Martin Movie: ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರದ ಹೆಸರು ಏನು? ಮಾರ್ಟಿನ್ ಯಾರು?

ಮಾರ್ಟಿನ್ ಸಿನಿಮಾದ ಕತೆಯೇನು? ಸಿನಿಮಾದಲ್ಲಿ ಧ್ರುವ ಸರ್ಜಾ ಹೆಸರೇನು? ಮಾರ್ಟಿನ್ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಧ್ರುವ ಸರ್ಜಾ ಉತ್ತರಿಸಿದ್ದಾರೆ.

Martin Movie: ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರದ ಹೆಸರು ಏನು? ಮಾರ್ಟಿನ್ ಯಾರು?
ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ
Follow us
ಮಂಜುನಾಥ ಸಿ.
|

Updated on: Feb 23, 2023 | 7:49 PM

ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ಟೀಸರ್ (Teaser) ಇಂದಷ್ಟೆ (ಫೆಬ್ರವರಿ 23) ಬಿಡುಗಡೆ ಆಗಿದೆ. ಮೊದಲಿಗೆ ಅಭಿಮಾನಿಗಳೆದುರು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಟೀಸರ್ ಅನ್ನು ಸಂಜೆ ನಡೆದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡಲಾಗಿದೆ.

ಟೀಸರ್ ನೋಡಿದವರು ಧ್ರುವ ಸರ್ಜಾರ ಕಟ್ಟುಮಸ್ತು ಮೈಕಟ್ಟು, ಭರ್ಜರಿ ಆಕ್ಷನ್ ದೃಶ್ಯಗಳು, ಅಬ್ಬರದ ಸಂಗೀತ ಕೇಳಿ ಥ್ರಿಲ್ ಆಗಿರುವ ಜೊತೆಗೆ ಕತೆಯ ಬಗ್ಗೆ ಟೀಸರ್ ಬಿಟ್ಟುಕೊಟ್ಟಿರುವ ಕೆಲವು ಸುಳಿವುಗಳಿಂದ ಗೊಂದಲಕ್ಕೂ ಸಹ ಒಳಗಾಗಿದ್ದಾರೆ.

ಟೀಸರ್​ನ ಆರಂಭದಲ್ಲಿಯೇ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿರುತ್ತಾನೆ. ಅಲ್ಲಿ ದುಷ್ಟರೊಟ್ಟಿಗೆ ಭರ್ಜರಿ ಫೈಟ್​ಗಳು ಸಹ ನಡೆಯುತ್ತವೆ. ಆ ಬಳಿಕ ಹಲವು ಆಕ್ಷನ್ ದೃಶ್ಯಗಳು ಭಾರತದಲ್ಲಿ ನಡೆಯುತ್ತವೆ, ಧ್ರುವ ಸರ್ಜಾ ವಿಲನ್ ರೀತಿಯಾಗಿಯೂ ಕೆಲವು ದೃಶ್ಯಗಳಲ್ಲಿ ಕಾಣಿಸುತ್ತಾರೆ.

ಆರಂಭದ ದೃಶ್ಯ ನೋಡಿದವರು ಮಾರ್ಟಿನ್ ದೇಶಪ್ರೇಮ ಉದ್ದೀಪಿಸುವ ಸಿನಿಮಾ ಎಂಬ ಭಾವ ಮೂಡುತ್ತದೆ. ನಾಯಕ ಸೈನಿಕನಾಗಿರಬಹುದು ಎಂಬ ಅನುಮಾನವೂ ಕಾಡುತ್ತದೆ. ಆದರೆ ಆ ನಂತರ ಅದೆಲ್ಲ ಸುಳ್ಳಾಗುತ್ತದೆ. ಹಾಗಿದ್ದರೆ ಸಿನಿಮಾದ ಕತೆ ಏನು? ಈ ಸಿನಿಮಾ ದೇಶಪ್ರೇಮಕ್ಕೆ ಸಂಬಂಧಿಸಿದ ಕತೆ ಒಳಗೊಂಡಿದೆಯೇ? ಸ್ವತಃ ಧ್ರುವ ಸರ್ಜಾ ನೀಡಿದ್ದಾರೆ ಉತ್ತರ.

Martin Teaser: ಬಂದ ಮಹಾನ್ ಕ್ರೂರಿ ಮಾರ್ಟಿನ್, ಆಕ್ಷನ್ ತುಂಬಿದ ಟೀಸರ್​ನಲ್ಲಿ ಅಬ್ಬರಿಸಿದ ಧ್ರುವ ಸರ್ಜಾ

ಟೀಸರ್ ಲಾಂಚ್ ಇವೆಂಟ್​ನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಧ್ರುವ ಸರ್ಜಾ, ಈ ಸಿನಿಮಾದಲ್ಲಿ ದೇಶಪ್ರೇಮದ ಒಂದೆಳೆ ಖಂಡಿತ ಇದೆ ಹಾಗೆಂದು ಇಡೀಯ ಸಿನಿಮಾ ದೇಶಪ್ರೇಮದ ವಿಷಯದ ಮೇಲೆಯೇ ಆಧಾರವಾಗಿಲ್ಲ ಎಂದಿದ್ದಾರೆ. ಮಾತ್ರವಲ್ಲ ಈ ಸಿನಿಮಾದಲ್ಲಿ ನಾಯಕನ ಹೆಸರು ಅಂದರೆ ಧ್ರುವ ಸರ್ಜಾ ಹೆಸರು ಸಹ ಮಾರ್ಟಿನ್ ಅಲ್ಲವಂತೆ!

ಸಿನಿಮಾದಲ್ಲಿ ನನ್ನ ಹೆಸರು ಅರ್ಜುನ್, ನನ್ನ ಹೆಸರು ಮಾರ್ಟಿನ್ ಅಲ್ಲ. ಹಾಗಿದ್ದರೆ ಯಾರು ಮಾರ್ಟಿನ್ ಎಂಬುದೇ ಸಿನಿಮಾದ ಕತೆ ಎಂದು ಕುತೂಹಲ ಮೂಡಿಸಿದ್ದಾರೆ ಧ್ರುವ ಸರ್ಜಾ.

ಮಾರ್ಟಿನ್ ಸಿನಿಮಾಕ್ಕೆ ನಟ ಅರ್ಜುನ್ ಸರ್ಜಾ ಕತೆ ಬರೆದಿದ್ದಾರೆ. ನಿರ್ದೇಶನ ಮಾಡಿರುವುದು ಎಪಿ ಅರ್ಜುನ್, ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಜೋಡಿಗೆ ಇದು ಎರಡನೇ ಸಿನಿಮಾ. ಪ್ರೇಮಕತಾ ಸಿನಿಮಾಗಳನ್ನು ಮಾಡುತ್ತಿದ್ದ ಎಪಿ ಅರ್ಜುನ್ ಮಾರ್ಟಿನ್ ಮೂಲಕ ಆಕ್ಷನ್ ಸಿನಿಮಾಗಳತ್ತ ಹೊರಳಿದ್ದಾರೆ. ಸಿನಿಮಾದ ಆಕ್ಷನ್ ದೃಶ್ಯಗಳನ್ನು ರಾಮ್-ಲಕ್ಷ್ಮಣ್ ಸಂಯೋಜಿಸಿದ್ದಾರೆ. ಸಂಗೀತ ನೀಡಿರುವುದು ರವಿ ಬಸ್ರೂರು.

ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು