AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Head Bush ಧನಂಜಯ್ ನಟನೆಯ ‘ಹೆಡ್ ​ಬುಷ್’ ಸಿನಿಮಾ ನೋಡೋಕೆ ಇಲ್ಲಿದೆ ಐದು ಕಾರಣಗಳು

ಇಡೀ ಸಿನಿಮಾ ನೈಜ ಘಟನೆ ಆಧಾರಿತವಾಗಿದೆ. ಇದು ಡಾನ್ ಜಯರಾಜ್​ನ ಬಯೋಪಿಕ್. ಇದನ್ನು ತೆರೆಮೇಲೆ ಹೇಗೆ ತರಲಾಗಿದೆ ಎಂಬುದನ್ನು ಕಣ್ತುಂಬಿಕೊಳ್ಳುವ ಕುತೂಹಲ ಸಿನಿಪ್ರಿಯರದ್ದು.

Head Bush ಧನಂಜಯ್ ನಟನೆಯ ‘ಹೆಡ್ ​ಬುಷ್’ ಸಿನಿಮಾ ನೋಡೋಕೆ ಇಲ್ಲಿದೆ ಐದು ಕಾರಣಗಳು
ಧನಂಜಯ್
TV9 Web
| Edited By: |

Updated on:Oct 20, 2022 | 5:52 PM

Share

ಇದು ಹಬ್ಬದ ಸಮಯ. ನವರಾತ್ರಿ ಪೂರ್ಣಗೊಂಡು ದೀಪಾವಳಿ ಸಮೀಪಿಸಿದೆ. ಈ ಸಂದರ್ಭದಲ್ಲಿ ಧನಂಜಯ್ ನಟನೆಯ ‘ಹೆಡ್​ ಬುಷ್’ ಸಿನಿಮಾ (Head Bush Movie) ತೆರೆಗೆ ಬರುತ್ತಿದೆ. ಈ ವಾರ (ಅಕ್ಟೋಬರ್ 21) ‘ಹೆಡ್ ಬುಷ್’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು (ಅಕ್ಟೋಬರ್ 20) ಬೆಂಗಳೂರಿನ ನಾನಾ ಕಡೆಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಈ ಪೈಕಿ ಬಹುತೇಕ ಶೋಗಳು ಹೌಸ್​ಫುಲ್ ಆಗಿದೆ. ಇದು ಚಿತ್ರದ ಬಗ್ಗೆ ಸೃಷ್ಟಿಯಾದ ನಿರೀಕ್ಷೆಗೆ ಸಾಕ್ಷಿ ಆಗಿದೆ. ಈ ಸಿನಿಮಾ ನೋಡಲು ಐದು ಕಾರಣಗಳು ಇಲ್ಲಿವೆ.

ನೈಜ ಘಟನೆ ಆಧಾರಿತ

ಡಾನ್ ಎಂ.ಪಿ. ಜಯರಾಜ್ ಅವರ ಜೀವನ ಆಧರಿಸಿ ‘ಹೆಡ್​ ಬುಷ್’ ಚಿತ್ರ ಸಿದ್ಧಗೊಂಡಿದೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಅಗ್ನಿ ಶ್ರೀಧರ್ ಅವರ ‘ಮೈ ಡೇಸ್ ಇನ್ ಅಂಡರ್​ವರ್ಲ್ಡ್’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಇಡೀ ಸಿನಿಮಾ ನೈಜ ಘಟನೆ ಆಧಾರಿತವಾಗಿದೆ. ಇದು ಡಾನ್ ಜಯರಾಜ್​ನ ಬಯೋಪಿಕ್. ಇದನ್ನು ತೆರೆಮೇಲೆ ಹೇಗೆ ತರಲಾಗಿದೆ ಎಂಬುದನ್ನು ಕಣ್ತುಂಬಿಕೊಳ್ಳುವ ಕುತೂಹಲ ಸಿನಿಪ್ರಿಯರದ್ದು.

ಧನಂಜಯ್ ನಟನೆ

ನಟ ಧನಂಜಯ್ ಅವರು ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಹೀರೋ ಆಗಿ, ವಿಲನ್ ಆಗಿ ಗಮನ ಸೆಳೆದಿದ್ದಾರೆ. ಈಗ ಡಾನ್ ಜಯರಾಜ್ ಪಾತ್ರದಲ್ಲಿ ಅವರು ಮಿಂಚಲು ರೆಡಿ ಆಗಿದ್ದಾರೆ. ಯಾವುದೇ ಚಿತ್ರ ಉತ್ತಮವಾಗಿ ಮೂಡಿ ಬರಬೇಕೆಂದರೆ ಪಾತ್ರಧಾರಿಗಳು ತುಂಬಾನೇ ಮುಖ್ಯ ಆಗುತ್ತದೆ. ಜಯರಾಜ್ ಆಗಿ ಧನಂಜಯ್ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಗಮನ ಸೆಳೆದ ಟ್ರೇಲರ್

‘ಹೆಡ್​ ಬುಷ್’ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಝಲಕ್​ ಅನ್ನು ಟ್ರೇಲರ್ ಮೂಲಕ ಕಟ್ಟಿ ಕೊಡಲಾಗಿತ್ತು. ಟ್ರೇಲರ್ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಈ ಕಾರಣದಿಂದಲೂ ‘ಹೆಡ್​ ಬುಷ್’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಭೂಗತ ಲೋಕದ ಫ್ಲೇವರ್

ಭೂಗತ ಲೋಕದ ಕಥಾ ಹಂದರ ಇಟ್ಟುಕೊಂಡು ಅನೇಕ ಸಿನಿಮಾಗಳು ಬಂದು ಹೋಗಿವೆ. ‘ಜೋಗಿ’, ‘ಓಂ’ ಸೇರಿ ಅನೇಕ ಚಿತ್ರಗಳು ಹಿಟ್ ಆಗಿವೆ. ಈಗ ನೈಜ ಘಟನೆ ಆಧರಿಸಿ, ಭೂಗತ ಲೋಕದ ಸಿನಿಮಾ ಬರುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ.

ಗಮನ ಸೆಳೆಯುವ ಪಾತ್ರವರ್ಗ: ‘ಹೆಡ್ ಬುಷ್’ ಚಿತ್ರಕ್ಕೆ ಶೂನ್ಯ ಅವರು ನಿರ್ದೇಶನ ಮಾಡಿದ್ದಾರೆ. ಚರಣ್​ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ, ಲೂಸ್ ಮಾದ ಯೋಗಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Published On - 4:50 pm, Thu, 20 October 22