ದರ್ಶನ್​ ಬಂಧನದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ‘ಡೆವಿಲ್’ ನಿರ್ದೇಶಕ ಪ್ರಕಾಶ್

ದರ್ಶನ್ ಅವರ ಬಂಧನದಿಂದಾಗಿ ‘ಡೆವಿಲ್’ ಸಿನಿಮಾದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆ ಮುಂದೂಡಲ್ಪಟ್ಟಿದೆ. ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ಮಾಪಕ ಪ್ರಕಾಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.

ದರ್ಶನ್​ ಬಂಧನದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ‘ಡೆವಿಲ್’ ನಿರ್ದೇಶಕ ಪ್ರಕಾಶ್
ಪ್ರಕಾಶ್- ದರ್ಶನ್

Updated on: Aug 15, 2025 | 2:39 PM

‘ಡೆವಿಲ್’ ಸಿನಿಮಾದ ಮೊದಲ ಹಾಡು ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಇಂದು (ಜುಲೈ 15) ರಿಲೀಸ್ ಆಗಬೇಕಿತ್ತು. ಈ ಬಗ್ಗೆ ದರ್ಶನ್ (Darshan) ಕೂಡ ಮಾಹಿತಿ ನೀಡಿದ್ದರು. ಆದರೆ, ಅದಕ್ಕೂ ಮೊದಲೇ ದರ್ಶನ್ ಅರೆಸ್ಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಈ ಕಾರಣಕ್ಕೆ ‘ನೆಮ್ದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ. ‘ಡೆವಿಲ್’ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಕೂಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ಮಾತನಾಡಿದ್ದಾರೆ.

ಚಿನ್ನೇಗೌಡ ಅವರಿಗೆ ದರ್ಶನ್ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯ ಇದೆ. ಆ ಬಾಂಧವ್ಯವನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಇದು ಆಗಬಾರದಿತ್ತು, ಆಗಿ ಹೋಗಿದೆ. ದರ್ಶನ್ ಆಗಲೀ, ತೂಗುದೀಪ ಶ್ರೀನಿವಾಸ್ ಆಗಲಿ, ಮೀನಾ ಆಗಲಿ ಒಳ್ಳೆಯ ವ್ಯಕ್ತಿಗಳು. ಬಾಲ್ಯದಿಂದ ದರ್ಶನ್ ಚೆನ್ನಾಗಿ ಬೆಳೆದಿದ್ದಾನೆ. ನಮ್ಮನ್ನು ಕಂಡರೆ ಗೌರವ ಕೊಡುತ್ತಿದ್ದ. ಉಳಿದ ವಿಚಾರಗಳು ನನಗೆ ಗೊತ್ತಿಲ್ಲ’ ಎಂದಿದ್ದಾರೆ ಚಿನ್ನೇಗೌಡ.

‘ಡೆವಿಲ್’ ನಿರ್ದೇಶಕ ಹಾಗೂ ನಿರ್ಮಾಪಕ ಚಿನ್ನೇಗೌಡರ ತಂಗಿ ಮಗ. ‘ಪ್ರಕಾಶ್ ನನ್ನ ತಂಗಿ ಮಗ. ಸಿನಿಮಾದ ಟೈಟಲ್ ಒಂತರಾ ಇದೆ ಎಂದು ಪ್ರಕಾಶ್​ಗೆ ಹೇಳಿದ್ದೆ. ಈ ಟೈಟಲ್ ಸಿನಿಮಾಗೆ ಸೂಕ್ತ ಆಗುತ್ತದೆ ಎಂದ. ಆ ಬಳಿಕ ನಾನು ಏನನ್ನೂ ಹೇಳಿಲ್ಲ. ಈಗ ಚಿತ್ರದ ನಟ ದರ್ಶನ್ ಬಂಧನ ಆಗಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನಿಗೆ ತಲೆ ಬಾಗಲೇಬೇಕು’ ಎನ್ನುತ್ತಾರೆ ಅವರು.

ಇದನ್ನೂ ಓದಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಫ್ಲಾಪ್ ಆದರೂ ಭಾರೀ ಗಳಿಕೆ ಮಾಡಿದ ‘ವಾರ್ 2’; ಕೈ ಕೊಟ್ಟ ಹಿಂದಿ ಮಂದಿ
ರಜನಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು

ಚಿನ್ನೇಗೌಡ ಮಾತು

‘ಪ್ರಕಾಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾನೆ. ಅದನ್ನು ಹೇಗೆ ತಂದಿದ್ದಾರೆ ಅವನಿಗೆ ಗೊತ್ತು. ಸಿನಿಮಾಗೆ ಸಾಕಷ್ಟು ಹಣ ಖರ್ಚಾಗಿದೆ. ಹೀಗಾಗಿ, ಸಿನಿಮಾ ಮಾಡಿದ್ಮೇಲೆ ರಿಲೀಸ್ ಮಾಡಲೇಬೇಕಲ್ಲ. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿ ಬಂದಿದೆ ಎಂಬ ವಿಚಾರ ಗೊತ್ತಾಯಿತು’ ಎನ್ನುತ್ತಾರೆ ಚಿನ್ನೇಗೌಡ.

ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಳ್ಳುವವರ ಗಮನಕ್ಕೆ; ದರ್ಶನ್ ವಿಚಾರಣಾಧೀನ ಕೈದಿ ಸಂಖ್ಯೆ…

‘ಸಾಂಗ್ ಇಂದು ರಿಲೀಸ್ ಆಗಬೇಕಿತ್ತು. ಆದರೆ, ಆಗಿಲ್ಲ. ಅವನಿಗೆ ಕರೆ ಮಾಡಿದೆ ಸ್ವಿಚ್ ಆಫ್ ಬರ್ತಿದೆ. ಅವರಿಗೂ ನೋವು ತಂದಿರುತ್ತದೆ. ಡೆವಿಲ್ ಶೂಟಿಂಗ್ ಪೂರ್ಣಗೊಳಿಸಿದ್ದಾನೆ. ಸುದ್ದಿಗೋಷ್ಠಿ ಮಾಡಿ ಎಂದು ಪ್ರಕಾಶ್​ಗೆ ಹೇಳ್ತೀನಿ’ ಎಂದರು ಚಿನ್ನೇಸ್ವಾಮಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.