ಬೆಂಗಳೂರಿನಲ್ಲಿ ಭಾನುವಾರ (ಅ.9) ರಾತ್ರಿ ಅದ್ದೂರಿಯಾಗಿ ಫಿಲ್ಮ್ಫೇರ್ ಪ್ರಶಸ್ತಿ (Filmfare Awards) ಪ್ರದಾನ ಸಮಾರಂಭ ಮಾಡಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಫಿಲ್ಮ್ಫೇರ್ ಪ್ರಶಸ್ತಿ ಪಡೆದ ನಟ-ನಟಿಯರು, ತಂತ್ರಜ್ಞರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ನಟ ಧನಂಜಯ್ (Dhananjay) ಅವರಿಗೆ ‘ಬಡವ ರಾಸ್ಕಲ್’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿದೆ. ಯಜ್ಞಾ ಶೆಟ್ಟಿ (Yagna Shetty) ಅವರು ‘ಆಕ್ಟ್ 1978’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ರಾಜ್ ಬಿ. ಶೆಟ್ಟಿ ಅವರಿಗೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ.
ಕನ್ನಡದಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ನಟ: ಧನಂಜಯ್ (ಬಡವ ರಾಸ್ಕಲ್)
ಅತ್ಯುತ್ತಮ ನಟಿ: ಯಜ್ಞಾ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ನಿರ್ದೇಶನ: ರಾಜ್ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಅತ್ಯುತ್ತಮ ಪೋಷಕ ನಟ: ಬಿ. ಸುರೇಶ (ಆಕ್ಟ್ 1978)
ಅತ್ಯುತ್ತಮ ಸಿನಿಮಾ: ಆಕ್ಟ್ 1978 (ನಿರ್ದೇಶನ ಮಂಸೋರೆ)
ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ನಿರ್ದೇಶನ: ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ: ಜಯಂತ ಕಾಯ್ಕಿಣಿ (ಆಕ್ಟ್ 1978)
ಅತ್ಯುತ್ತಮ ಗಾಯಕ: ರಘು ದೀಕ್ಷಿತ್ (ನಿನ್ನ ಸನಿಹಕೆ)
ಅತ್ಯುತ್ತಮ ಗಾಯಕಿ: ಅನುರಾಧಾ ಭಟ್ (ಬಿಚ್ಚುಗತ್ತಿ)
ಅತ್ಯುತ್ತಮ ಛಾಯಾಗ್ರಹಣ: ಶ್ರೀಶಾ ಕುದುವಳ್ಳಿ (ಬಡವ ರಾಸ್ಕಲ್)
ಅತ್ಯುತ್ತಮ ನೃತ್ಯ ನಿರ್ದೇಶನ: ಜಾನಿ ಮಾಸ್ಟರ್ (ಫೀಲ್ ದ ಪವರ್- ಯುವರತ್ನ)
ಜೀವಮಾನ ಸಾಧನೆ ಪ್ರಶಸ್ತಿ: ಪುನೀತ್ ರಾಜ್ಕುಮಾರ್
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್)
ಚಿತ್ರರಂಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗೆ ಸಖತ್ ಮನ್ನಣೆ ಇದೆ. ಈ ಅವಾರ್ಡ್ ಪಡೆಯಬೇಕು ಎಂಬುದು ಎಲ್ಲ ನಟ-ನಟಿಯರ, ತಂತ್ರಜ್ಞರ ಕನಸಾಗಿರುತ್ತದೆ. ಹಲವು ದಶಕಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈವರೆಗೂ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು ವಿಶೇಷ.
Congratulations!
The Filmfare Award for Best Film – Kannada goes to #Act1978 at the 67th #ParleFilmfareAwardsSouth 2022 with Kamar Film Factory. pic.twitter.com/F8H8v5rKUG
— Filmfare (@filmfare) October 9, 2022
The Filmfare Awards South posthumously honour #PuneethRajkumar with the Lifetime Achievement Award at the 67th #ParleFilmfareAwardsSouth 2022 with Kamar Film Factory. pic.twitter.com/c6Y5bJTrL3
— Filmfare (@filmfare) October 9, 2022
67ನೇ ಸಾಲಿನ ಫಿಲ್ಮ್ಫೇರ್ ಸಮಾರಂಭ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಝಗಮಗಿಸುವ ವೇದಿಕೆ ಮೇಲೆ ಅನೇಕ ಮನರಂಜನಾ ಕಾರ್ಯಕ್ರಮಗಳು ನಡೆದವು. ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ ಮುಂತಾದ ಕಲಾವಿದರು ಡ್ಯಾನ್ಸ್ ಮಾಡಿದರು. ರಮೇಶ್ ಅರವಿಂದ್ ಹಾಗೂ ದಿಗಂತ್ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.