ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಇವರ ಬಂಧನ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಪ್ರಕರಣದಲ್ಲಿ ಆರು ತಿಂಗಳ ಬಳಿಕ ದರ್ಶನ್ ಅವರು ಜಾಮೀನು ಪಡೆದಿದ್ದಾರೆ. ಅವರು ಸದ್ಯ ಮೈಸೂರಿನ ಫಾರ್ಮ್ಹೌಸ್ನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿ ತಮ್ಮ ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇದು ಒಂದು ಸಿಹಿ ಸುದ್ದಿ ಆದರೆ, ಇನ್ನೊಂದು ಸಿಹಿ ಸುದ್ದಿ ಕೂಡ ಇದೆ. ಅದುವೇ ‘ಡೆವಿಲ್’ ಸಿನಿಮಾದ ಶೂಟಿಂಗ್ ವಿಚಾರ.
ದರ್ಶನ್ ಜೈಲು ಸೇರುವುದಕ್ಕೂ ಮೊದಲೇ ಒಪ್ಪಿಕೊಂಡ ಚಿತ್ರ ‘ಡೆವಿಲ್’. ಈ ಸಿನಿಮಾದ ಶೂಟಿಂಗ್ ಕೂಡ ಕೊಂಚ ಕಂಪ್ಲೀಟ್ ಆಗಿತ್ತು. ಆದರೆ, ದರ್ಶನ್ ಬಂಧನದ ಬಳಿಕ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ನಿಂತು ಹೋಗಿತ್ತು. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ಶೂಟಿಂಗ್ಗೆ ಮುಹೂರ್ತ ಫಿಕ್ಸ್ ಆಗಿದೆಯಂತೆ.
ಸಂಕ್ರಾಂತಿ ಹಬ್ಬ ಮುಗಿದ ಬಳಿಕ ಅಂದರೆ ಜನವರಿ 20ರ ನಂತರ ‘ಡೆವಿಲ್’ ಚಿತ್ರದ ಶೂಟಿಂಗ್ ಮತ್ತೆ ಆರಂಭ ಆಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡುವ ತಾಂತ್ರಿಕ ವರ್ಗದವರಿಗೆ ಈ ಕುರಿತು ಸಂದೇಶ ರವಾನೆ ಆಗಿದೆ ಎನ್ನಲಾಗಿದೆ. ಈ ವಿಚಾರ ಕೇಳಿ ಡಿ ಬಾಸ್ ಅಭಿಮಾನಿಗಳು ಸಂಭ್ರಮಿಸೋದು ಪಕ್ಕಾ.
ಇದನ್ನೂ ಓದಿ: ಫಾರಂ ಹೌಸ್ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಸದ್ಯ ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ವಾಸಿ ಆಗಿಲ್ಲ. ಇದರ ಜೊತೆಗೆ ಜೈಲಿನಲ್ಲಿ ಇದ್ದ ಕಾರಣಕ್ಕೆ ಅವರು ತೂಕ ಕಳೆದುಕೊಂಡ ಬಗ್ಗೆ ವರದಿ ಆಗಿತ್ತು. ಹೀಗಾಗಿ, ಮತ್ತೆ ತೂಕ ಏರಿಸಿಕೊಳ್ಳುವ ಅಗತ್ಯ ಇದೆ. ಈ ಕಾರಣಕ್ಕೆ ‘ಡೆವಿಲ್’ ತಂಡದವರು ದರ್ಶನ್ ಇಲ್ಲದ ದೃಶ್ಯಗಳನ್ನು ಶೂಟ್ ಮಾಡಿಕೊಂಡು ಅವರು ಗುಣಮುಖರಾದ ಬಳಿಕ ದರ್ಶನ್ ಭಾಗದ ಶೂಟ್ ಪೂರ್ಣಗೊಳಿಸುತ್ತಾರಾ ಎನ್ನುವ ಪ್ರಶ್ನೆಯೂ ಇದೆ. ಸಂಕ್ರಾಂತಿ ಬಳಿಕ ಈ ಬಗ್ಗೆ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.