ಸಿಸಿಟಿವಿ ಫುಟೇಜ್ ನೀಡುವಂತೆ ಧನ್ವೀರ್ ತಂದೆಗೆ ನೊಟೀಸ್, ವಿಳಂಬ ಏಕೆ?

ಧನ್ವೀರ್ ವಿರುದ್ಧ ಈಗಾಗಲೇ ಕೆಲವಾರು ದೂರುಗಳನ್ನು ದರ್ಶನ್ ಮತ್ತು ವಿಜಯಲಕ್ಷ್ಮಿ ಕಡೆಯವರು ದಾಖಲಿಸಿದ್ದಾರೆ. ಪ್ರತಿಯಾಗಿ ಧನ್ವೀರ್ ತಂದೆ ತಿಮ್ಮ ಗೌಡ ಸಹ ವಿಜಯಲಕ್ಷ್ಮಿ ಮತ್ತು ಅವರ ಕೆಲವು ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದರು. ವಿಜಯಲಕ್ಷ್ಮಿ, ನಾಗರಾಜ್ ಮತ್ತು ಇನ್ನೂ ಕೆಲವರು ತಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು, ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಎನ್​​ಸಿಆರ್ ದಾಖಲು ಮಾಡಿದ್ದರು.

ಸಿಸಿಟಿವಿ ಫುಟೇಜ್ ನೀಡುವಂತೆ ಧನ್ವೀರ್ ತಂದೆಗೆ ನೊಟೀಸ್, ವಿಳಂಬ ಏಕೆ?
Darshan Vijayalakshmi

Updated on: Oct 31, 2026 | 9:48 AM

ಮುಖ್ಯಾಂಶಗಳು

  • ಧನ್ವೀರ್ ಗೌಡ vs ವಿಜಯಲಕ್ಷ್ಮಿ ದರ್ಶನ್
  • ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿದ್ದ ಧನ್ವೀರ್ ತಂದೆ
  • ಸಿಸಿಟಿವಿ ದೃಶ್ಯಾವಳಿ ನೀಡಲು ವಿಳಂಬ ಏಕೆ?

ನಟ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ ಮುನಿಸು ಹಾದಿ-ಬೀದಿ ರಂಪವಾಗಿ ಪರಿಣಮಿಸಿದೆ. ಧನ್ವೀರ್ ವಿರುದ್ಧ ಈಗಾಗಲೇ ಕೆಲವಾರು ದೂರುಗಳನ್ನು ದರ್ಶನ್ ಮತ್ತು ವಿಜಯಲಕ್ಷ್ಮಿ ಕಡೆಯವರು ದಾಖಲಿಸಿದ್ದಾರೆ. ಪ್ರತಿಯಾಗಿ ಧನ್ವೀರ್ ತಂದೆ ತಿಮ್ಮ ಗೌಡ ಸಹ ವಿಜಯಲಕ್ಷ್ಮಿ ಮತ್ತು ಅವರ ಕೆಲವು ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದರು. ವಿಜಯಲಕ್ಷ್ಮಿ, ನಾಗರಾಜ್ ಮತ್ತು ಇನ್ನೂ ಕೆಲವರು ತಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು, ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಎನ್​​ಸಿಆರ್ ದಾಖಲು ಮಾಡಿದ್ದರು.

ಅದಾದ ಬಳಿಕ ತಿಮ್ಮಗೌಡಗೆ ನೊಟೀಸ್ ನೀಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡುವಂತೆ ಸೂಚಿಸಿದ್ದರು. ಆದರೆ ತಿಮ್ಮಗೌಡ ಅವರು ಈ ವರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿಲ್ಲ ಎನ್ನಲಾಗುತ್ತಿದೆ. ಇದು ಸಣ್ಣ ಮಟ್ಟಿನ ಅನುಮಾನಕ್ಕೆ ಸಹ ಕಾರಣವಾಗಿದೆ. ತಿಮ್ಮಗೌಡ ಅವರು ದೂರು ನೀಡಿದ ಬೆನ್ನಲ್ಲೆ ಬೋಜರಾಜ್ ಎಂಬುವರು ಸಹ ಧನ್ವೀರ್ ವಿರುದ್ಧ ದೂರು ನೀಡಿದ್ದು, ತಾವು ವಿಜಯಲಕ್ಷ್ಮಿ ಮತ್ತು ನಾಗರಾಜು ಅವರನ್ನು ಕರೆದುಕೊಂಡು ಹೋಗಲಷ್ಟೆ ಧನ್ವೀರ್ ಮನೆಗೆ ಹೋಗಿದ್ದಾಗಿಯೂ, ಅಲ್ಲಿ ಯಾರೂ ಸಹ ಯಾವುದೇ ಗಲಾಟೆ ಮಾಡಿಲ್ಲ, ಪೊಲೀಸರು ಕೂಡಲೇ ಧನ್ವೀರ್ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ತಮ್ಮ ದೂರಿನಲ್ಲಿ ಧನ್ವೀರ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸಹ ಅವರು ವ್ಯಕ್ತಪಡಿಸಿದ್ದರು.

ಇದೀಗ ತಿಮ್ಮಗೌಡ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಲು ವಿಳಂಬ ಮಾಡುತ್ತಿದ್ದು, ಈಗಾಗಲೇ ರಾಜಾಜಿನಗರ ಪೊಲೀಸರು ತಾವು ಈ ಹಿಂದೆ ದಾಖಲಿಸಿದ್ದ ಎನ್​​ಸಿಆರ್ ಅನ್ನು ಎಫ್​​ಐಆರ್ ಅನ್ನಾಗಿ ಬದಲಾವಣೆ ಮಾಡಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ. ಎಫ್​​ಐಆರ್ ಆಗಿ ಬದಲಾವಣೆ ಆದರೆ ಪೊಲೀಸರು ವಿವರವಾಗಿ ತನಿಖೆ ನಡೆಸಲಿದ್ದು, ಸತ್ಯಾಂಶ ಹೊರಬರಲಿದೆ.

ಇದನ್ನೂ ಓದಿ:ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ, ಆನ್​​ಲೈನ್​​ನಲ್ಲೂ ಆಕ್ರೋಶ

ವಿಜಯಲಕ್ಷ್ಮಿ ಅವರೊಟ್ಟಿಗಿನ ಜಟಾಪಟಿಯಿಂದಾಗಿ ಧನ್ವೀರ್ ಗೌಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಧನ್ವೀರ್ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಖುದ್ದು ದರ್ಶನ್, ಧನ್ವೀರ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕಿ, ನಟನ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿದ್ದು, ದರ್ಶನ್ ಅಥವಾ ಅವರ ಕುಟುಂಬದವರ ವಿರುದ್ಧ ಎಲ್ಲಿಯೂ ಬಹಿರಂಗ ಹೇಳಿಕೆ ನೀಡದಂತೆ ತಡೆದಿದ್ದಾರೆ. ವಿಜಯಲಕ್ಷ್ಮಿ ಅವರ ಆಪ್ತರು ಸಲ್ಲಿಸಿರುವ ದೂರಿನನ್ವಯ ಈಗಾಗಲೇ ಧನ್ವೀರ್ ವಿರುದ್ಧ ಎರಡು ಎಫ್​​ಐಆರ್ ದಾಖಲಾಗಿವೆ. ಇನ್ನೂ ಕೆಲವು ದಾಖಲಾಗುವ ಸಾಧ್ಯತೆ ಇದೆ.

ಧನ್ವೀರ್ ಮತ್ತು ದರ್ಶನ್ ಬಲು ಆಪ್ತರಾಗಿದ್ದರು. ವಿಶೇಷವಾಗಿ ರೇಣುಕಾ ಸ್ವಾಮಿ ಪ್ರಕರಣ ನಡೆದ ಬಳಿಕ ಇನ್ನಷ್ಟು ಆಪ್ತರಾಗಿದ್ದರು. ಆದರೆ ದರ್ಶನ್ ಕುಟುಂಬ ಹಾಗೂ ಧನ್ವೀರ್ ನಡುವೆ ನಡೆದಿರುವ ಹಣಕಾಸಿನ ವ್ಯವಹಾರದಿಂದಾಗಿ ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗುತ್ತಿದೆ. ಸುಮಾರು 10 ಕೋಟಿ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ವೈಮನಸ್ಯ ಉಂಟಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us