ಶಿರಸಿ ಕಾಡಿನ ರಹಸ್ಯ ದೇವಸಸ್ಯದ ಸುತ್ತ ಥ್ರಿಲ್ಲರ್ ಸಿನಿಮಾ

Devasasya movie: ರಹಸ್ಯವಾದ ಸಸ್ಯವೊಂದರ ಬಗ್ಗೆ ಸಿದ್ದಿ ಜನಾಂಗದ ಬಗ್ಗೆ ಅವರ ನಂಬಿಕೆ, ಆಚರಣೆಗಳನ್ನು ಕಥಾವಸ್ತುವಾಗಿ ಇರಿಸಿಕೊಂಡಿರುವ ‘ದೇವಸಸ್ಯ’ ಹೆಸರಿನ ಸಿನಿಮಾ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್ ಕುತೂಹಲ ಕೆರಳಿಸುತ್ತಿದೆ. ವಶೇಷವಾದ ಸಸ್ಯ ಹಾಗೂ ಸಿದ್ದಿ ಜನಾಂಗದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಶಿರಸಿ ಕಾಡಿನ ರಹಸ್ಯ ದೇವಸಸ್ಯದ ಸುತ್ತ ಥ್ರಿಲ್ಲರ್ ಸಿನಿಮಾ
Devasasya

Updated on: Jun 06, 2025 | 11:59 AM

ಪ್ರಾದೇಶಿಕ ಆಚರಣೆಗಳು, ನಂಬಿಕಗಳು, ನೆಲ ಮೂಲದ ಕತೆಗಳನ್ನು ಹೇಳಿದರೆ ಅದು ಖಂಡಿತ ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುತ್ತದೆ ಎಂಬುದನ್ನು ‘ಕಾಂತಾರ’ (Kantara) ಸಿನಿಮಾ ಈಗಾಗಲೇ ತೋರಿಸಿಕೊಟ್ಟಿದೆ. ಇದೀಗ ಅಂಥಹುದೇ ಒಂದು ಕತೆ ಹೊತ್ತು ಹೊಸ ತಂಡವೊಂದು ಬರುತ್ತಿದೆ. ರಹಸ್ಯವಾದ ಸಸ್ಯವೊಂದರ ಬಗ್ಗೆ ಸಿದ್ದಿ ಜನಾಂಗದ ಬಗ್ಗೆ ಅವರ ನಂಬಿಕೆ, ಆಚರಣೆಗಳನ್ನು ಕಥಾವಸ್ತುವಾಗಿ ಇರಿಸಿಕೊಂಡಿರುವ ‘ದೇವಸಸ್ಯ’ ಹೆಸರಿನ ಸಿನಿಮಾ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ.

ಶಿರಸಿ ಸಮೀಪದ ಕಾಡುಗಳ ನಿಗೂಢತೆ, ಅದೇ ಕಾಡುಗಳಲ್ಲಿ ವಾಸಿಸುವ ಸಿದ್ದ ಜನಾಂಗದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಬಹುತೇಕ ಉತ್ತರ ಕನ್ನಡದವರೇ ಒಟ್ಟು ಸೇರಿ ‘ದೇವಸಸ್ಯ’ ಸಿನಿಮಾ ಮಾಡುತ್ತಿದ್ದು, ಎರಡು ಊರುಗಳ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. 1995 ರಲ್ಲಿ ನಡೆದಿದೆ ಎನ್ನಲಾದ ನೈಜ ಘಟನೆ ಈ ಸಿನಿಮಾಕ್ಕೆ ಸ್ಪೂರ್ತಿ. ‘ದೇವಸಸ್ಯ’ ಸಿನಿಮಾವು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಅನ್ನು ನಿರ್ಮಾಣ ಮಾಡುತ್ತಿದೆ ಚಿತ್ರತಂಡ.

ಇದನ್ನೂ ಓದಿ:ಸುಳ್ಳು ಹೇಳಿ ಕನ್ನಡ ಸಿನಿಮಾ ಮಾಡಿದ್ದ ‘ಮಣಿರತ್ನಂ’; ಸಿಕ್ಕಿತ್ತು ದೊಡ್ಡ ಯಶಸ್ಸು

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಭಟ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸೆಲ್ವಿನ್ ದೇಸಾಯಿ ಅವರು ಸಿದ್ದಿ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಯುವನಟ ಅಹನ್ ನಟಿಸುತ್ತಿದ್ದಾರೆ. ಸಿದ್ದಿ ಯುವತಿ ಮಾತಂಗಿಯ ಪಾತ್ರದಲ್ಲಿ ಬಿಂಬಿಕಾ ನಟಿಸುತ್ತಿದ್ದಾರೆ. ಯುವ ತಂಡದ ಜೊತೆಗೆ ಹಿರಿಯ ನಟ ಪ್ರಕಾಶ್ ಬೆಳವಾಡಿ, ಗೀತಾ ಸಿದ್ದಿ, ಮಂಜುನಾಥ್ ಹೆಗ್ಡೆ ಅವರುಗಳು ಸಹ ಇದ್ದಾರೆ.

‘ಕೆಜಿಎಫ್’ ಸಿನಿಮಾಕ್ಕೆ ಸೆಟ್ ಹಾಕಿದ್ದ ಕರಣ್ ಅವರು ಈ ಸಿನಿಮಾಕ್ಕೂ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. 35 ವರ್ಷ ಹಳೆಯ ಎರಡು ಊರುಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸೆಟ್​ಗಳ ಜೊತೆಗೆ ಶಿರಸಿ ಹಾಗೂ ಸುತ್ತಮುತ್ತಲಿನ ಕಾಡುಗಳಲ್ಲಿ ಸಿನಿಮಾದ ಚಿತ್ರೀಕರಣವನ್ನು ಚಿತ್ರತಂಡ ಮಾಡಲಿದೆ. ಈಗಾಗಲೇ 45 ದಿನಗಳ ಚಿತ್ರೀಕರಣ ಸಹ ಪೂರ್ಣಗೊಂಡಿದೆ. ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ದೇವಸಸ್ಯಕ್ಕಾಗಿ ಊರುಗಳ ನಡುವೆ ನಡೆಯುವ ಸಂಘರ್ಷದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಅನಂತ್​ಕುಮಾರ್ ಹೆಗ್ಡೆ ಬಂಡವಾಳ ತೊಡಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ