ಶುರುವಾಯ್ತು Kantara For Oscars ಆಂದೋಲನ; ಟ್ವಿಟರ್ನಲ್ಲಿ ಅಭಿಮಾನಿಗಳ ಹಕ್ಕೊತ್ತಾಯ
Kantara For Oscars: ‘ಕಾಂತಾರ’ ಚಿತ್ರವನ್ನು ಆಸ್ಕರ್ಗೆ ನಾಮನಿರ್ದೇಶನ ಮಾಡಬೇಕು ಎಂದು ಅನೇಕರು ಟ್ವಿಟರ್ನಲ್ಲಿ ಹಕ್ಕೊತ್ತಾಯ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ಪಾಲಿಗೆ 2022 ವಿಶೇಷವಾಗಿದೆ. ಈ ವರ್ಷ ಅನೇಕ ಚಿತ್ರಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಇದರಿಂದ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿದೆ. ‘ಕಾಂತಾರ’ (Kantara Movie) ಕೂಡ ನೂರು ಕೋಟಿ ರೂಪಾಯಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಈಗ ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆ. ‘ಕಾಂತಾರ’ ನೋಡಿದ ಅನೇಕರು ಈ ಚಿತ್ರವನ್ನು ಆಸ್ಕರ್ ಅವಾರ್ಡ್ಗೆ ನಾಮ ನಿರ್ದೇಶನ ಮಾಡಬೇಕು ಎಂದು ಹಕ್ಕೊತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
‘ಕಾಂತಾರ’ ಚಿತ್ರದಲ್ಲಿ ಕಾಡುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಷ್ಟೇ ಅಲ್ಲ, ದೈವಗಳ ಬಗ್ಗೆ ಜಗತ್ತಿಗೆ ಪರಿಚಯಿಸಲಾಗಿದೆ. ಹಿನ್ನೆಲೆ ಸಂಗೀತ, ಸಿನಿಮಾದ ಛಾಯಾಗ್ರಹಣದ ಮೂಲಕವೂ ಸಿನಿಮಾ ಗಮನ ಸೆಳೆದಿದೆ. ಈಗ ‘ಕಾಂತಾರ’ ಚಿತ್ರವನ್ನು ಆಸ್ಕರ್ಗೆ ನಾಮನಿರ್ದೇಶನ ಮಾಡಬೇಕು ಎಂದು ಅನೇಕರು ಟ್ವಿಟರ್ನಲ್ಲಿ ಹಕ್ಕೊತ್ತಾಯ ಮಾಡುತ್ತಿದ್ದಾರೆ.
KantaraForOscars ಹ್ಯಾಶ್ಟ್ಯಾಗ್ ಅಡಿಯಲ್ಲಿ ಅನೇಕರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಪರಭಾಷಿಗರು ಕೂಡ ‘ಕಾಂತಾರ’ ಚಿತ್ರ ಆಸ್ಕರ್ ಪ್ರಶಸ್ತಿ ರೇಸ್ಗೆ ಸೇರಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಮಧ್ಯೆ ‘ಕಾಂತಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂಬ ಕೂಗು ಕೂಡ ಕೇಳಿ ಬಂದಿದೆ.
ರಾಜಮೌಳಿ ನಿರ್ದೇಶಣದ ‘ಆರ್ಆರ್ಆರ್’ ಸಿನಿಮಾ ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಆಸ್ಕರ್ಗೆ ನಾಮ ನಿರ್ದೇಶನಗೊಂಡಿಲ್ಲ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನ ಶುರುವಾಗಿತ್ತು. ಈ ಚಿತ್ರಗಳನ್ನು ಆಸ್ಕರ್ಗೆ ನಾಮ ನಿರ್ದೇಶನ ಮಾಡಬೇಕು ಎಂದು ಕೆಲವರು ಟ್ವೀಟ್ ಮಾಡಿದ್ದರು.