‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’; ‘ಅಪ್ಪು ದೇವರ ಮಾಲೆ’ ಬಗ್ಗೆ ನಟ ಪ್ರಥಮ್ ಅಸಮಾಧಾನ

Puneeth Rajkumar: ಪುನೀತ್ ರಾಜ್​ಕುಮಾರ್ ಅವರನ್ನು ಅಭಿಮಾನಿಗಳು ಅಕ್ಷರಶಃ ಆರಾಧಿಸುತ್ತಿದ್ದಾರೆ. ಅಪ್ಪು ನಿಧನ ಹೊಂದಿದ ನಂತರದಲ್ಲಿ ಅನೇಕರು ದೇವರ ಕೋಣೆಯಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಇದೆ. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’; ‘ಅಪ್ಪು ದೇವರ ಮಾಲೆ’ ಬಗ್ಗೆ ನಟ ಪ್ರಥಮ್ ಅಸಮಾಧಾನ
ಪ್ರಥಮ್-ಪುನೀತ್
Follow us
ರಾಜೇಶ್ ದುಗ್ಗುಮನೆ
|

Updated on:Feb 24, 2023 | 7:19 AM

‘ಅಪ್ಪು ದೇವರ ಮಾಲೆ’ ಆಚರಣೆಯನ್ನು ಜಾರಿಗೆ ತರುವ ವಿಚಾರವನ್ನು ಪುನೀತ್ ರಾಜ್​ಕುಮಾರ್ (Puneeth Rajkumar) ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ್ದರು. ಅಯ್ಯಪ್ಪನ ಹೆಸರಲ್ಲಿ ಮಾಲೆ ಹಾಕಿಕೊಂಡಂತೆ ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಮಾಲೆ ಹಾಕಿಕೊಳ್ಳಲಾಗುತ್ತಿದೆ. ಮಾಲೆ ಹಾಕಿಕೊಂಡವರು ಹಲವು ಬಗೆಯ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಮಾರ್ಚ್​1ರಿಂದ ಆರಂಭ ಆಗುವ ಈ ಆಚರಣೆ ಪುನೀತ್ ರಾಜ್​ಕುಮಾರ್ ಜನ್ಮದಿನ ಮಾರ್ಚ್​ 17ಕ್ಕೆ ಕೊನೆಗೊಳ್ಳಲಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಒಳ್ಳೆ ಹುಡುಗ ಪ್ರಥಮ್ ಕೂಡ ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’ ಎಂದು ಕೋರಿದ್ದಾರೆ.

ಪುನೀತ್​ನ ಆರಾಧಿಸುತ್ತಿರುವ ಅಭಿಮಾನಿಗಳು

ಪುನೀತ್ ರಾಜ್​ಕುಮಾರ್ ಅವರನ್ನು ಅಭಿಮಾನಿಗಳು ಅಕ್ಷರಶಃ ಆರಾಧಿಸುತ್ತಿದ್ದಾರೆ. ಅಪ್ಪು ನಿಧನ ಹೊಂದಿದ ನಂತರದಲ್ಲಿ ಅನೇಕರು ದೇವರ ಕೋಣೆಯಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಇದೆ. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೊಸಪೇಟೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪ್ರತಿಮೆ ಇದೆ. ಹೊಸಪೇಟೆಯ ಅಪ್ಪು ಅಭಿಮಾನಿಗಳ ಸಂಘದವರು ಈ ಮಾಲೆ ಧರಿಸುತ್ತಿದ್ದಾರೆ. ಮಾರ್ಚ್​ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್​ 17ರ ತನಕ ವ್ರತ ಆಚರಿಸಬೇಕು. ಮಾರ್ಚ್​ 18ರಂದು ಪುನೀತ್​ ರಾಜ್​ಕುಮಾರ್​ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಬೇಕು. ಇದಕ್ಕೆ ಸಂಬಂಧಿಸಿದ ಕರಪತ್ರ ಒಂದು ವೈರಲ್ ಆಗಿತ್ತು. ಇದನ್ನು ಕೆಲವರು ವಿರೋಧಿಸಿದ್ದಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ಪ್ರಥಮ್ ಹೇಳಿದ್ದೇನು?

‘ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ. ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು-ದೇವರೇ, ಕಲಾವಿದರು-ಕಲಾವಿದರೇ’ ಎಂದು ಪ್ರಥಮ್ ಅವರು ಬರೆದುಕೊಂಡಿದ್ದಾರೆ.

ಇದನ್ನು ಅನೇಕರು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಅಪ್ಪು ನಮಗೆ ದೇವರೇ ಎಂದಿದ್ದಾರೆ. ‘ಹಸಿದಾಗ ಅನ್ನ ಹಾಕಿದಾವನೇ ದೇವರು. ಕಷ್ಟ ಅಂತ ಬಂದಾಗ ಸಹಾಯ ಮಾಡುವನೇ ದೇವರು. ಈ ಕೆಲಸ ಅಪ್ಪು ಅವರು ಮಾಡಿದ್ದಾರೆ. ಅದಕ್ಕೆ ಜನರು ದೇವರು ತರ ಪೂಜೆ ಮಾಡುತ್ತಾ ಇದ್ದಾರೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:17 am, Fri, 24 February 23

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ