14 ವರ್ಷಗಳ ಹಿಂದೆ ಬಂದಿತ್ತು ‘ತಾಜ್​ ಮಹಲ್​’, ಈಗ ಬರ್ತಿದೆ ‘ತಾಜ್​ ಮಹಲ್​ 2’

| Updated By: ಮದನ್​ ಕುಮಾರ್​

Updated on: Jul 14, 2022 | 11:06 AM

Taj Mahal 2 movie: ‘ತಾಜ್ ಮಹಲ್ 2’ ಸಿನಿಮಾ ಸೆಪ್ಟೆಂಬರ್​ 2ರಂದು ಪ್ರೇಕ್ಷಕರ ಎದುರು ಬರಲಿದೆ. ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡದಿಂದ ಸಕಲ ಸಿದ್ಧತೆ ನಡೆಯುತ್ತಿದೆ.

14 ವರ್ಷಗಳ ಹಿಂದೆ ಬಂದಿತ್ತು ‘ತಾಜ್​ ಮಹಲ್​’, ಈಗ ಬರ್ತಿದೆ ‘ತಾಜ್​ ಮಹಲ್​ 2’
‘ತಾಜ್ ಮಹಲ್ 2’ ಸಿನಿಮಾ ಸುದ್ದಿಗೋಷ್ಠಿ
Follow us on

2008ರಲ್ಲಿ ತೆರೆಕಂಡಿದ್ದ ‘ತಾಜ್​ ಮಹಲ್​’ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈಗ ‘ತಾಜ್​ ಮಹಲ್​ 2’ (Taj Mahal 2) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೀರ್ಷಿಕೆಯ ಕಾರಣದಿಂದ ಈ ಚಿತ್ರ ಗಮನ ಸೆಳೆದಿದೆ. ಹಲವು ಕಾರಣದಿಂದ ಈ ಸಿನಿಮಾದ ರಿಲೀಸ್​ ತಡವಾಗಿತ್ತು. ಈಗ ಅದಕ್ಕೆ ಸಮಯ ಕೂಡಿಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Kannada Film Chamber) ಅಧ್ಯಕ್ಷರಾದ ಭಾ.ಮ. ಹರೀಶ್ ಅವರು ‘ತಾಜ್ ಮಹಲ್ 2’ ಚಿತ್ರದ ರಿಲೀಸ್​ ದಿನಾಂಕವನ್ನು ಘೋಷಿಸುವ ಮೂಲಕ‌ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ದೇವರಾಜ್ ​ಕುಮಾರ್ (Devaraj Kumar)​ ಅವರು ಈ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ಸಮೃದ್ಧಿ ಶುಕ್ಲಾ ನಟಿಸಿದ್ದಾರೆ. ಸೆಪ್ಟೆಂಬರ್​ 2ರಂದು ‘ತಾಜ್ ಮಹಲ್ 2’ ರಿಲೀಸ್​ ಆಗಲಿದೆ.

ಮೇಕಪ್ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದವರು ದೇವರಾಜ್ ಕುಮಾರ್. ನಂತರದ ದಿನಗಳಲ್ಲಿ ಅವರು ನಿರ್ದೇಶಕರಾದರು. ಡೈರೆಕ್ಷನ್​ ಮಾಡುವುದರ ಜೊತೆಗೆ ಹೀರೋ ಆಗಿ ನಟಿಸಲು ಆರಂಭಿಸಿದರು. ‌ಪ್ರಸ್ತುತ ಅವರು‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ತಾಜ್ ಮಹಲ್ 2’ ಸಿನಿಮಾ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ.

‘2019ರಲ್ಲಿ ನಾವು ಈ ಚಿತ್ರವನ್ನು ಆರಂಭಿಸಿದ್ದೆವು. 2020ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಬಂದ ಕೊರೊನದಿಂದ ಚಿತ್ರದ ಕೆಲಸ ಮುಗಿಯಲು ವಿಳಂಬವಾಯಿತು. ಇತ್ತೀಚೆಗೆ ನಮ್ಮ ಸಿನಿಮಾದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಜವಳಿ ಸಚಿವರಾದ ಶಂಕರ್ ಪಾಟೀಲ್ ಬಿಡುಗಡೆ ಮಾಡಿದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ದೇವರಾಜ್​ಕುಮಾರ್​.

ಇದನ್ನೂ ಓದಿ
Srinidhi Shetty Salary: ‘ಕೆಜಿಎಫ್​’ ಸುಂದರಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?
ಪುನೀತ್ ರಾಜ್​ಕುಮಾರ್ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ; ಕಾರಣ ಏನು?
Amulya: ನಟಿ ಅಮೂಲ್ಯ ಅವರ ಕ್ಯೂಟ್ ಫೋಟೋಗಳ ಗ್ಯಾಲರಿ
ಆಗಸ್ಟ್​​ನಲ್ಲಿ ‘ಲಕ್ಕಿ ಮ್ಯಾನ್​’ ಸಿನಿಮಾ ತೆರೆಗೆ; ಪುನೀತ್ ನೋಡಲು ಕಾದಿದ್ದಾರೆ ಫ್ಯಾನ್ಸ್​

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಉಮೇಶ್ ಬಣಕಾರ್ ಅವರು ಸೇರಿದಂತೆ ಹಲವರ ಸಹಕಾರಕ್ಕೆ ದೇವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಟ್ರೇಲರ್​ ನೋಡಿ ಪ್ರೇಕ್ಷಕರು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಒಂದು ಮಿಲಿಯನ್​ ವೀಕ್ಷಣೆ ಕಂಡಿರುವುದು ಈ ಟ್ರೇಲರ್​ನ ಹೆಚ್ಚುಗಾರಿಕೆ. ಭರ್ಜರಿ ಸಾಹಸ ದೃಶ್ಯಗಳು ಇದರಲ್ಲಿ ಗಮನ ಸೆಳೆದಿವೆ. ಕಾಕ್ರೋಜ್​ ಸುಧಿ, ತಬಲ ನಾಣಿ, ಶೋಭರಾಜ್​, ಶಿವರಾಂ, ಜಿಮ್​ ರವಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.