ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಬೆಲೆಯ ಕಾರು ಉಡುಗೊರೆ ಕೊಟ್ಟ ಧ್ರುವ ಸರ್ಜಾ

Dhruva Sarja: ಅಭಿಮಾನಿಗಳಿಗೆ ಸದಾ ಸಹಾಯ ಹಸ್ತ ಚಾಚುವ ನಟ ಧ್ರುವ ಸರ್ಜಾ, ಇದೀಗ ತಮ್ಮ ಆತ್ಮೀಯ ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಬೆಲೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಬೆಲೆಯ ಕಾರು ಉಡುಗೊರೆ ಕೊಟ್ಟ ಧ್ರುವ ಸರ್ಜಾ
ಧೃವ ಸರ್ಜಾ
Follow us
ಮಂಜುನಾಥ ಸಿ.
|

Updated on: Jun 15, 2023 | 11:09 PM

ಧ್ರುವ ಸರ್ಜಾ (Dhruva Sarja) ತಮ್ಮ ಸಿನಿಮಾಗಳ ಜೊತೆಗೆ ತಮ್ಮ ಮಾನವೀಯ ಕಾರ್ಯದಿಂದಲೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮನ್ನು ಅರಸಿ ಬಂದ ಎಲ್ಲ ಅಭಿಮಾನಿಗಳನ್ನು ಭೇಟಿಯಾಗಿ ಆತ್ಮೀಯತೆಯಿಂದ ಮಾತನಾಡುವ ಧ್ರುವ ಸರ್ಜಾ, ತಮ್ಮ ಅಭಿಮಾನಿಗಳಿಗೆ (Fan) ಸಂಕಷ್ಟದಲ್ಲಿ ಸಿಲುಕಿದಾಗ ಬಂದು ಸಹಾಯ ಮಾಡಿದ್ದಾರೆ ಸಹ. ಗೆಳೆತನಕ್ಕೆ (Friendship) ವಿಪರೀತ ಗೌರವ ನೀಡುವ ಧ್ರುವ ಸರ್ಜಾ, ತಮ್ಮ ಬಹುಸಮಯದ ಗೆಳೆಯನಿಗೆ ಬಲು ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

ಧ್ರುವ ಸರ್ಜಾ, ತಮ್ಮ ಆತ್ಮೀಯ ಗೆಳೆಯ ಅಶ್ವಿನ್ ಎಂಬುವರಿಗೆ ಅವರ ಹುಟ್ಟುಹಬ್ಬದಂದು 52 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಸ್ವತಃ ಅವರಿಗೇ ಆಶ್ಚರ್ಯವಾಗುವಂತೆ ಸರ್ಪ್ರೈಸ್ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ, ತಮ್ಮ ಗೆಳೆಯನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಧ್ರುವ ಸರ್ಜಾರ ಆತ್ಮೀಯ ಗೆಳೆಯರಲ್ಲಿ ಅಶ್ವಿನ್ ಸಹ ಒಬ್ಬರು. ಧ್ರುವ ಸರ್ಜಾ ಎಲ್ಲಿಗೇ ಕಾರ್ಯಕ್ರಮಕ್ಕೆ ಹೋಗಲಿ, ಶೂಟಿಂಗ್​ಗೆ ಹೋಗಲಿ ಅವರೊಟ್ಟಿಗೆ ಅಶ್ವಿನ್ ಇದ್ದೇ ಇರುತ್ತಾರೆ. ಬಹಳ ಸಣ್ಣ ವಯಸ್ಸಿನಲ್ಲೇ ಅಶ್ವಿನ್​ರ ಪೋಷಕರು ಕಾಲವಾಗಿದ್ದಾರೆ. ಕೇವಲ ಕಾರನ್ನು ಉಡುಗೊರೆಯಾಗಿ ನೀಡಿದ್ದು ಮಾತ್ರವೇ ಅಲ್ಲದೆ, ಅಶ್ವಿನ್​ರ ಅಪ್ಪ-ಅಮ್ಮನ ಹಳೆಯ ಫೋಟೊವನ್ನು ಎಲ್ಲಿಂದಲೋ ಹುಡುಕಿ ತೆಗೆಸಿ ಅದನ್ನು ಕಾರಿನ ಒಳಗೆ ಲಗತ್ತಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಅಪೂರ್ವ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:Martin Movie: ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರದ ಹೆಸರು ಏನು? ಮಾರ್ಟಿನ್ ಯಾರು?

ಧ್ರುವ ಸರ್ಜಾ ಅವರಿಂದ ಸಿಕ್ಕ ದುಬಾರಿ ಉಡುಗೊರೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಅಶ್ವಿನ್, ”ಹೀಗೊಂದು ಉಡುಗೊರೆ ಕೊಡುತ್ತಾರೆ ಎಂಬುದು ನನಗೇ ಗೊತ್ತಿರಲಿಲ್ಲ. ಸರ್ಪ್ರೈಸ್ ಆಗಿ ಎಲ್ಲವನ್ನು ಪ್ಲ್ಯಾನ್ ಮಾಡಿ ಉಡುಗೊರೆ ಕೊಟ್ಟಿದ್ದಾರೆ. ನಾನು ನೋಡದೇ ಇದ್ದ ಅಪ್ಪ-ಅಮ್ಮನ ಫೋಟೊ ಸಹ ಕೊಟ್ಟಿದ್ದಾರೆ. ಧ್ರುವ ಸರ್ಜಾ ಗೆಳೆತನಕ್ಕೆ ಬಹಳ ಬೆಲೆ ಕೊಡುವ ವ್ಯಕ್ತಿ. ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಬಿಲ್ ಕೊಟ್ಟಿದ್ದಾರೆ. ಶಾಲೆಯ ಫೀಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ಸಹಾಯ ಮಾಡಿದ್ದಾರೆ. ಆದರೆ ಯಾವುದನ್ನೂ ಪ್ರಚಾರ ಮಾಡಿಕೊಂಡವರಲ್ಲ. ನನಗೂ ಸಹ ಈ ಉಡುಗೊರೆ ಕೊಟ್ಟ ವಿಡಿಯೋ ಹೊರಗೆ ಹೋಗಬಾರದು ಎಂದಿದ್ದರು. ಆದರೆ ಅವರು ಮಾಡುವ ಕಾರ್ಯವನ್ನು ಜನರಿಗೆ ಹೇಳಬೇಕು ಎಂದು ವಿಡಿಯೋ ಹಾಕಿಕೊಂಡಿದ್ದೇನೆ” ಎಂದಿದ್ದಾರೆ.

ಧ್ರುವ ಸರ್ಜಾ ಪ್ರಸ್ತುತ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಮಾರ್ಟಿನ್ ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಅದರ ಜೊತೆಗೆ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಧ್ರುವ ನಟಿಸುತ್ತಿದ್ದು ಆ ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಇನ್ನೂ ಕೆಲವು ಪರಭಾಷೆಯ ಸ್ಟಾರ್ ನಟರು ಸಹ ನಟಿಸುತ್ತಿದ್ದಾರೆ. ಕೆಡಿ ಸಿನಿಮಾವು 70ರ ದಶಕದ ರೌಡಿಸಂ ಕತೆಯನ್ನು ಒಳಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ