‘ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ’; ದರ್ಶನ್ ಕ್ಷಮೆ ಕೇಳಿದ್ದು ಯಾರ ಬಳಿ?

ದರ್ಶನ್ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಎರಡು ತಿಂಗಳ ಕಾಲ ಈ ಜೈಲಿನಲ್ಲಿದ್ದ ಅವರು ಜೈಲು ಸಿಬ್ಬಂದಿಗೆ ತಮ್ಮ ವರ್ತನೆಗೆ ಕ್ಷಮೆ ಕೇಳಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.

‘ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ’; ದರ್ಶನ್ ಕ್ಷಮೆ ಕೇಳಿದ್ದು ಯಾರ ಬಳಿ?
ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 31, 2024 | 9:05 AM

ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಹೊರ ಬಂದಿದ್ದಾರೆ. ಎರಡು ತಿಂಗಳಿಗೂ ಅಧಿಕ ಕಾಲ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದರು. ಆರೋಗ್ಯದ ಕಾರಣ ನೀಡಿ ಅವರನ್ನು ಹೊರಕ್ಕೆ ಕರೆತರಲಾಗಿದೆ. ದರ್ಶನ್ ಅವರು ಈಗ ಕೆಲವರ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಅವರು ಕ್ಷಮೆ ಕೇಳಿದ್ದು ಯಾರ ಬಳಿ? ಮಾಡಿದ ತಪ್ಪೇನು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ದರ್ಶನ್ ಅವರು ರೇಣುಕಾ ಸ್ವಾನಿ ಕೊಲೆ ಕೇಸ್​ನಲ್ಲಿ ಜೂನ್ 11ರಂದು ಅರೆಸ್ಟ್ ಆದರು. ಈ ಅವಧಿಯಲ್ಲಿ ದರ್ಶನ್ ಅವರು ಸಾಕಷ್ಟು ಕುಗ್ಗಿದ್ದಾರೆ. ಬೆಂಗಳೂರು ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದ ಅವರಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಸಮಸ್ಯೆ ಆದವು. ಬೆನ್ನು ನೋವು ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ದರ್ಶನ್ ಎರಡು ವಾರ ಜಾಮೀನು ಪಡೆದು ಬಂದಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್ ಎರಡು ತಿಂಗಳು ಇದ್ದರು. ಈಗ ದರ್ಶನ್ ಅವರು ಜೈಲಿನಲ್ಲಿದ್ದ ಸಿಬ್ಬಂದಿಗೆ ಕ್ಷಮೆ ಕೇಳಿದ್ದಾರೆ. ‘ನನ್ನಿಂದ  ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ದರ್ಶನ್ ಕೇಳಿರುವುದಾಗಿ ವರದಿ ಆಗಿದೆ.

‘ಪದೇ ಪದೇ ಅದು ಬೇಕು, ಇದು ಬೇಕು ಎಂದು ಕೇಳುತ್ತಿದ್ದೆ. ನಿಮಗೆ ತೊಂದರೆ ಕೊಟ್ಟಿದ್ದೇನೆ ಕ್ಷಮಿಸಿ’ ದರ್ಶನ್ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹೈ ಸೆಕ್ಯುರಿಟಿ ಸೆಲ್‌ನ ಸಿಬ್ಬಂದಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಇನ್ನು ಸಿಬ್ಬಂದಿಗಳೂ ದರ್ಶನ್​ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ‘ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ, ಆರೋಗ್ಯದ ಬಗ್ಗೆ ಗಮನ ಕೊಡಿ’ ಎಂದು ಜೈಲು ಸಿಬ್ಬಂದಿ ಕೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಅಕ್ಟೋಬರ್​ಗೆ ಬಂದೇ ಬರ್ತೀನಿ’; ದರ್ಶನ್​ ಹಳೆಯ ವಿಡಿಯೋ ವೈರಲ್

ದರ್ಶನ್ ಅವರು ಬಳ್ಳಾರಿ ಜೈಲು ಸೇರಿದಾಗಿನಿಂದ ಒಂದರ ಮೇಲೆ ಒಂದರಂತೆ ಬೇಡಿಕೆ ಇಡುತ್ತಲೇ ಬರುತ್ತಿದ್ದರು. ಮೊದಲು ಜೈಲಿನಲ್ಲಿ ಟಿವಿ ಬೇಕು ಎಂದರು. ಆ ಬಳಿಕ ಕುರ್ಚಿಗೆ ಬೇಡಿಕೆ ಇಟ್ಟರು. ಹೀಗೆ ಹಲವು ಬೇಡಿಕೆಗಳನ್ನು ದರ್ಶನ್ ಮನವಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ