Yellow Gangs: ಗೆಳೆಯರೇ ಕಟ್ಟಿಕೊಂಡ ‘ಯೆಲ್ಲೋ ಗ್ಯಾಂಗ್ಸ್​’; ನ.11ಕ್ಕೆ ಬಿಡುಗಡೆ ಆಗಲಿದೆ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ

Yellow Gangs Trailer: ಪೂರ್ತಿ ಸಿನಿಮಾವನ್ನು ಟ್ರ್ಯಾಲಿ ಬಳಸದೇ ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳು ತಮ್ಮ ಸಿನಿಮಾದಲ್ಲಿವೆ ಎಂದು ಹೇಳಿಕೊಂಡಿದೆ ‘ಯೆಲ್ಲೋ ಗ್ಯಾಂಗ್ಸ್​’ ಚಿತ್ರತಂಡ.

Yellow Gangs: ಗೆಳೆಯರೇ ಕಟ್ಟಿಕೊಂಡ ‘ಯೆಲ್ಲೋ ಗ್ಯಾಂಗ್ಸ್​’; ನ.11ಕ್ಕೆ ಬಿಡುಗಡೆ ಆಗಲಿದೆ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ
ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ
Follow us
TV9 Web
| Updated By: ಮದನ್​ ಕುಮಾರ್​

Updated on:Oct 20, 2022 | 8:43 AM

ಡಿಫರೆಂಟ್​ ಸಿನಿಮಾಗಳು ಟ್ರೇಲರ್​ ಮೂಲಕವೇ ಗಮನ ಸೆಳೆಯುತ್ತವೆ. ಚಿತ್ರದಲ್ಲಿ ಆಸಕ್ತಿಕರ ಕಂಟೆಂಟ್​ ಇದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ನೀಡುತ್ತದೆ. ಹೊಸಬರ ‘ಯೆಲ್ಲೋ ಗ್ಯಾಂಗ್ಸ್​’ (Yellow Gangs) ಸಿನಿಮಾ ಕೂಡ ಇದೇ ವಿಚಾರಕ್ಕೆ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್​ (Yellow Gangs Trailer) ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಕ್ರೈಮ್ ಥ್ರಿಲ್ಲರ್ ಕಥಾಹಂದರ ಇದೆ. ರಾಬರಿ ರೀತಿಯ ಕೌತುಕದ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಲಲು ಚಿತ್ರತಂಡ ಸಜ್ಜಾಗಿದೆ. ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಪ್ರೇಕ್ಷಕರು ಯಾವಾಗಲೂ ಕೈ ಹಿಡಿಯುತ್ತಾರೆ. ತಮ್ಮ ಚಿತ್ರಕ್ಕೂ ಜನರಿಂದ ಅದೇ ರೀತಿಯ ಸ್ಪಂದನೆ ಸಿಗಲಿದೆ ಎಂಬ ಭರವಸೆಯೊಂದಿಗೆ ‘ಯೆಲ್ಲೋ ಗ್ಯಾಂಗ್ಸ್​ ತಂಡ ಬರುತ್ತಿದೆ. ನವೆಂಬರ್​ 11ರಂದು ಈ ಚಿತ್ರ ಬಿಡುಗಡೆ ಆಗಲಿದೆ. ದೇವ್ ದೇವಯ್ಯ (Dev Devaiah), ಅರ್ಚನಾ ಕೊಟ್ಟಿಗೆ ಮುಂತಾದವರು ಇದರಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ವಿಶೇಷ ಏನೆಂದರೆ, ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಿದ ಸಿನಿಮಾ ಇದು. ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆಗಳ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಸೇರಿಕೊಂಡು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ರವೀಂದ್ರ ಪರಮೇಶ್ವರಪ್ಪ ಅವರು ‘ಯೆಲ್ಲೋ ಗ್ಯಾಂಗ್ಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಸಹಪಾಠಿಗಳೆಲ್ಲರೂ ಹಣ ಹೂಡಿ ಸ್ನೇಹಿತನಿಗೆ ಬೆಂಬಲ ನೀಡಿದ್ದಾರೆ. ‘ಬೇರೊಂದು ಉದ್ಯೋಗ ಮಾಡುತ್ತಿದ್ದ ನನ್ನನ್ನು ಚಿತ್ರರಂಗ ಆಕರ್ಷಿಸಿತು. ಮೊದಲ ಪ್ರಯತ್ನವಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ನಮ್ಮದು ಸ್ವಲ್ಪ ಭಿನ್ನ’ ಎಂದಿದ್ದಾರೆ ನಿರ್ದೇಶಕರು.

ಇದನ್ನೂ ಓದಿ
Image
‘ಆ ದಿನಗಳು’ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ
Image
‘ಸಂಸ್ಕೃತಿ ಬಗ್ಗೆ ಮಾತಾಡುವಷ್ಟು ಅರ್ಹತೆ ನನಗೆ ಇಲ್ಲ, ಹಾಗೇ ಕೇಳುವವರಿಗೆ ಇದೆಯೋ ಗೊತ್ತಿಲ್ಲ’-ರಿಷಬ್ ಶೆಟ್ಟಿ
Image
‘ದಿ ಕಾಶ್ಮೀರ್ ಫೈಲ್ಸ್ 2’ ಮಾಡುವ ಸೂಚನೆ ಕೊಟ್ಟ ವಿವೇಕ್ ಅಗ್ನಿಹೋತ್ರಿ; ಇದರಲ್ಲಿರೋ ಅಂಶಗಳೇನು?
Image
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?

(‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾ ಟ್ರೇಲರ್ ಲಾಂಚ್​ ಸಮಾರಂಭ)

ನಾಯಕ ದೇವ್ ದೇವಯ್ಯ, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ಈ ಸಿನಿಮಾದಲ್ಲಿ ಇವೆ. ‘ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಮೂರು ಗ್ಯಾಂಗ್ ಇರಲಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರು ಇರುತ್ತಾರೆ’ ಎಂದು ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು. ಸುಜ್ಞಾನ್ ಅವರ ಛಾಯಾಗ್ರಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಪೂರ್ತಿ ಸಿನಿಮಾವನ್ನು ಟ್ರ್ಯಾಲಿ ಬಳಸದೇ ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳು ತಮ್ಮ ಸಿನಿಮಾದಲ್ಲಿವೆ ಎಂದು ಹೇಳಿಕೊಂಡಿದೆ ‘ಯೆಲ್ಲೋ ಗ್ಯಾಂಗ್ಸ್​’ ಬಳಗ.

ವಿಕ್ರಮ್ ಎಂಬ ಹೆಸರಿನಿಂದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ದೇವ್ ದೇವಯ್ಯ ನಟಿಸಿದ್ದಾರೆ. ಒಂದೊಳ್ಳೆಯ ಸಿನಿಮಾದಲ್ಲಿ ಅಭಿನಯಿಸಿದ ಖುಷಿಯಲ್ಲಿದ್ದಾರೆ ನಾಯಕಿ ಅರ್ಚನಾ ಕೊಟ್ಟಿಗೆ. ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರವೀಣ್​ ಕುಮಾರ್​ ಸಂಭಾಷಣೆ ಬರೆದಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಈ ಚಿತ್ರತಂಡವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:43 am, Thu, 20 October 22

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’