34ನೇ ಹುಟ್ಟುಹಬ್ಬ: ಡಿಫ್ರೆಂಟ್ ಆಗಿ ಆಚರಿಸಲು ಸಜ್ಜಾದ ದೀಪಿಕಾ

ಸಾಧು ಶ್ರೀನಾಥ್​

|

Updated on:Jan 06, 2020 | 1:15 PM

ಬಾಲಿವುಡ್​ನ ಸ್ಟಾರ್ ನಟಿ ದೀಪಿಕಾ ಪಡುಕೋಣೆಗೆ ಹುಟ್ಟು ಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟು ಹಬ್ಬವನ್ನ ನಟಿ ದೀಪಿಕಾ ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ. ಈ ಸಂಭ್ರಮದಲ್ಲಿ ರಣ್ವೀರ್​ ಇರೋದಿಲ್ಲವಂತೆ. ಹಾಗಿದ್ರೆ ಡಿಪ್ಪಿ ಆ ಡಿಫ್ರೆಂಟ್​ ಪ್ಲ್ಯಾನ್​ ಏನು ಅನ್ನೋದ್ರ ಕಂಪ್ಲೀಟ್​ ಡೀಟೈಲ್ಸ್​ ಇಲ್ಲಿದೆ. ದೀಪಿಕಾ ಪಡುಕೋಣೆ. ಬಿಟೌನ್​ನಲ್ಲಿ ಮಿನುಗುತ್ತಿರುವ ಬ್ಯೂಟಿ. ಓಂ ಶಾಂತಿ ಓಂ. ಬಾಜೀರಾವ್ ಮಸ್ತಾನಿಯಂಥಾ ಅನೇಕ್ ಹಿಟ್ ಸಿನಿಮಾಗಳಲ್ಲಿ ಮಿಂಚಿದ ಸುಂದರಿ. ನೀಳ ಕಾಯ ಮತ್ತು ನಟನೆಯ ಮೂಲಕ ದಶಕದಿಂದ ಬಾಲಿವುಡ್ ಆಳುತ್ತಿರೋ ದೀಪಿಕಾ […]

34ನೇ ಹುಟ್ಟುಹಬ್ಬ: ಡಿಫ್ರೆಂಟ್ ಆಗಿ ಆಚರಿಸಲು ಸಜ್ಜಾದ ದೀಪಿಕಾ

Follow us on

ಬಾಲಿವುಡ್​ನ ಸ್ಟಾರ್ ನಟಿ ದೀಪಿಕಾ ಪಡುಕೋಣೆಗೆ ಹುಟ್ಟು ಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟು ಹಬ್ಬವನ್ನ ನಟಿ ದೀಪಿಕಾ ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ. ಈ ಸಂಭ್ರಮದಲ್ಲಿ ರಣ್ವೀರ್​ ಇರೋದಿಲ್ಲವಂತೆ. ಹಾಗಿದ್ರೆ ಡಿಪ್ಪಿ ಆ ಡಿಫ್ರೆಂಟ್​ ಪ್ಲ್ಯಾನ್​ ಏನು ಅನ್ನೋದ್ರ ಕಂಪ್ಲೀಟ್​ ಡೀಟೈಲ್ಸ್​ ಇಲ್ಲಿದೆ.

ದೀಪಿಕಾ ಪಡುಕೋಣೆ. ಬಿಟೌನ್​ನಲ್ಲಿ ಮಿನುಗುತ್ತಿರುವ ಬ್ಯೂಟಿ. ಓಂ ಶಾಂತಿ ಓಂ. ಬಾಜೀರಾವ್ ಮಸ್ತಾನಿಯಂಥಾ ಅನೇಕ್ ಹಿಟ್ ಸಿನಿಮಾಗಳಲ್ಲಿ ಮಿಂಚಿದ ಸುಂದರಿ. ನೀಳ ಕಾಯ ಮತ್ತು ನಟನೆಯ ಮೂಲಕ ದಶಕದಿಂದ ಬಾಲಿವುಡ್ ಆಳುತ್ತಿರೋ ದೀಪಿಕಾ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ದೀಪಿಕಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಪ್ರತಿ ಬಾರಿ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡ್ತಿದ್ದ ದೀಪಿಕಾ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನ ವಿಭಿನ್ನವಾಗಿ ಆಚರಿಸಿಕೊಳ್ತಿದ್ದಾರೆ. ಈ ಸಂಭ್ರಮದಲ್ಲಿ ದೀಪಿಕಾ ಪತಿ ರಣ್ವೀರ್​ ಮತ್ತು ಕುಟುಂಬಸ್ಥರು, ಸ್ನೇಹಿತರು ಇರೋದಿಲ್ಲವಂತೆ. ಯಾಕಂದ್ರೆ ದೀಪಿಕಾ ಌಸಿಡ್ ಸಂತ್ರಸ್ತೆಯರ ಜೊತೆಗೆ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ.

ಚಪಾಕ್ ಸಿನಿಮಾದಲ್ಲಿ ನಟಿ ದೀಪಿಕಾ ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್​ ಪಾತ್ರಕ್ಕೆ ಜೀವತುಂಬಿದ್ದಾರೆ. ಈ ಪಾತ್ರ ದೀಪಿಕಾ ತುಂಬಾನೇ ಕನೆಕ್ಟ್ ಆಗಿ ಬಿಟ್ಟಿದ್ದಾರಂತೆ. ಹೀಗಾಗಿ, ಸಂತ್ರಸ್ತೆಯರ ಜತೆಗೇ ಕೇಕ್​ ಕಟ್​ ಮಾಡಲು ಡಿಪ್ಪಿ ನಿರ್ಧರಿಸಿದ್ದಾರೆ. ಲಖನೌದಲ್ಲಿನ ಕೆಫೆವೊಂದ್ರಲ್ಲಿ 34ನೇ ಹುಟ್ಟುಹಬ್ಬವನ್ನ ದೀಪಿಕಾ ಆಚರಿಸಿಕೊಳ್ಳಲಿದ್ದಾರೆ. ಆ ಕೆಫೆ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸೇರಿದ್ದು ಅನ್ನೋದು ಮತ್ತೊಂದು ವಿಶೇಷ.

ಈ ಬಾರಿಯ ಹುಟ್ಟು ಹಬ್ಬಕ್ಕೆ ಸಂದರ್ಭದಲ್ಲಿ ದೀಪಿಕಾ ಹೊಸದೊಂದು ದಾಖಲೆ ಬರೆದಿದ್ದಾರೆ. ಫೋರ್ಬ್ಸ್​ ಹೊರತಂದ ಶ್ರೀಮಂತರ ಮೊದಲ ಪಟ್ಟಿಯಲ್ಲಿ ದೀಪಿಕಾ ಹೆಸ್ರು ಸೇರ್ಪಡೆಗೊಂಡಿದೆ. ದೀಪಿಕಾಳ ನಿವ್ವಳ ಆಸ್ತಿ ಮೌಲ್ಯ 100 ಕೋಟಿ ಅಂತಾ ಘೋಷಿಸಲಾಗಿದೆ. ಇನ್ನು ಬಾಲಿವುಡ್ ನಟಿಯರ ಪೈಕಿ ದೀಪಿಕಾಗೆ ಹೆಚ್ಚಿನ ಬೇಡಿಕೆ ಇದೆ. ಅನೇಕ ಬ್ರ್ಯಾಂಡ್​ಗಳಿಗೆ, ಬ್ರ್ಯಾಂಡ್ ಅಂಬಾಸಿಡರ್ ಆಗೋ ದೀಪಿಕಾ 8 ಕೋಟಿ ಚಾರ್ಜ್ ಮಾಡ್ತಾರಂತೆ. ಜೊತೆಗೆ ದುಬಾರಿ ಲೈಫ್ ಸ್ಟೈಲ್ ಮೂಲಕವೂ ಡಿಪ್ಪಿ ಗಮನ ಸೆಳೆದಿದ್ದಾರೆ.

ಒಟ್ನಲ್ಲಿ, ನಟಿ ದೀಪಿಕಾ ಪಡುಕೋಣೆ ಈ ಬಾರಿಯ ಹುಟ್ಟು ಹಬ್ಬದ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಜೊತೆಗೆ ಚಪಾಕ್ ಸಿನಿಮಾದ ರಿಲೀಸ್​ಗಾಗಿ ಕಾಯ್ತಿದ್ದಾರೆ. ಚಪಾಕ್ ನಂತ್ರ ದೀಪಿಕಾ ಸಿನಿಮಾ ಬೇಡಿಕೆ ಎಷ್ಟು ಹೆಚ್ಚುತ್ತದೆ ಅನ್ನೋ ಕುತೂಹವೂ ಹುಟ್ಟುಕೊಂಡಿದೆ.

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada