ಧನ್ವೀರ್​​ಗೆ ಭೂಗತ ಪಾತಕಿಯ ನಂಟು? ಹಳೆ ವಿಡಿಯೋಗಳು ವೈರಲ್

ಈಗಾಗಲೇ ನಟ ಧನ್ವೀರ್ ಗೌಡ ವಿರುದ್ಧ ಕೆಲವಾರು ಪ್ರಕರಣಗಳು ದಾಖಲಾಗಿದ್ದು, ಎರಡು ಠಾಣೆಗಳಲ್ಲಿ ಎಫ್​​ಐಆರ್ ಸಹ ದಾಖಲಿಸಲಾಗಿದೆ. ಧನ್ವೀರ್ ಅವರದ್ದು ಎನ್ನಲಾದ ಕೆಲವಾರು ಆಡಿಯೋಗಳು, ವಿಡಿಯೋಗಳು ಸಹ ವೈರಲ್ ಆಗಿವೆ. ಇದೀಗ ಹೊಸದಾಗಿ ಬೆಳಕಿಗೆ ಬಂದಿರುವ ವಿಷಯವೆಂದರೆ ಧನ್ವೀರ್ ಗೌಡಗೆ ಕೆಲ ಭೂಗತ ಪಾತಕಿಗಳ ನಂಟಿದೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋಗಳು ಹಾಗೂ ಚಿತ್ರಗಳು ಸಹ ವೈರಲ್ ಆಗಿವೆ.

ಧನ್ವೀರ್​​ಗೆ ಭೂಗತ ಪಾತಕಿಯ ನಂಟು? ಹಳೆ ವಿಡಿಯೋಗಳು ವೈರಲ್
Dhanveer Manvit Rai
Edited By:

Updated on: Oct 30, 2026 | 3:07 PM

ಮುಖ್ಯಾಂಶಗಳು

  • ಧನ್ವೀರ್ ಗೌಡ ಅವರ ಮತ್ತೊಂದು ಹಳೆ ವಿಡಿಯೋ ವೈರಲ್
  • ಧನ್ವೀರ್ ಗೌಡಗೆ ಪಾತಕಿಗಳ ಜೊತೆಗೆ ನಂಟು?
  • ಮನ್ವೀತ್ ರೈ ಜೊತೆಗೆ ಧನ್ವೀರ್ ಗೌಡ ವಿಡಿಯೋ ವೈರಲ್

ನಟ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ದರ್ಶನ್ ಜಟಾಪಟಿ ಪ್ರಕರಣದಿಂದಾಗಿ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ನಟ ಧನ್ವೀರ್ ಗೌಡ ವಿರುದ್ಧ ಕೆಲವಾರು ಪ್ರಕರಣಗಳು ದಾಖಲಾಗಿದ್ದು, ಎರಡು ಠಾಣೆಗಳಲ್ಲಿ ಎಫ್​​ಐಆರ್ ಸಹ ದಾಖಲಿಸಲಾಗಿದೆ. ಧನ್ವೀರ್ ಅವರದ್ದು ಎನ್ನಲಾದ ಕೆಲವಾರು ಆಡಿಯೋಗಳು, ವಿಡಿಯೋಗಳು ಸಹ ವೈರಲ್ ಆಗಿವೆ. ಇದೀಗ ಹೊಸದಾಗಿ ಬೆಳಕಿಗೆ ಬಂದಿರುವ ವಿಷಯವೆಂದರೆ ಧನ್ವೀರ್ ಗೌಡಗೆ ಕೆಲ ಭೂಗತ ಪಾತಕಿಗಳ ನಂಟಿದೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋಗಳು ಹಾಗೂ ಚಿತ್ರಗಳು ಸಹ ವೈರಲ್ ಆಗಿವೆ.

ಈ ಹಿಂದೆ ಕೆಲ ಪ್ರಕರಣಗಳಲ್ಲಿ ಹೆಸರು ಕೇಳಿ ಬಂದಿದ್ದ ಮನ್ವಿತ್ ರೈ ಜೊತೆಗೆ ಧನ್ವೀರ್ ಗೌಡ ಕಾಣಿಸಿಕೊಂಡಿದ್ದ ವಿಡಿಯೋಗಳು ಇದೀಗ ವೈರಲ್ ಆಗಿವೆ. ಮುತ್ತಪ್ಪ ರೈಗೆ ಸಂಬಂಧಿ ಆಗಿರುವ ಮನ್ವಿತ್ ರೈ ಹೆಸರು ಕೆಲ ಪ್ರಕರಣಗಳಲ್ಲಿ ಕೇಳಿ ಬಂದಿತ್ತು. ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸಂಚು ಪ್ರಕರಣ, ತಹಶೀಲ್ದಾರ್ ಅಜಿತ್ ರೈ ಪ್ರಕರಣ ಹಾಗೂ ರಾಕೇಶ್ ಶೆಟ್ಟಿ ಹತ್ಯೆ ಪ್ರಕರಗಳಲ್ಲಿ ಮನ್ವಿತ್ ರೈ ಹೆಸರು ಕೇಳಿ ಬಂದಿತ್ತು. ಇದೀಗ ಧನ್ವೀರ್ ಹಾಗೂ ಮನ್ವಿತ್ ರೈ ವಿಡಿಯೋಗಳು ಮುನ್ನೆಲೆಗೆ ಬಂದಿದ್ದು, ಧನ್ವೀರ್ ಹಾಗೂ ಮನ್ವಿತ್​​ಗೂ ನಂಟಿದೆಯೇ ಎಂಬ ಅನುಮಾನ ಮೂಡಿದೆ.

Does Actor Dhanveer Have Underworld Links? Viral Video Sparks Questions

ಗೌರವ್ ಶೆಟ್ಟಿ ಜೊತೆಗೂ ನಂಟು

ಗೌರವ್ ಶೆಟ್ಟಿಗೂ ಮನ್ವೀತ್ ರೈಗೂ ಗೆಳೆತನ ಇದ್ದು, ಗೌರವ್, ಮನ್ವೀತ್ ಅವರ ಬಲಗೈ ಭಂಟ ಎನ್ನಲಾಗುತ್ತಿದೆ. ವಿಜಯಲಕ್ಷ್ಮಿ ದರ್ಶನ್​​ಗೂ ಸಹ ಗೌರವ್ ಶೆಟ್ಟಿ ಆಪ್ತರಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಗೌರವ್ ಶೆಟ್ಟಿ ಹೆಸರು ಕೇಳಿ ಬಂದಿತ್ತು. ನಟ ದರ್ಶನ್​​ಗೂ ಮನ್ವೀತ್​​ ರೈಗೂ ಗೆಳೆತನ ಇತ್ತೆಂಬ ಸುದ್ದಿಯೂ ಈ ಸಮಯದಲ್ಲಿ ಹರಿದಾಡುತ್ತಿದೆ.

ಧನ್ವೀರ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಹೇಳಿಕೆ ನೀಡಿದ್ದ ಧನ್ವೀರ್ ಪರ ವಕೀಲರು ವೈರಲ್ ಆಗಿರುವ ಆಡಿಯೋಗಳೆಲ್ಲ ನಕಲಿ ಎಂದಿದ್ದರು. ಇದೀಗ ವಿಡಿಯೋ ಒಂದು ಸಹ ವೈರಲ್ ಆಗಿದೆ. ಈ ಬಗ್ಗೆಯೂ ಸಹ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 30 October 26

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us