (Kaatera) ಸಿನಿಮಾದ ಯಶಸ್ಸಿನ ಖುಷಿ ಅನುಭವಿಸುತ್ತಿರುವ ದರ್ಶನ್​ಗೆ ಅದರ ಬೆನ್ನಲ್ಲೆ ಕೆಲವು ವಿವಾದಗಳು ಸಹ ಹೆಗಲೇರಿವೆ. ಜೆಟ್​ಲ್ಯಾಗ್ ಪಬ್​ ಪಾರ್ಟಿ ಪ್ರಕರಣದ ಬಳಿಕ ವಿಜಯಲಕ್ಷ್ಮಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಪ್ರಕರಣ ತುಸು ಜೋರಾಗಿಯೇ ಸದ್ದು ಮಾಡಿತ್ತು. ಆದರೆ ಇದೆಲ್ಲದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ನಟ ದರ್ಶನ್, ಇಂದು ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ದರ್ಶನ್ ಅವರನ್ನು ಕಾಣಲು ಸಾವಿರಾರು ಮಂದಿ ಜನ ನೆರೆದಿದ್ದರು.

ವೇದಿಕೆ ಮೇಲೆ ಮಾತನಾಡಿದ ನಟ ದರ್ಶನ್ ಕೆಲವು ಮಹನೀಯರನ್ನು ನೆನಪಿಸಿಕೊಂಡರು. ‘ಕೃಷ್ಣದೇವರಾಯರು ಕಟ್ಟಿದ ಚಿನ್ನದಂಥಹಾ ಸಾಮ್ರಾಜ್ಯವಿದು. ಇಂಥಹ ನೆಲದಲ್ಲಿ ನಿಲ್ಲುವುದೇ ಅದೃಷ್ಟ. ಈ ಮಹಾನ್ ಸ್ಥಳದ ಇತಿಹಾಸ ನಮಗಿಂತಲೂ ನಿಮಗೇ ಹೆಚ್ಚೇ ಗೊತ್ತು. ನಾನು ಇಂಥಹಾ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲ ಕೆಲವು ಮಹನೀಯರನ್ನು ನೆನಪಿಸಿಕೊಳ್ಳುತ್ತೇನೆ. ಶ್ರೀಕೃಷ್ಣದೇವರಾಯ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಇವರುಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಇವರಿಂದ ಒಂದು ಪಾಸಿಟಿವಿಟಿ ನಮಗೆ ದೊರಕುತ್ತದೆ’ ಎಂದಿದ್ದಾರೆ.

ಹೊಸಪೇಟೆಯ ಉತ್ಸುವಾರಿ ಸಚಿವ ಜಮೀರ್ ಅಹ್ಮದ್ ಅವರ ಬಗ್ಗೆ ಮಾತನಾಡಿದ ದರ್ಶನ್, ‘ನನ್ನನ್ನು ಎಲ್ಲರೂ ಡಿ-ಬಾಸ್ ಎಂದು ಕರೆಯುತ್ತಾರೆ. ಆದರೆ ನಾನು ಜಮೀರ್ ಅವರನ್ನು ಭಾಯ್ ಎನ್ನುತ್ತೇನೆ. ಅವರು ತಮ್ಮ ಲಾಭಕ್ಕೆ ನನ್ನನ್ನು ಕರೆದವರಲ್ಲ. ಸಾರ್ವಜನಿಕ ಕಾರ್ಯಕ್ರಮಕ್ಕೆ ಮಾತ್ರವೇ ಕರೆಯುತ್ತಾರೆ. ದೇವಸ್ಥಾನ ಉದ್ಘಾಟನೆ, ಯಾವುದೋ ಸರ್ಕಾರಿ ಕಾರ್ಯಕ್ರಮ ಹೀಗೆ ಕರೆಯುತ್ತಲೇ ಇರುತ್ತಾರೆ. ಚುನಾವಣೆ ಬಂದಾಗ ನಾನೇ ಅವರನ್ನು ಕೇಳಿದ್ದಿದೆ ಬರಲಾ, ಪ್ರಚಾರ ಮಾಡಲಾ ಎಂದು. ಆದರೆ ಜಮೀರ್ ಅವರು ಎಂದಿಗೂ ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ನಾನು ಕೆಲವರ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದೇನೆ. ಗೆದ್ದ ಮೇಲೆ ಅಥವಾ ಸೋತ ಮೇಲೆ ತಿರುಗಿ ಸಹ ನೋಡದ ಕೆಲವರಿದ್ದಾರೆ. ಆದರೆ ಜಮೀರ್ ಹಾಗಲ್ಲ’ ಎಂದರು.

ಇದನ್ನೂ ಓದಿ:ಇವರೇ ನೋಡಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ನಾಯಕಿ

ಜಮೀರ್ ಅಹ್ಮದ್ ಅವರ ಪುತ್ರ ಝುನೈದ್ ಖಾನ್ ಅವರನ್ನೂ ಕೊಂಡಾಡಿದ ನಟ ದರ್ಶನ್, ಅಪ್ಪನಂತೆಯೇ ಮಗ ಸಹ, ಕೊಡುವುದರಲ್ಲಿ ಸದಾ ಮುಂದೆ. ಜಮೀರ್ ಅವರಂತೂ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವವರು. ನನ್ನ ಬಳಿ ಹಲವರು ಸಹಾಯ ಕೇಳಿ ಬರುತ್ತಾರೆ, ಯಾರಿಗೆ ನಾನು ಸಹಾಯ ಮಾಡಲು ಆಗುವುದಿಲ್ಲವೋ ಅಥವಾ ಬಜೆಟ್ ಹೆಚ್ಚಾಗಿದೆ ಎನಿಸಿದಾಗ ಅಂಥಹವರನ್ನು ಜಮೀರ್ ಅವರ ಬಳಿ ಕಳಿಸುತ್ತೇನೆ. ಅವರು ಎಲ್ಲರಿಗೂ ಸಹಾಯ ಮಾಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಕಲಾವಿದರನ್ನು ಮಾತನಾಡಿದ ದರ್ಶನ್, ‘ಅರುಣ್ ಸಾಗರ್, ನನ್ನ ಆಪ್ತ ಗೆಳೆಯರು. ಅವರು ಬಹಳ ಒಳ್ಳೆಯ ಸೆಟ್ ಹಾಕಿದ್ದಾರೆ. ಸಾಧು ಕೋಕಿಲ ಇದ್ದಾರೆ, ಗಾತ್ರದಲ್ಲಿ ಸಣ್ಣವರು ಆದರೆ ನಟನೆಯಲ್ಲಿ ಬಹಳ ಎತ್ತರದಲ್ಲಿರುವವರು ಎಂದರು. ಅಲ್ಲಿಯೇ ಇದ್ದ ಜಗಪ್ಪ ಹಾಗೂ ಅವರ ಪತ್ನಿಯನ್ನು ಮಾತನಾಡಿದರು. ಆಲ್ ಓಕೆಯ ಹಾಡುಗಳನ್ನು ಕೊಂಡಾಡಿದರು. ಕನ್ನಡ ಸಿನಿಮಾಗಳನ್ನು ನೋಡಿ, ಕನ್ನಡ ಕಲಾವಿದರನ್ನು ಬೆಳೆಸಿ ಎಂಬ ಮನವಿಯೊಂದಿಗೆ ಭಾಷಣ ಮುಗಿಸಿದರು ದರ್ಶನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Sat, 3 February 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ