ಹಿರಿಯ ನಟ ಅನಂತ್ ನಾಗ್ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್

ಬೆಂಗಳೂರು ಉತ್ತರ ವಿವಿಯ ಎರಡನೇ ಘಟಿಕೋತ್ಸವವು ಶುಕ್ರವಾರ ಜುಲೈ 15ರಂದು ಕೋಲಾರದ ‘ನಂದಿನಿ ಪ್ಯಾಲೇಸ್' ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅನಂತ್ ನಾಗ್ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಹಿರಿಯ ನಟ ಅನಂತ್ ನಾಗ್ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್
ಅನಂತ್ ನಾಗ್
TV9kannada Web Team

| Edited By: Rajesh Duggumane

Jul 14, 2022 | 7:17 PM

ಅನಂತ್ ನಾಗ್ (Anant Nag) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರ ನಟನೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಲಭ್ಯವಾಗಿದೆ. ಈಗ ಅವರ ಸಾಧನೆಗೆ ಮತ್ತೊಂದು ಗೌರವ ಸಿಕ್ಕಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು (Bengaluru VV) ಈಗ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಅನಂತ್ ನಾಗ್ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅನಂತ್ ನಾಗ್ ಜತೆ ಇನ್ನೂ ಇಬ್ಬರಿಗೆ ಈ ಡಾಕ್ಟರೇಟ್ ನೀಡಲಾಗುತ್ತಿದೆ.

ಬೆಂಗಳೂರು ಉತ್ತರ ವಿವಿಯ ಎರಡನೇ ಘಟಿಕೋತ್ಸವವು ಶುಕ್ರವಾರ (ಜುಲೈ 15) ಕೋಲಾರದ ‘ನಂದಿನಿ ಪ್ಯಾಲೇಸ್’ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅನಂತ್ ನಾಗ್ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ಘಟಿಕೋತ್ಸವದಲ್ಲಿ ಮಾತನಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಕನ್ನಡ, ಹಿಂದಿ, ಮರಾಠಿ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಪ್ರಸಿದ್ಧರು. ಕಳೆದ ಐದು ದಶಕಗಳ ಕಾಲ ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅನಂತನಾಗ್‌ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಕಲಾ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಅನಂತ್ ನಾಗ್ ಮಾತ್ರವಲ್ಲದೆ, ಹಿರಿಯ ಶೆಹನಾಯಿ ವಾದಕರಾದ ಪದ್ಮಶ್ರೀ ಎಸ್. ಬಲ್ಲೇಶ್ ಭಜಂತ್ರಿಯವರಿಗೂ ಡಾಕ್ಟರೇಟ್ ಗೌರವ ನೀಡಲಾಗುತ್ತಿದೆ. ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಈ ಗೌರವ ಸಲ್ಲಿಕೆ ಆಗುತ್ತಿದೆ. ಲಿಟರೇಚರ್ ಪದವಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ಬೆಂಗಳೂರಿನ ಶರದ್ ಶರ್ಮ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ ನೀಡಲಾಗುತ್ತಿದೆ.

ಇದನ್ನೂ ಓದಿ:  ಕನ್ನಡ ಚಿತ್ರರಂಗದ ಎವರ್​ಗ್ರೀನ್ ಹೀರೋ ಅನಂತ್ ನಾಗ್ ನಡೆದು ಬಂದ ಹಾದಿ; ವಿಶೇಷ ಸಂದರ್ಶನ ಇಲ್ಲಿದೆ

ಇದನ್ನೂ ಓದಿ

ಬೆಳಗಾವಿ ಮೂಲದ ಪಂಡಿತ್‌ ಬಲ್ಲೇಶ್ ಭಜಂತ್ರಿಯವರು (68) ಭಾರತ ರತ್ನ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯ. 40 ವರ್ಷ ಅವರ ಜೊತೆ ಶೆಹನಾಯಿ ನುಡಿಸಿದ್ದಾರೆ. ಸುಮಾರು 50 ಸಾವಿರ ಎಲ್ಲಧರ್ಮಗಳ ಭಕ್ತಿ ಸಂಗೀತಕ್ಕೆ ಹಾಗೂ 40 ಸಾವಿರ ಎಲ್ಲಾ ಭಾಷೆಗಳ ಸಿನಿಮಾ ಹಾಡುಗಳಿಗೆ ಶೆಹನಾಯಿ ನುಡಿಸಿದ ಖ್ಯಾತಿ ಬಲ್ಲೇಶ್ ಅವರದ್ದು. ಅವರ ಸಂಗೀತ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ‘ಪದ್ಮಶ್ರೀ’ ನೀಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada