‘ಜೈಲು ನರಕಯಾತನೆ, ಡಿಪ್ರೆಶನ್​ ಕಾಡುತ್ತೆ’; ದರ್ಶನ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಡೆನೂರು ಮನು

ಮಡೆನೂರು ಮನು ಅವರು ಜೈಲು ವಾಸದ ಕಷ್ಟಗಳನ್ನು ವಿವರಿಸಿದ್ದಾರೆ. ದರ್ಶನ್ ಅವರ ಜೈಲು ವಾಸದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಜೈಲು ಜೀವನ ನರಕಯಾತನೆ ಎಂದಿದ್ದಾರೆ. ಕುಟುಂಬದಿಂದ ದೂರ ಇರೋದಕ್ಕೆ ಮಾನಸಿಕ ಒತ್ತಡ ಎದುರಾಗುತ್ತವೆ ಎಂದು ಅವರು ಹೇಳಿದ್ದಾರೆ. ದರ್ಶನ್ ಅವರು ಶೀಘ್ರ ಬಿಡುಗಡೆ ಆಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

‘ಜೈಲು ನರಕಯಾತನೆ, ಡಿಪ್ರೆಶನ್​ ಕಾಡುತ್ತೆ’; ದರ್ಶನ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಡೆನೂರು ಮನು
ಮನು-ದರ್ಶನ್

Updated on: Sep 12, 2025 | 11:55 AM

ನಟ ದರ್ಶನ್ (Darshan) ಅವರು ಜೈಲಿನಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ಇತ್ತೀಚೆಗೆ ಕೋರ್ಟ್​ನಲ್ಲಿ ‘ನನಗೆ ವಿಷ ಕೊಡಿ’ ಎಂದು ಕೇಳಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈಗ ಮಡೆನೂರು ಮನು ಅವರು ಜೈಲು ವಾಸದ ಅನುಭವ ಹಂಚಿಕೊಂಡಿದ್ದಾರೆ. ಅವರು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕೆಲ ಕಾಲ ಜೈಲಿನಲ್ಲಿ ಇದ್ದರು. ಜೈಲು ವಾಸ ಬಲುಕಷ್ಟ ಎಂದು ಅವರು ಹೇಳಿದ್ದಾರೆ.

‘ಜೈಲು ಯಾವಾಗಲೂ ಜೈಲೇ. ನೀವು ಹೈಟೆಕ್ ಆಸ್ಪತ್ರೆಗೆ ಹೋದಿರಿ ಎಂದಿಟ್ಟುಕೊಳ್ಳಿ, ಅಲ್ಲಿ ಸೂಜಿ ಸುಚ್ಚಿಸಿಕೊಳ್ಳಲೇಬೇಕು. ಅದೇ ರೀತಿ ಜೈಲು ಕೂಡ. ಅಲ್ಲಿ ಹೋದಮೇಲೆ ನರಕಯಾತನೆ ಅನುಭವಿಸಲೇಬೇಕು. ಜೈಲಿಗೆ ಹೋದ ಬಳಿಕ ನಾವು ಕುಟುಂಬದವರನ್ನು ಕಳೆದುಕೊಳ್ಳುತ್ತೇವೆ. ಕನಸು ಇರುವವರು ಒಳಗೆ ಹೋದರೆ ಸಾಕಷ್ಟು ತೊಂದರೆ ಆಗುತ್ತದೆ’ ಎಂದು ಮಡೆನೂರು ಮನು ‘ಫಸ್ಟ್ ಡೇ ಫಸ್ಟ್ ಶೋ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ
ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್

ಆಗಾಗ ಜೈಲಿಗೆ ಯಾರಾದರೂ ಬಂದು ನೋಡಿಕೊಂಡು ಹೋಗಲು ಅವಕಾಶ ಇರುತ್ತದೆ. ಆ ದಿನ ಮಾತ್ರ ಖುಷಿಯಿಂದ ಕಳೆಯಬಹುದು ಎಂಬುದು ಮನು ಮಾತು. ‘ನಮ್ಮ ಕಡೆಯವರು ಯಾರಾದರೂ ಬಂದಿದಾದರಾ ಎಂದು ಜೈಲಿನಲ್ಲಿ ದಿನಾ ಕೇಳುತ್ತಾ ಇದ್ದೆ. ಯಾದರೂ ಬಂದು ಹೋದ ಎರಡು ಗಂಟೆ ಚೆನ್ನಾಗಿರುತ್ತದೆ. ಆ ಬಳಿಕ ಮತ್ತೆ ಬೇಸರ’ ಎನ್ನುತ್ತಾರೆ ಅವರು.

ಇದನ್ನೂ ಓದಿ: ಪ್ರಥಮ್​​ಗೆ ಧಮ್ಕಿ ಹಾಕಿದ ಕೇಸ್: ದರ್ಶನ್ ಇರುವ ಜೈಲಿಗೆ ಬೇಕರಿ ರಘು, ಯಶಸ್ವಿನಿ ಗೌಡ ಶಿಫ್ಟ್

‘ಯಾವ ಶತ್ರುಗಳಿಗೂ ಈ ಜೈಲು ಶಿಕ್ಷೆ ಬೇಡ. ಅಲ್ಲಿ ವಿವಿಧ ಕೇಸ್​ನಲ್ಲಿ ಒಳಗೆ ಬಂದವರು ಇರ್ತಾರೆ. ಅವರ ಮಧ್ಯೆ ನಾವು ಇರಬೇಕು. ನಾನು ಮೂಲೆಯಲ್ಲಿ ಕುಳಿತಿದ್ದೆ. ಆ ಜೀವನ ಯಾರಿಗೂ ಬೇಡ. ಸೊಳ್ಳೆ ಕಚ್ಚುತ್ತೆ. ಬೆಳಿಗ್ಗೆ 7 ಗಂಟೆಗೆ ತಿಂಡಿ, ಮಧ್ಯಾಹ್ನ 11ಕ್ಕೆ ಹಾಗೂ ಸಂಜೆ 5ಕ್ಕೆ ಊಟ. ಒಂದೊಂದು ದಿನವೂ ಕಳೆಯೋಕೆ ಆಗಲ್ಲ. ಡಿಪ್ರೆಶನ್​ಗೆ ಹೋಗುವ ಸಾಧ್ಯತೆ ಇರುತ್ತದೆ. ದರ್ಶನ್ ಬೇಗ ರಿಲೀಸ್ ಆಗಲಿ ಎಂಬುದು ನನ್ನ ಕೋರಿಕೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:51 am, Fri, 12 September 25