Dhananjay: ಧನಂಜಯ್- ಅದಿತಿ ಅಭಿನಯದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ರಿಲೀಸ್ ಡೇಟ್ ಅನೌನ್ಸ್

| Updated By: shivaprasad.hs

Updated on: May 28, 2022 | 12:33 PM

Once Upon a time in Jamaligudda release date | Aditi Prabhudeva: ಡಾಲಿ ಧನಂಜಯ್ ನಟನೆಯ ಚಿತ್ರಗಳು ಸಾಲುಸಾಲಾಗಿ ತೆರೆಗೆ ಬರುತ್ತಿವೆ. ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ.

Dhananjay: ಧನಂಜಯ್- ಅದಿತಿ ಅಭಿನಯದ ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ ರಿಲೀಸ್ ಡೇಟ್ ಅನೌನ್ಸ್
‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಧನಂಜಯ್, ಅದಿತಿ ಪ್ರಭುದೇವ
Follow us on

ಸ್ಯಾಂಡಲ್​ವುಡ್ ನಟ ಧನಂಜಯ್ (Dhananjay) ಸಾಲುಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ಧಾರೆ. ಹಲವು ಚಿತ್ರಗಳ ಕೆಲಸಗಳು ಈಗಾಗಲೇ ಮುಗಿದಿದ್ದು, ರಿಲೀಸ್​ ಸಿದ್ಧತೆಯಲ್ಲಿವೆ. ಇದೀಗ ಡಾಲಿ ನಟನೆಯ ಹೊಸ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕುಶಾಲ್ ಗೌಡ ನಿರ್ದೇಶನದ, ಟೈಟಲ್​ನಿಂದಲೇ ಗಮನ ಸೆಳೆದಿದ್ದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ (Once Upon a time in Jamaligudda) ಚಿತ್ರ ಇದೀಗ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 9ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ‘ಕೆಆರ್​ಜಿ ಕನೆಕ್ಟ್ಸ್’ ವಿತರಣೆಯ ಜವಾಬ್ದಾರಿ ಹೊತ್ತಿದೆ. ಧನಂಜಯ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಇದೀಗ ಹೊಸ ಪೋಸ್ಟರ್ ಗಮನ ಸೆಳೆದಿದೆ. ತುಸು ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಸೈಕಲ್ ಹಿಡಿದು ನಿಂತಿದ್ದಾರೆ. ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಅದಿತಿ, ಧನಂಜಯ್​ಗೆ ಸಾಥ್ ನೀಡಿದ್ಧಾರೆ.

ಧನಂಜಯ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಇದನ್ನೂ ಓದಿ
ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್​, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ
ಫಿಲ್ಮ್​ ಚೇಂಬರ್​ ಚುನಾವಣೆಯಲ್ಲಿ ಗೆಲುವಿಗಾಗಿ ದೇವರ ಮೊರೆ ಹೋದ ಭಾ.ಮ. ಹರೀಶ್​; ಇಲ್ಲಿದೆ ವಿಡಿಯೋ
‘RRR ಚಿತ್ರದಲ್ಲಿ ಇರೋದು ಸಲಿಂಗಕಾಮದ ಕಥೆ’: ಈ ರೀತಿ ಆರೋಪ ಮಾಡಿದ್ದು ಯಾರು?

ಕನ್ನಡದಲ್ಲಿ ಸದ್ಯ ರೆಟ್ರೊ ಟ್ರೆಂಡ್ ಜೋರಾಗಿದೆ. ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಕೂಡ ಅಂಥದ್ದೇ ಮಾದರಿಯ ಚಿತ್ರ. 90ರ ದಶಕದಲ್ಲಿ ನಡೆಯುವ ಪ್ರೇಮಕತೆ ಇದಾಗಿದ್ದು, ಟ್ರಾವೆಲಿಂಗ್ ಎಳೆಯೂ ಇದೆ. ಧನಂಜಯ್ ಬಾರ್ ಸಪ್ಲೈಯರ್ ಪಾತ್ರದಲ್ಲಿ ನಟಿಸಿದ್ದು, ಅದಿತಿ ಮಸಾಜ್ ಪಾರ್ಲರ್​ನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಈರ್ವರ ನಡುವಿನ ಪ್ರೀತಿಯ ಕತೆಯನ್ನು ಚಿತ್ರ ಒಳಗೊಂಡಿದೆ.

ಇದನ್ನೂ ಓದಿ:  20 ರೂ ಪೆಟ್ರೋಲ್ ಹಾಕಿಸ್ತೀವಿ ಕೊಡು ಎಂದು ಫ್ರೆಂಡ್ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆವು; ಆ ದಿನಗಳನ್ನು ಸ್ಮರಿಸಿದ ಧನಂಜಯ್

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ ಮಾಡಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ. ಪ್ರಕಾಶ್‌ ಬೆಳವಾಡಿ, ನಂದಗೋಪಾಲ್‌, ಯಶ್‌ ಶೆಟ್ಟಿ, ಭಾವನಾ ರಾಮಣ್ಣ, ತ್ರಿವೇಣಿ ರಾವ್‌ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಹರಿ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 am, Sat, 28 May 22