ಎಷ್ಟೇ ಸಿನಿಮಾ ಮಾಡಿದರೂ ರಾಜ್ಕುಮಾರ್ಗೆ ತೃಪ್ತಿಯೇ ಇರಲಿಲ್ಲ; ಆಗ ಬಂತು ಆ ಸಿನಿಮಾ
ರಾಜ್ ಕುಮಾರ್ ಅವರು ಅನೇಕ ಸಿನಿಮಾಗಳನ್ನು ಮಾಡಿದ್ದರೂ ಸಂಪೂರ್ಣ ತೃಪ್ತಿ ಪಡೆಯಲಿಲ್ಲ. ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸುವ ಬಯಕೆಯನ್ನು ಅವರು ಹೊಂದಿದ್ದರು. ‘ರಾಘವೇಂದ್ರ ಮಹಾತ್ಮೆ’ ಚಿತ್ರ ಅವರಿಗೆ ಅಪಾರ ತೃಪ್ತಿಯನ್ನು ನೀಡಿತು. ನಿರ್ಮಾಣದಲ್ಲಿ ಅವರ ಪತ್ನಿ ಸಹಾಯ ಮಾಡುತ್ತಿದ್ದರು. ಅವರ ಸಿನಿಮಾಗಳನ್ನು ಅವರು ಟಿವಿಯಲ್ಲಿ ನೋಡಲು ಇಷ್ಟಪಡುತ್ತಿರಲಿಲ್ಲ.

ರಾಜ್ಕುಮಾರ್ ಓರ್ವ ಶ್ರೇಷ್ಠ ನಟನಾಗಿ ಕಾಣಿಸುತ್ತಾರೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿ ಈಗ ನಮ್ಮೊಂದಿಗೆ ಇಲ್ಲ. ಆದರೆ, ಅವರು ಹಾಕಿಕೊಟ್ಟ ಆದರ್ಶಗಳು ಸದಾ ನಮ್ಮ ಜೊತೆ ಇರುವಂಥದ್ದು. ಈಗ ಅವರು ಆಡಿದ ಮಾತೊಂದು ಗಮನ ಸೆಳೆಯುವಂತಿದೆ. ಅವರಿಗೆ ಎಷ್ಟೇ ಸಿನಿಮಾ ಮಾಡಿದ್ದರೂ ತೃಪ್ತಿ ಅನ್ನೋದು ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರೇ ಹೇಳಿಕೊಂಡಿದ್ದರು. ಅವರ ಹಳೆಯ ಸಂದರ್ಶನ ಒಂದರಲ್ಲಿ ಹೇಳಿದ ಮಾತನ್ನು ಇಲ್ಲಿ ನೋಡೋಣ.
‘ನಾನು ಯಾವಾಗಲೂ ಇಂಥ ಸಿನಿಮಾ ಮಾಡಬೇಕು ಎಂದುಕೊಂಡಿರಲಿಲ್ಲ. ಪೌರಾಣಿಕ ಪಾತ್ರ ಮಾಡಬೇಕು ಎನ್ನುವ ಆಸೆ ನನ್ನದು. ನನ್ನ ಮನಸ್ಸು ಹೊಕ್ಕಿ ಹೃದಯವನ್ನು ಹಿಡಿಯುವಂಥ ಪಾತ್ರ ಬೇಕು. ನನಗೆ ಆನಂದ ನೀಡುವ ಪಾತ್ರ ಬೇಕು. ಪಾತ್ರಗಳು ಕಾಲು ಭಾಗ ಮಾತ್ರ ತೃಪ್ತಿ ಕೊಟ್ಟಿದೆ. ಪೂರ್ಣತೆ ಅನ್ನೋದು ಪಡೆಯಲು ದೇವರು ಯಾವಾಗ ಅನುಗ್ರಹ ಮಾಡುತ್ತಾನೋ ಗೊತ್ತಿಲ್ಲ’ ಎಂದು ರಾಜ್ಕುಮಾರ್ ಹೇಳಿದ್ದರು.
ರಾಜ್ಕುಮಾರ್ ಅವರಿಗೆ ಹೆಚ್ಚು ತೃಪ್ತಿ ಕೊಟ್ಟ ಸಿನಿಮಾ ಎಂದರೆ ‘ರಾಘವೇಂದ್ರ ಮಹಾತ್ಮೆ’ ಚಿತ್ರವೇ ಆಗಿದೆ. ಈ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರವು ರಾಜ್ಕುಮಾರ್ಗೆ ಖುಷಿ ನೀಡಿತ್ತು ಮತ್ತು ಜನರು ಬಳಿ ಇದನ್ನು ನೋಡಿ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಮತ್ಯಾವ ಚಿತ್ರವನ್ನೂ ಅವರು ಜನರ ಬಳಿ ನೋಡಿ ಎಂದು ಕೇಳುತ್ತಿರಲಿಲ್ಲವಂತೆ. ಇನ್ನು ಟಿವಿಗಳಲ್ಲಿ ಅವರದ್ದೇ ಸಿನಿಮಾ ನೋಡಿದಾಗ ನೆಗೆಟಿವ್ ವಿಚಾರಗಳೇ ಹೆಚ್ಚು ಕಾಣುತ್ತಿದ್ದವಂತೆ.
ಇದನ್ನೂ ಓದಿ: ರಾಜ್ಕುಮಾರ್ ಸದಾ ಬಿಳಿ ಪಂಚೆ, ಶರ್ಟ್ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ
ನಿರ್ಮಾಣವನ್ನು ತಾವೇ ಮಾಡಿದ್ದಾಗಿ ಅವರು ಹೇಳುತ್ತಾ ಇರಲಿಲ್ಲ. ‘ಅಭಿನಯ ಮತ್ತು ನಿರ್ಮಾಣ ಎರಡನ್ನೂ ಮಾಡಿದ್ದೇನೆ ಎಂದರೆ ತಪ್ಪಾಗುತ್ತೇನೆ. ನಟನೆ ಮಾತ್ರ ನನ್ನದು. ನಿರ್ಮಾಣದ ಜವಾಬ್ದಾರಿ ನನ್ನ ಪತ್ನಿಯದ್ದು. ನನಗೆ ನಿರ್ಮಾಣದ ಬಗ್ಗೆ ಮೊದಲು ಜ್ಞಾನ ಇರಲಿಲ್ಲ. ಈಗಲೂ ಇಲ್ಲ. ನನ್ನ ಒಳಗೆ ಇರುವ ಹಸಿವನ್ನು ಈಡೇರಿಸಲು ಏನು ಬೇಕೋ ಅದನ್ನು ಮಾಡುತ್ತೇನೆ. ಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡುವ ಉದ್ದೇಶ ಇದೆ’ ಎಂದು ರಾಜ್ಕುಮಾರ್ ಅವರು ಹೇಳಿಕೊಂಡಿದ್ದಾರೆ. ರಾಜ್ಕುಮಾರ್ ಅವರ ಜೊತೆ ಪರಭಾಷಾ ಕಾಲವಿರೂ ಕೂಡ ಸಾಕಷ್ಟು ಒಳ್ಳೆಯ ನಂಟು ಹೊಂದಿದ್ದರು. ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







